ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರ ಕುತ್ತಿಗೆಯ ಮೇಲೆ ರೋಮನ್​ ಸಂಖ್ಯೆಯ 14 ಎಂದು ಬರೆಯಲಾಗಿದೆ. ಏನಿದರ ಔಚಿತ್ಯ? ಸುವರ್ಣ ನ್ಯೂಸ್​ಗೆ ಅವರು ಕೊಟ್ಟಿರೋ ಸಂದರ್ಶನದಲ್ಲಿ ಏನು ಹೇಳಿದ್ದಾರೆ ನೋಡಿ... 

ನಟ, ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರ ಕುತ್ತಿಗೆಯ ಮೇಲೆ ರೋಮನ್​ ಸಂಖ್ಯೆಯ 14 ಎಂದು ಬರೆಯಲಾಗಿದೆ. ಇದರ ಹಿಂದೆ ದೊಡ್ಡ ಗುಟ್ಟೇ ಇದೆ. ಈ ಬಗ್ಗೆ ನಟ ಸುವರ್ಣ ನ್ಯೂಸ್​ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಏನಿದು 14 ಎಂದು ಕೇಳಿದಾಗ, ಆರಂಭದಲ್ಲಿ ಚಂದನ್​ ಶೆಟ್ಟಿ ಅವರು ನಮ್ಮ ತಂದೆ-ತಾಯಿಗೆ 14 ಮಂದಿ ಮಕ್ಕಳು. ನಾನು 14ನೇಯವನು. ಎಲ್ಲಾ ಮಕ್ಕಳಿಗೂ ಹೀಗೆ 1,2,3 ಎಂದು ಬರೆಸಿದ್ದಾರೆ ಎಂದರು. ಅದು ಸೀರಿಯಸ್​ ಆಗಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಚಂದನ್​ ಶೆಟ್ಟಿ ಅವರು, ತಮಾಷೆಗೆ ಹೇಳಿದೆ ಎನ್ನುತ್ತಲೇ ಆ ಸಂಖ್ಯೆಯ ಗುಟ್ಟನ್ನು ರಿವೀಲ್​ ಮಾಡಿದ್ದಾರೆ.

ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ 14 ತಮ್ಮ ಲಕ್ಕಿ ನಂಬರ್​ ಎನ್ನುವುದು. ಹಲವಾರು ಮಂದಿ ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಅದೇ ಪ್ರಕಾರ, ಚಂದನ್​ ಶೆಟ್ಟಿ ಅವರೂ 14ನೇ ನಂಬರ್​ ಅನ್ನು ಚಿಕ್ಕ ವಯಸ್ಸಿನಿಂದಲೂ ಲಕ್ಕಿ ನಂಬರ್​ ಎಂದು ನಂಬುತ್ತಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಕೊಟ್ಟಿದ್ದಾರೆ. ಸ್ಕೂಲ್​ ಡೇಸ್​ನಲ್ಲಿ ಹೋಗುವಾಗಲೇ ಒಂದು ದಿನ ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ ಅದ್ಯಾಕೋ 14ನೇ ನಂಬರ್​ ಎಂದು ಹೇಳುತ್ತಿದ್ದರಂತೆ. ಅದ್ಯಾಕೆ ಆ ನಂಬರ್​ ಬಾಯಲ್ಲಿ ಬಂತೋ ಗೊತ್ತಿಲ್ಲ. ಆದರೆ ಅಂದಿನಿಂದ ಇಂದಿನವರೆಗೂ ಆ ನಂಬರ್​ ನನಗೆ ಲಕ್​ ತಂದುಕೊಡುತ್ತಿದೆ ಎಂದಿದ್ದಾರೆ. ಬಿಗ್​ಬಾಸ್​ನಲ್ಲಿ ತಮಗೆ ಕರೆ ಬಂದದ್ದೂ 14ನೇ ತಾರೀಖಿನಂದೇ ಆಗಿತ್ತು. ಅಲ್ಲಿ ವಿನ್​ ಆಗಿ ಬಂದೆ. ಹೀಗೆ ಜೀವನದಲ್ಲಿ ಹಲವಾರು ರೀತಿಯ ಲಕ್ಕಿ ದಿನ ಎಂದು ಇದು ಸಾಬೀತಾಗಿದೆ ಎಂದಿದ್ದಾರೆ.

ಇಂದು ಚಂದನ್​ ಶೆಟ್ಟಿ ಅವರ ಸಿನಿಮಾದ ಕುರಿತು ಹೇಳುವುದಾದರೆ, ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್​ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್​ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್​ಬ್ಯಾಕ್​ ಆಗಿದ್ದು ನೋಡಿ ಫ್ಯಾನ್ಸ್​ಗೆ ಸಕತ್​ ಖುಷಿಯಾಗಿದೆ. ನಿವೇದಿತಾ ಅವರು ದಿನದಿಂದ ದಿನಕ್ಕೆ ಹಾಟ್​ ಆಗಿ ಕಾಣಿಸಿಕೊಂಡು ರೀಲ್ಸ್​ ಮಾಡುತ್ತಾ ನೆಗೆಟಿವ್​ ಕಮೆಂಟ್ಸ್​ಗಳನ್ನು ಎಂಜಾಯ್​ ಮಾಡುತ್ತಿದ್ದರೆ, ಇತ್ತ ಚಂದನ್​ ಶೆಟ್ಟಿ ತಮ್ಮ ಕರಿಯರ್​ನಲ್ಲಿ ಮುಂದುವರೆಯುತ್ತಿರುವ ಜೊತೆಗೆ ಈಗ ಮತ್ತೊಂದು ಮದ್ವೆಗೂ ಸಿದ್ಧರಾಗಿರುವುದಾಗಿ ಈಚೆಗಷ್ಟೇ ಹೇಳಿಕೊಂಡಿದ್ದರು. ಇವೆಲ್ಲವುಗಳ ಹೊರತಾಗಿಯೂ ಇವರಿಬ್ಬರೂ ಬೇರೆ ಬೇರೆ ಆಗಿದ್ದು ಏಕೆ ಎನ್ನುವ ಬಗ್ಗೆ ಇದುವರೆಗೂ ಅಭಿಮಾನಿಗಳಿಗೆ ತಿಳಿದಿಲ್ಲ. ಅದನ್ನು ಈ ಜೋಡಿ ಎಂದಿಗೂ ರಿವೀಲ್​ ಕೂಡ ಮಾಡಲಿಲ್ಲ.

ಇದೀಗ, ಸುವರ್ಣ ಚಾನೆಲ್​ಗೆ ಎಕ್ಸ್​ಕ್ಯೂಸಿವ್​ ಆಗಿ ಚಂದನ್​ ಶೆಟ್ಟಿ ಮಾತನಾಡಿದ್ದಾರೆ. ಇದರಲ್ಲಿ ತಮ್ಮ ಬದುಕಿನ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಚಂದನ್​ ಶೆಟ್ಟಿ ಮತ್ತು ನಿವೇದಿತಾ ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ರೆ ನೂರಾರು ಚೆಂದದ ವಿಡಿಯೋಗಳು ಕಾಣಿಸುತ್ತವೆ, ಇಷ್ಟು ಖುಷಿಯಾಗಿದ್ದ ದಂಪತಿ ಏಕೆ ಬೇರೆಯಾದ್ರು ಎನ್ನೋದೇ ಎಲ್ಲರಿಗೂ ವಿಚಿತ್ರವಾಗಿದೆ ಎಂದಾಗ ಚಂದನ್​ ಶೆಟ್ಟಿ ಅವರು, ನಮ್ಮ ಸಂತೋಷ ಆ ವಿಡಿಯೋಗಷ್ಟೇ ಸೀಮಿತ ಆಗಿತ್ತು ಎಂದಿದ್ದಾರೆ. ಇದರ ಅರ್ಥ ಇವರಿಬ್ಬರ ಲೈಫ್​ನಲ್ಲಿ ಮೊದಲಿನಿಂದಲೂ ಅಸಮಾಧಾನ ಇತ್ತು, ಆದರೂ ಚಂದನ್​ ಶೆಟ್ಟಿ ಅವರು ನಾಲ್ಕು ವರ್ಷ ಹ್ಯಾಂಡಲ್ ಮಾಡುತ್ತಾ ಬಂದಿದ್ದರು ಎನ್ನುವುದು ತಿಳಿಯುತ್ತಿದೆ. ಇಂದಿಗೂ ಚೆಲ್ಲುಚೆಲ್ಲಾಗಿ ವರ್ತಿಸುವ ನಿವೇದಿತಾ ಗೌಡ ಅವರನ್ನು ಚಂದನ್​ ಶೆಟ್ಟಿ ನಾಲ್ಕು ವರ್ಷ ಎಷ್ಟು ಕಷ್ಟಪಟ್ಟು ಹ್ಯಾಂಡಲ್​ ಮಾಡಿರಬಹುದು ಎಂದು ಸದಾ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿರುತ್ತದೆ.

View post on Instagram