ಥಾಯ್ಲೆಂಡ್​ನಲ್ಲಿಯೂ ನಿವೇದಿತಾ ಗೌಡ ಹವಾ ಜೋರಾಗಿದ್ದು, ಅಲ್ಲಿಯೂ ಸಂದರ್ಶನ ಮಾಡಲಾಗಿದೆ. ಆದರೆ ವಿದೇಶಿಗರಿಂದಲೂ ಈಕೆ ಟ್ರೋಲ್​ಗೆ ಒಳಗಾಗಿದ್ದು ಮಾತ್ರ ವಿಪರ್ಯಾಸ. ಏನಿದು ನೋಡಿ!

ಬಿಗ್​ಬಾಸ್​ನ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದ್ದ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದು ಮದ್ವೆಯಾಗಿ, ಈಗ ಮಾಜಿಗಳಾಗಿರುವುದು ಗೊತ್ತಿರುವ ವಿಷಯವೇ. ಅತ್ತ ಚಂದನ್​ ಶೆಟ್ಟಿ ತಮ್ಮ ಆಲ್ಬಂ, ಸಿನಿಮಾ ಅಂತೆಲ್ಲಾ ಬಿಜಿಯಾಗಿದ್ದರೆ, ಇತ್ತ ನಿವೇದಿತಾ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ದಿನನಿತ್ಯವೂ ರೀಲ್ಸ್​ ಮಾಡುವಲ್ಲಿ ಬಿಜಿಯಾಗಿದ್ದಾರೆ. ಒಮ್ಮೆ ಮಂಚದ ಮೇಲೆ, ಮತ್ತೊಮ್ಮೆ ಬಾತ್​ರೂಮ್​ನಲ್ಲಿ... ಹೀಗೆ ರೀಲ್ಸ್​ ಮಾಡುತ್ತಾ ತುಂಡುಡುಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಚೆಗೆ ನಟಿ ಬಟ್ಟೆ ಮಳಿಗೆಯೊಂದರ ಉದ್ಘಾಟನೆಯಲ್ಲಿ ಕಾಣಿಸಿಕೊಂಡು ತುಂಡುಡುಗೆ ತೊಟ್ಟು ಟ್ರೋಲ್​ ಆಗಿದ್ದರು.

ಇಂತಿಪ್ಪ ನಟಿ ಕೆಲ ತಿಂಗಳ ಹಿಂದೆ ಶ್ರೀಲಂಕಾದ ಜೂಜು ಅಡ್ಡೆಗೆ ಹೋಗಿ ಬಂದಿದ್ದರು. ಅಲ್ಲಿಯ ಕಾರ್ಯಕ್ರಮವೊಂದರಲ್ಲಿ ಈಕೆಯನ್ನು ಆಹ್ವಾನಿಸಲಾಗಿತ್ತು. ಆದರೆ ಇದೀಗ ನಟಿ, ಥಾಯ್ಲೆಂಡ್​ಗೆ ಹೋಗಿದ್ದಾರೆ. ಅದರ ವಿಡಿಯೋ ಅನ್ನು ದಿಜೇಕೋಬ್ಜ್ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. ನಿಮ್ಮ ಹೆಸರೇನು? ಇಲ್ಲಿ ಯಾವ ಜಾಗ ಇಷ್ಟ ಎಂದೆಲ್ಲಾ ಆತ ನಿವೇದಿತಾರನ್ನು ಕೇಳಿದ್ದಾನೆ. ಅದಕ್ಕೆ ನಿವೇದಿತಾ, ನನ್ನ ಹೆಸರು ನಿವೇದಿತಾ, ಭಾರತದವಳು ಎನ್ನುತ್ತಲೇ ಥಾಯ್ಲೆಂಡ್​ನಲ್ಲಿ ತಮಗೆ ಯಾವ ಜಾಗ ಇಷ್ಟ ಎಂದು ಹೇಳಿದ್ದಾರೆ. ಇದು ಎರಡನೆಯ ಬಾರಿ ನಾನು ಇಲ್ಲಿಗೆ ಬರುತ್ತಿರುವುದು ಎನ್ನುತ್ತಲೇ ಇಲ್ಲಿಯ ಬೀಚ್​ ಸೇರಿದಂತೆ ಕೆಲವೊಂದು ಸ್ಥಳಗಳ ಹೆಸರನ್ನು ಹೇಳಿದ್ದಾರೆ.

ಈ ವಿಡಿಯೋ ವೈರಲ್​ ಆಗುತ್ತಲೇ ಕೆಲವರು ನಿಮ್ಮಂಥವರಿಂದಲೇ ನಮ್ಮ ದೇಶದ ಬೀಚ್​ ಹಾಳಾಗ್ತಿದೆ ಎಂದಿದ್ದರೆ, ಮತ್ತೊಬ್ಬ ನಮ್ಮ ಬಾರ್​ಗೆ ಮಾತ್ರ ಬರಬೇಡ ಎಂದಿದ್ದಾನೆ. ನಾನು ಥಾಯ್ಲೆಂಡ್​ನಲ್ಲಿ ಬಾರ್‌ಗಳನ್ನು ಹೊಂದಿದ್ದೇನೆ. ಅಲ್ಲಿ ಭಾರತೀಯರಿಗೆ ಎಂಟ್ರಿ ಇಲ್ಲ ಎಂದು ಬರೆದಿದ್ದೇನೆ. ಆದ್ದರಿಂದ ಅಲ್ಲಿಗೆ ಬರಬೇಡಿ ಎಂದಿರೋ ಆತ, ಸಿಂಗಪುರದವರಾಗಿ ನಾವು ಆಗ್ನೇಯ ಏಷ್ಯಾವನ್ನು ಭಾರತದಿಂದ ರಕ್ಷಿಸುತ್ತೇವೆ ಮತ್ತು ನಿಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಭಾರತವು ಹಾಳು ಮಾಡದಂತೆ ನೋಡಿಕೊಳ್ಳಲು ಎಲ್ಲವನ್ನೂ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾನೆ. ಭಾರತದವರು ಬಂದರೆ ತಮ್ಮ ಸಂಸ್ಕೃತಿ ಹಾಳು ಆಗುತ್ತೆ ಎಂದು ಆತ ಬರೆದುಕೊಂಡಿರುವ ಹಿಂದಿನ ಅರ್ಥ ಮಾತ್ರ ಆತನೇ ಬಲ್ಲ. ಆದರೆ ನಿವೇದಿತಾ ಗೌಡ ಅವರ ಈ ವಿಡಿಯೋದಲ್ಲಿಯೂ ಆತ ಬಾರ್​ಗೆ ಬರದಂತೆ ಈ ಮೂಲಕ ತಾಕೀತು ಮಾಡಿದ್ದಾನೆ!

ಮತ್ತೆ ಕೆಲವರು, ವಿದೇಶಗಳಲ್ಲಿ ಮೆಚ್ಯೂರ್​ ಆಗಿ ಮಾತನಾಡುವ ಈಕೆ, ಕರ್ನಾಟಕದಲ್ಲಿ ಮಾತ್ರ ಚೆಲ್ಲುಚೆಲ್ಲಾಗಿ ಮಾತನಾಡೋದು ಏಕೆ ಎಂದು ಪ್ರಶ್ನಿಸಿದ್ದಾರೆ. ವಿದೇಶದ ಕೆಲವರು ಈಕೆಯ ಹೆಸರಿನ ಬಗ್ಗೆ ಚರ್ಚಿಸುತ್ತಿದ್ದಾರೆ, ಅನಿವೇದಿತಾನೋ, ನಿವೇದಿತಾನೋ ಎಂದೆಲ್ಲಾ ಚರ್ಚೆ ಶುರುಮಾಡಿಕೊಂಡಿದ್ದಾರೆ. ಒಬ್ಬಾತ ಈಕೆ ಕರ್ನಾಟಕದ ಕ್ವೀನ್​ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾನೆ. ಒಟ್ಟಿನಲ್ಲಿ ನಿವೇದಿತಾ ವಿದೇಶಕ್ಕೆ ಹೋದರೂ ಫೇಮಸ್​ ಆಗುತ್ತಿದ್ದಾರೆ ಎನ್ನುವುದು ಮಾತ್ರ ಸುಳ್ಳಲ್ಲ! ಅಷ್ಟಕ್ಕೂ ಟ್ರೋಲ್​ನಿಂದಲೇ ಫೇಮಸ್​ ಆಗುವುದು ಎನ್ನುವುದು ನಿವೇದಿತಾಳಂಥ ಹಲವು ರೀಲ್ಸ್​ ಪ್ರಿಯರಿಗೆ ತಿಳಿದಿರುವ ಕಾರಣದಿಂದಲೇ ಅಶ್ಲೀಲತೆಯಿಂದಲೇ ಫೇಮಸ್​ ಆಗಲು ನೋಡುತ್ತಿದ್ದಾರೆ ಎನ್ನುವುದೂ ನಿಜವೇ ಬಿಡಿ. ಅದೇ ರೀತಿ ಅವರನ್ನು ಬೈದುಕೊಳ್ಳುತ್ತಲೇ ಅವರ ರೀಲ್ಸ್​ ಸವಿಯುವ ದೊಡ್ಡ ವರ್ಗವೇ ಇದೆ. ಒಟ್ಟಿನಲ್ಲಿ ನಿವೇದಿತಾ ಏನೇ ಮಾಡಿದರೂ ಟ್ರೋಲ್​ ಮಾಡಲು ಕಾಯುತ್ತಿರುವವರಿಗೆ ಇದು ಒಳ್ಳೆಯ ಆಹಾರ ಒದಗಿಸಿದೆ. ಅಷ್ಟಕ್ಕೂ ಟ್ರೋಲ್​ನಿಂದಲೇ ಫೇಮಸ್​ ಆಗುವುದು ಎನ್ನುವುದು ನಿವೇದಿತಾಳಂಥ ಹಲವು ರೀಲ್ಸ್​ ಪ್ರಿಯರಿಗೆ ತಿಳಿದಿರುವ ಕಾರಣದಿಂದಲೇ ಅಶ್ಲೀಲತೆಯಿಂದಲೇ ಫೇಮಸ್​ ಆಗಲು ನೋಡುತ್ತಿದ್ದಾರೆ ಎನ್ನುವುದೂ ನಿಜವೇ ಬಿಡಿ. ಅದೇ ರೀತಿ ಅವರನ್ನು ಬೈದುಕೊಳ್ಳುತ್ತಲೇ ಅವರ ರೀಲ್ಸ್​ ಸವಿಯುವ ದೊಡ್ಡ ವರ್ಗವೇ ಇದೆ.

View post on Instagram