ಜೂನಿಯರ್ ರೆಬೆಲ್ ಸ್ಟಾರ್ ಅಭಿನಯದ 'ಅಮರ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಶೂಟಿಂಗ್‌ನಲ್ಲಿ ದರ್ಶನ್ ಭಾಗಿಯಾದ ವೀಡಿಯೋ ಹಾಗೂ ಫೋಟೋವನ್ನು ಅಭಿಷೇಕ್ ತಮ್ಮ ಇನ್‌ಸ್ಟ್ರಾಗ್ರಾಂ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'ಅಮರ್' ಚಿತ್ರದ ಮುಹೂರ್ತ ವೇಳೆ ದರ್ಶನ್ ಕಾಣಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. 'ಯಜಮಾನ' ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ದರ್ಶನ್ ಟ್ವೀಟ್ ಮಾಡಿ ವಿಶ್ ಮಾಡಿದರು. ಆದರೆ, 'ಅಮರ್' ಚಿತ್ರದಲ್ಲಿ ಅವರು ನಟಿಸುತ್ತಾರಾ ಎಂಬ ಸುದ್ದಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಈ ಗಾಳಿ ಸುದ್ದಿಗೆ ಸೂಕ್ತ ಉತ್ತರ ಸಿಕ್ಕಿದ್ದು, ಈ ಚಿತ್ರದಲ್ಲಿ ದಾಸ ಕಾಣಿಸಿಕೊಳ್ಳುವುದೀಗ ಖಾತರಿಯಾಗಿದೆ.

ದರ್ಶನ್ 'ನನ್ನ ದೊಡ್ಡ ಮಗ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಅಂಬಿ. ಇದೀಗ ಈ ಇಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಸ್ಯಾಂಡಲ್‌ವುಡ್‌ಗೆ ತುಂಬಾ ಸ್ಪೆಷಲ್.

ಅಂಬಿ ಮಾತೆಂದರೆ ವೇದ ವಾಕ್ಯವೆಂದು ಪಾಲಿಸುತ್ತಿದ್ದ ದರ್ಶನ್, ಯಾವುದೇ ಕೆಲಸ ಶುರು ಮಾಡೋ ಮುನ್ನ ಅಂಬರೀಶ್‌ಗೆ ತಿಳಿಸದೇ ಮುಂದೆ ಹೆಜ್ಜೆ ಇಡುತ್ತಿರಲಿಲ್ಲ. ಅಂಬಿ ಸಾವಿನ ನಂತರವೂ ಯಾವುದೇ ಕೆಲಸವಿದ್ದರೂ, ರೆಬೆಲ್ ಸ್ಟಾರ್ ಸಮಾಧಿಗೆ ನಮಸ್ಕರಿಸಿ, ಮುಂದಿನ ಹೆಜ್ಜೆ ಇಡೋ ಪರಿಪಾಠ ಬೆಳೆಯಿಸಿಕೊಂಡಿದ್ದಾರಂತೆ ಡಿ ಬಾಸ್.