ಬೆಂಗಳೂರು (ಫೆ. 03): ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಿದ್ದು ಅದನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.  

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಜಾರ್ ನಟನಿಗೆ ಪ್ರಾಂಕ್!

ಚಾಲೆಂಜಿಂಗ್ ಸ್ಟಾರ್ ಹಾದಿಯಲ್ಲೇ ಸಾಗಲು ದಚ್ಚು ಫ್ಯಾನ್ಸ್ ಮುಂದಾಗಿದ್ದಾರೆ.  ಹುಟ್ಟುಹಬ್ಬದಂದು ತಮ್ಮ ಕೈಲಾದಷ್ಟರ ಮಟ್ಟಿಗೆ ದವಸ ಧಾನ್ಯಗಳನ್ನು ದರ್ಶನ್ ಗೆ ಉಡುಗೊರೆಯಾಗಿ ನೀಡಲಿದ್ದಾರೆ.

ತೆಲುಗು ಕಿರುತೆರೆಗೆ ಹಾರಿದ ಕನ್ನಡದ ನಟ! 

ಬರ್ತಡೇ ದಿನದಂದು ಸಂಗ್ರಹಿಸಿದ ‌ಅಕ್ಕಿ.‌ಎಣ್ಣೆ ಸಕ್ಕರೆ ಹಾಗೂ ಇತರೆ ಪದಾರ್ಥಗಳನ್ನು ದರ್ಶನ್ ಅವರಿಂದಲೇ ಅನಾಥಾಶ್ರಮ ಹಾಗೂ ಮಠಗಳಿಗೆ ಕೊಡಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.  ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.