ಬಿಗ್‌ಬಾಸ್ ಖ್ಯಾತಿಯ ಚಂದನ್ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮೊದಲು ಮಾಡಿದ ಚಿತ್ರ 'ಲವ್ ಯು ಆಲಿಯಾ' , ಇದರಲ್ಲಿ ಮಾದಕ ತಾರೆ ಸನ್ನಿ ಲಿಯೋನ್ ನೊಂದಿಗೆ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ರು.

ಇನ್ನು ಕಿರುತೆರೆ ವಿಚಾರದಲ್ಲಿ ಚಂದನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ’ಲಕ್ಷ್ಮೀ ಬಾರಮ್ಮ’ ಸೀರಿಯಲ್ ಮಾಡಿದ್ದು ಇದಾದ ನಂತರ ಸದ್ಯಕ್ಕೆ ’ಸರ್ವಮಂಗಳ ಮಾಂಗಲ್ಯ’ ಧಾರವಾಹಿಯಲ್ಲಿ ಮಾಡುತ್ತಿದ್ದಾರೆ.

ಈಗ ತಮಿಳು ಕಿರುತೆರೆಯಲ್ಲಿ ಮೂಡಿ ಬರಲಿರುವ ’ಸಾವಿತ್ರಮ್ಮಗಾರೂ ಅಬ್ಬಿ’ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಹೆಸರು ಬಾಲ್ರಾಜ್. ಬಲಶಾಲಿ ಕುಸ್ತಿಪಟೂ ಆದರೂ ಹುಡುಗಿಯರನ್ನು ಕಂಡರೆ ಮಾರು ದೂರ ಓಡುವ ಹುಡುಗನ ಪಾತ್ರ. ಇದರ ಬಗ್ಗೆ ಚಂದನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Here is the new Promo of my new flick.. Pls do watch share and promote.. #savithrammagaruabbayi #starmaa #teluguserial

A post shared by CHANDAN KUMAR 🇮🇳 (@chandan_kumar_official) on Jan 31, 2019 at 9:06pm PST