ಸಾಯಿ ಪಲ್ಲವಿ ವಿರುದ್ಧ ಕೇಸ್, 'ವಿರಾಟಪರ್ವಂ' ಬಾಯ್ಕಾಟ್ ಮಾಡಲು ಒತ್ತಾಯ!

ಗೋ ರಕ್ಷಕರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ದಕ್ಷಿಣ ಭಾರತದ ಸುಪ್ರಸಿದ್ಧ ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್‌ನಲ್ಲಿ ಭಜರಂಗದಳ ಕಾರ್ಯಕರ್ತ ಅಖಿಲ್ ಎನ್ನುವವರಿಂದ ದೂರು ದಾಖಲಾಗಿದೆ. ಅದರ ನಡುವೆ ಆಕೆಯ ನಟನೆಯ ವಿರಾಟಪರ್ವಂ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಹಿಂದೂಪರ ಸಂಘಟನೆಗಳು ಒತ್ತಾಯ ಮಾಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಇದು ಟ್ರೆಂಡ್ ಆಗಿದೆ.

case against actress Sai Pallavi derogatory comments against Hindus and Kashmiri Pandits Boycott Virata Parvam Trends san

ಹೈದರಾಬಾದ್ (ಜೂನ್ 17): ಯೂಟ್ಯೂಬ್ ಚಾನೆಲ್‌ಗೆ (Youtube Channel) ನೀಡಿದ್ದ ಸಂದರ್ಶನದಲ್ಲಿ ಹಿಂದುಗಳು (Hindu) ಹಾಗೂ ಕಾಶ್ಮೀರಿ ಪಂಡಿತರ (Kashmiri Pandits) ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಸಾಯಿ ಪಲ್ಲವಿ (South India actress  Sai Pallavi) ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಾಗಿದೆ. ಭಜರಂಗದಳ ಕಾರ್ಯಕರ್ತ ಅಖಿಲ್ (Bajrang Dal activist Akhil ) ಎನ್ನುವವರು ಸಾಯಿಪಲ್ಲವಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಸಾಯಿ ಪಲ್ಲವಿ ನಟಿಸಿದ್ದ "ವಿರಾಟಪರ್ವಂ' ಚಿತ್ರವನ್ನು (Virata Parvam Film) ಬಾಯ್ಕಾಟ್ ಮಾಡುವಂತೆ ಹಿಂದು ಸಂಘಟನೆಗಳು ಒತ್ತಾಯ ಮಾಡಿವೆ.

ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ (Sultan Bazaar police station) ಅಖಿಲ್ ದೂರು ನೀಡಿದ್ದಾರೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಗೋ ರಕ್ಷಕರ ಬಗ್ಗೆ ಸಾಯಿಪಲ್ಲವಿ ನಿಂದನಾತ್ಮಕವಾಗಿ ಮಾತನಾಡಿದ್ದರು. "ನಾವು ವೀಡಿಯೊವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ" ಎಂದು ಸುಲ್ತಾನ್ ಬಜಾರ್ ಇನ್ಸ್‌ಪೆಕ್ಟರ್ ಪಿ. ಪದ್ಮಾ ಹೇಳಿದರು.

ಕಾಶ್ಮೀರಿ ಉಗ್ರಗಾಮಿಗಳೊಂದಿಗೆ ಪ್ರಾಣಿ ಪ್ರಿಯರನ್ನು ಹೋಲಿಸಿರುವ ನಟಿಯ ಹೇಳಿಕೆಗಳು ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರುದಾರರು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.  ‘ದಿ ಕಾಶ್ಮೀರ್ ಫೈಲ್ಸ್’ ಕಾಶ್ಮೀರ ಪಂಡಿತರ ಮೇಲಿನ ನರಮೇಧದ ಕುರಿತಾಗಿದೆ ಮತ್ತು ಚಿತ್ರರಂಗದ ನಿರ್ದೇಶಕರ ಸೂಚನೆಯಂತೆ ನಟಿಸುವುದನ್ನು ಹೊರತುಪಡಿಸಿ ನಟಿಗೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಬಿಜೆಪಿ ವಕ್ತಾರ ಎನ್.ವಿ.ಸುಭಾಷ್ ಹೇಳಿದ್ದಾರೆ.

ಸಾಯಿ ಪಲ್ಲವಿಯವರ ಹೇಳಿಕೆಯನ್ನು ಖಂಡಿಸಿದ ಸುಭಾಷ್, ಭಾರತದಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎನ್ನುವುದು ಆಕೆಯ ಮಾತಿನಿಂದಲೇ ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಸಾಯಿ ಪಲ್ಲವಿಯರ ಹೇಳಿಕೆಯನ್ನು ವಿರೋಧಿಸಿ ಆಕೆ ನಟಿಸಿರುವ ವಿರಾಟಪರ್ವಂ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯ ಮಾಡಿವೆ. ಸೋಷಿಯಲ್ ಮೀಡಿಯಾದಲ್ಲೂ ಬಾಯ್ಕಾಟ್ ವಿರಾಟಪರ್ವಂ ಟ್ರೆಂಡ್ ಆಗುತ್ತಿದೆ. ನಕ್ಸಲ್ ಹೋರಾಟದಲ್ಲಿ ಭಾಗಿಯಾದ ಪ್ರೇಮಿಗಳಿಬ್ಬರ ಕಥೆ ಈ ಚಿತ್ರದಲ್ಲಿದ್ದು, ನಕ್ಸಲ್ ಹೋರಾಟವನ್ನು ಹಿನ್ನಲೆಯಾಗಿಟ್ಟುಕೊಂಡು ಚಿತ್ರವನ್ನು ನಿರ್ದೇಶನ ಮಾಡಲಾಗಿದೆ. ತಮ್ಮ ಶೋಷಿತ ಸಮಾಜಕ್ಕಾಗಿ ಪ್ರೇಮಿಗಳು ಮಾಡುವ ತ್ಯಾಗವನ್ನು ತೋರಿಸಲಾಗಿದ್ದು, ಶುಕ್ರವಾರ ಇದು ಬಿಡುಗಡೆಯಾಗಿದೆ. ಸಾಯಿಪಲ್ಲವಿ ಅವರೊಂದಿಗೆ ರಾಣಾ ದಗ್ಗುಬಾಟಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಾಶ್ಮೀರಿ ಪಂಡಿತರು, ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ: ಚರ್ಚೆಗೆ ಕಾರಣವಾಯ್ತು ಸಾಯಿ ಪಲ್ಲವಿ ಹೇಳಿಕೆ

ವಿರಾಟ ಪರ್ವಂ ಚಿತ್ರದ ಪ್ರಮೋಷನ್‌ಗಾಗಿ ವಿವಿಧ ಕಾರ್ಯಕ್ರಮಗಳು, ಸಂದರ್ಶನಗಳಲ್ಲಿ ಸಾಯಿ ಪಲ್ಲವಿ ಭಾಗಿಯಾಗಿದ್ದರು. ಇಂಥದ್ದೇ ಒಂದು ಯುಟ್ಯೂಬ್ ಸಂದರ್ಶನದಲ್ಲಿ ಸಾಯಿ ಪಲ್ಲವಿಗೆ ಚಿತ್ರದ ವಿಚಾರದೊಂದಿಗೆ ಇತ್ತೀಚಿಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಪ್ರಶ್ನೆ ಮಾಡಲಾಗಿತ್ತು.

ಸಾಯಿ ಪಲ್ಲವಿಯನ್ನ ಈ ರೀತಿ ನೋಡಲು ಸಾಧ್ಯವೇ ಇಲ್ಲ: ಯಾಕೆ ಗೊತ್ತಾ?

 

ರಾಜಕೀಯ ವಿಚಾರದಲ್ಲಿ ನಾನು ಮೊದಲಿನಿಂದಲೂ ತಟಸ್ಥವಾಗಿ ಉಳಿದುಕೊಂಡಿದ್ದೇನೆ. ಎಡ ಹಾಗೂ ಬಲ ಪಂಥದ ಬಗ್ಗೆ ಕೇಳಿದ್ದೇನೆ. ಆದರೆ, ಇವುಗಳಲ್ಲಿ ಸರಿ ತಪ್ಪುಗಳನ್ನು ನಾನು ನಿರ್ಧಾರ ಮಾಡುವ ಗೋಜಿಗೆ ಹೋಗೋದಿಲ್ಲ. ಇತ್ತೀಚೆಗೆ ಬಂದ ಬಾಲಿವುಡ್ ಚಿತ್ರ ಕಾಶ್ಮೀರ್‌ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಸಾಯಿಸಲಾಯಿತು ಎಂದು ತೋರಿಸಿದ್ದರು. ಇದೇ ವೇಳೆ ಗೋವು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಎಂದು ಆತನನ್ನು ಹತ್ಯೆ ಮಾಡಲಾಗಿತ್ತು. ಆತನನ್ನು ಹತ್ಯೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಕಾಶ್ಮೀರ ಘಟನೆಗೂ ಈ ಘಟನೆಗೂ ವ್ಯತ್ಯಾಸ ಏನಿದೆ?' ಎಂದು ಸಾಯಿ ಪಲ್ಲವಿ ಪ್ರಶ್ನೆ ಮಾಡಿದ್ದರು.

Latest Videos
Follow Us:
Download App:
  • android
  • ios