Asianet Suvarna News Asianet Suvarna News

ಕಾಶ್ಮೀರಿ ಪಂಡಿತರು, ಗೋ ಸಾಗಣೆಕಾರರ ಹತ್ಯೆ ಎರಡೂ ಒಂದೇ: ಚರ್ಚೆಗೆ ಕಾರಣವಾಯ್ತು ಸಾಯಿ ಪಲ್ಲವಿ ಹೇಳಿಕೆ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿಯ  ಕೆಲವು ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನದಲ್ಲಿ ಸಾಯಿ ಪಲ್ಲವಿ ಅವರಿಗೆ ರಾಜಕೀಯ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಲಾಯಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಾಯಿ ಪಲ್ಲವಿ, 'ನಾನು ರಾಜಕೀಯ ವಿಚಾರದಲ್ಲಿ ತಟಸ್ಥೆ. ನಮ್ಮ ಮನೆಯವರು ಹಾಗೆ. ಹಾಗಾಗಿ ನಾನು ತಟಸ್ಥೆ. ಎಡ- ಬಲ ಎನ್ನುವುದು ನನಗೆ ಗೊತ್ತಿಲ್ಲ' ಎಂದಿದ್ದಾರೆ. 

Sai Pallavi says Kashmir genocide and lynching for cow smuggling are both crimes sgk
Author
Bengaluru, First Published Jun 15, 2022, 2:41 PM IST

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ(Sai Pallavi) ಸದ್ಯ ಬಹುನಿರೀಕ್ಷೆಯ ವಿರಾಟ ಪರ್ವಂ (Virata parvam) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ (Rana Daggubati) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿರಾಟಪರ್ವಂ ಚಿತ್ರ ಜೂನ್ 17 ರಂದು ಬಿಡಿಗಡೆಯಾಗುತ್ತಿದೆ. ಹಾಗಾಗಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.  ಸರಣಿ ಪ್ರಚಾರ ಮತ್ತು ಸಂದರ್ಶನಗಳಲ್ಲಿ ನಿರತವಾಗಿದೆ. ಸಾಯಿ ಪಲ್ಲವಿ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿಯ  ಕೆಲವು ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದೆ. 

ಸಂದರ್ಶನದಲ್ಲಿ ಸಾಯಿ ಪಲ್ಲವಿ ಅವರಿಗೆ ರಾಜಕೀಯ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಲಾಯಿತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಾಯಿ ಪಲ್ಲವಿ, 'ನಾನು ರಾಜಕೀಯ ವಿಚಾರದಲ್ಲಿ ತಟಸ್ಥೆ. ನಮ್ಮ ಮನೆಯವರು ಹಾಗೆ. ಹಾಗಾಗಿ ನಾನು ತಟಸ್ಥೆ. ಎಡ- ಬಲ ಎನ್ನುವುದು ನನಗೆ ಗೊತ್ತಿಲ್ಲ' ಎಂದಿದ್ದಾರೆ. 

'ನಾನು ರಾಜಕೀಯ ವಿಚಾರದಲ್ಲಿ ತಟಸ್ಥೆ. ನಾನು ಬೆಳೆದ ವಾತಾವರಣ ಕೂಡ  ಹಾಗೆ ಇತ್ತು. ನಾನು ಎಡ ಮತ್ತು ಬಲದ ಬಗ್ಗೆ ಕೇಳಿದ್ದೇನೆ. ಆದರೆ ನಾನು ಯಾವುದು ಸರಿ ಯಾವುದು ತಪ್ಪು ಎಂದು ಹೇಳಲ್ಲ. ಇತ್ತೀಚಿಗೆ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಸಾಯಿಸಲಾಯಿತು ಎಂದು ತೋರಿಸಲಾಗಿದೆ. ಹಾಗೆ ಇತ್ತೀಚಿಗಷ್ಟೆ ಹಸು ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಎಂದು ಆತನನ್ನು ಹತ್ಯೆಮಾಡಲಾಗಿದೆ. ಆ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದಾರೆ. ಕಾಶ್ಮೀರ ಘಟನೆಗೂ ಈ ಘಟನೆಗೂ ವ್ಯತ್ಯಾಸ ಏನಿದೆಯ?' ಎಂದು ಸಾಯಿ ಪಲ್ಲವಿ ಕೇಳಿದ್ದಾರೆ. 

2 ದಿನ ಉಪವಾಸ ಮಾಡಿದ ಸಾಯಿ ಪಲ್ಲವಿ; ನೀನಮ್ಮ ನಿಜವಾದ ನ್ಯಾಷನಲ್ ಕ್ರಶ್‌ ಎಂದ ನೆಟ್ಟಿಗರು

ತನ್ನ ಕುಟುಂಬ ಉತ್ತಮ ವ್ಯಕ್ತಿಯಾಗಬೇಕೆಂದು ಹೇಳಿಕೊಟ್ಟಿದೆ ಎಂದಿದ್ದಾರೆ. ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು. ನಿಲುವು ಮುಖ್ಯವಲ್ಲ, ನೀವು ಉತ್ತಮ ವ್ಯಕ್ತಿಯಾಗಬೇಕು' ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಸಾಯಿ ಪಲ್ಲವಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲಾತಣದಲ್ಲಿ ಚರ್ಚೆ ಪ್ರಾರಂಭವಾಗಿದೆ. ಕೆಲವರು ಕಾಮೆಂಟ್ ಮಾಡಿ ಸಾಯಿ ಪಲ್ಲವಿ ಈ ರೀತಿ ಹೇಳುವುದಕ್ಕೂ ಧೈರ್ಯ ಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ಕಳ್ಳಸಾಗಾಣಿಕೆ ಹತ್ಯೆ ಮತ್ತು ಕಾಶ್ಮೀರ ನರವೇಧಕ್ಕೂ ಹೋಲಿಕೆ ಮಾಡಬೇಡಿ ಎಂದುಹೇಳಿದ್ದಾರೆ. 

ಇನ್ನು ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ, 'ನಾನು ಸಾಯಿ ಪಲ್ಲವಿ ಅವರ ಅಭಿಮಾನಿ. ಮುಖದ ತುಂಬಾ ಮೊಡವೆಗಳಿದ್ದರೂ, ಕೆಟ್ಟದಾದ ಹೇರ್ ಸ್ಟೈಲ್ ಇದ್ದರೂ ನಾನು ಯಾವತ್ತು ಆ ಬಗ್ಗೆ ಮಾತನಾಡಿಲ್ಲ. ಆದರೆ ಈಗ ಆಕೆಯನ್ನೂ ಹೇಟ್ ಮಾಡುತ್ತೇನೆ. ಹಸು ಕಳ್ಳಸಾಗಾಮಿಕೆ ಮತ್ತು ಕಾಶ್ಮೀರಿ ಪಂಡಿತರ ಹತ್ಯೆ ಎರಡು ಒಂದೇ ಹೇಳಿದ್ದಾರೆ.  ಹಾಗಾದ್ರೆ ಭಯೋತ್ಪಾದಕರನ್ನು ಕೊಲ್ಲುವುದು ಮತ್ತು ಕಶ್ಮೀರಿ ಪಂಡಿತರನ್ನು ಕೊಂದಿರುವುದು ಒಂದೆನಾ' ಎಂದು ಪ್ರಶ್ನೆ ಮಾಡಿದ್ದಾರೆ.

ಸಾಯಿ ಪಲ್ಲವಿಗೆ ಬಾಡಿಗಾರ್ಡ್ ಆದ ರಾಣಾ ದಗ್ಗುಬಾಟಿ

 ಸಾಯಿ ಪಲ್ಲವಿ ಈ ಹೇಳಿಕೆ ವಿರಾಟ ಪರ್ವಂ ಸಿನಿಮಾದ ಮೇಲೆ ಪರಿಮಾಮ ಬೀರುತ್ತಾ ಎನ್ನುವ ಅನುಮಾನ ಪ್ರಾರಂಭವಾಗಿದೆ. ಸಾಯಿ ಪಲ್ಲವಿ ಹೇಳಿಕೆಯನ್ನೆ ಇಟ್ಟುಕೊಂಡು ಸಿನಿಮಾ ವಿರೋಧ ಮಾಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸಾಯಿ ಪಲ್ಲವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.    

Follow Us:
Download App:
  • android
  • ios