ಮುಂಬೈ (ಆ. 15): ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟಿ ವಿದ್ಯಾ ಸಿನ್ಹಾ ಇಂದು ಇಹಲೋಕ ತ್ಯಜಿಸಿದ್ದಾರೆ. 

ಕುರುಕ್ಷೇತ್ರ ಬಜೆಟ್ ಕೋಟಿ ಕೋಟಿ; ಗಳಿಸಿದ್ದು ಮಾತ್ರ 30 ಕೋಟಿ ?

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾ ಸಿನ್ಹಾರನ್ನು ಮುಂಬೈನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 

ದೇಶಕ್ಕೆ ಸ್ವತಂತ್ರ ದಿನದ ಸಡಗರ, ಇವರಿಗೆ ಹುಟ್ಟುಹಬ್ಬದ ಸಂಭ್ರಮ

ವಿದ್ಯಾ ಸಿನ್ಹಾ ರಜನಿಗಂಧ, ಚೋಟಿ ಸಿ ಬಾತ್, ಪತಿ, ಪತ್ನಿ ಔರ್ ವೋ, ಚಿತ್ರ ಇವರಿಗೆ ಹೆಸರು ತಂದು ಕೊಟ್ಟಿತು.  2011 ರಲ್ಲಿ ತೆರೆಕಂಡ ಬಾಡಿಗಾರ್ಡ್ ಸಿನಿಮಾದಲ್ಲಿ ನಟಿಸಿದ್ದರು. ಜೊತೆ ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಏಕ್ತಾ ಕಪೂರ್ ರ ಕಾವ್ಯಾಂಜಲಿ, ಕುಲ್ಫಿ ಕುಮಾರ್ ಬಾಜೇವಾಲಾ ಸೀರಿಯಲ್ ನಲ್ಲಿಯೂ ಕಾಣಿಸಿಕೊಂಡಿದ್ದಾರೆ.