ದೇಶಕ್ಕೆ ಸ್ವತಂತ್ರ ದಿನದ ಸಡಗರ, ಇವರಿಗೆ ಹುಟ್ಟುಹಬ್ಬದ ಸಂಭ್ರಮ
ಇಡೀ ದೇಶಕ್ಕೆ ಇಂದು 73 ನೇ ಸ್ವತಂತ್ರ ದಿನಾಚರಣೆ ಸಂಭ್ರಮ. ಈ ಸಿನಿತಾರೆಯರಿಗೆ ಬರ್ತಡೇ ಸಂಭ್ರಮವೂ ಹೌದು. ಮುಗುಳುನಗೆ ಸುಂದರಿ ಸುಹಾಸಿನಿ, ಎವರ್ ಗ್ರೀನ್ ನಟಿ ಭಾರತೀ ವಿಷ್ಣುವರ್ಧನ್, ನಟರಾದ ಅರ್ಜುನ್ ಸರ್ಜಾ, ನಾಗತೀಹಳ್ಳಿ, ರಾಘವೇಂದ್ರ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ. ಅವರೆಲ್ಲರಿಗೂ ಸುವರ್ಣ ನ್ಯೂಸ್ ಕಡೆಯಿಂದ ಹ್ಯಾಪಿ ಹುಟ್ದಬ್ಬ.
ಕನ್ನಡದ ಹೆಸರಾಂತ ನಿರ್ದೇಶಕ, ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್ ಗೆ ಹುಟ್ಟುಹಬ್ಬದ ಸಂಭ್ರಮ
ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ 15, 1958 ರಲ್ಲಿ ಚಂದ್ರಶೇಖರ್ ಜನಿಸಿದರು. ಹಾಗಾಗಿ ಇವರ ಹೆಸರು ನಾಗತೀಹಳ್ಳಿ ಚಂದ್ರಶೇಖರ್ ಎಂದೇ ಖ್ಯಾತರಾದರು.
ಸುಹಾಸಿನಿ ಹುಟ್ಟಿದ್ದು ಚೆನ್ನೈನಲ್ಲಿ. ಕಮಲ್ ಹಾಸನ್ ಅಣ್ಣ ಚಾರು ಹಾಸನ್ ಮಗಳು. ಬೆಂಕಿಯಲ್ಲಿ ಅರಳಿದ ಹೂವು, ಸುಪ್ರಭಾತ, ಬಂಧನ, ಅಮೃತವರ್ಷಿಣಿ, ಮುತ್ತಿನಹಾರ ಸಿನಿಮಾ ಇಂದಿಗೂ ಮರೆಯಲಾಗದ ಇವರ ಸಿನಿಮಾಗಳು.
ಅರ್ಜುನ್ ಸರ್ಜಾ ಮದುಗಿರಿಯಲ್ಲಿ ಆಗಸ್ಟ್ 15, 1962 ರಲ್ಲಿ ಜನಿಸಿದರು.
ಪ್ರಸಿದ್ಧ ಕಲಾವಿದ ಶಕ್ತಿ ಪ್ರಸಾದ್ ರವರ ಮಗ. 1981 ರಲ್ಲಿ ತೆರೆಕಂಡಿರುವ "ಸಿಂಹದ ಮರಿ ಸೈನ್ಯ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗ ಪ್ರವೇಶಿಸಿದರು.
ಭಾರತೀ ವಿಷ್ಣುವರ್ಧನ್ ಆಗಸ್ಟ್ 15, 1948 ರಲ್ಲಿ ಜನಿಸಿದರು. ಇವರ ಮಾತೃಭಾಷೆ ಮರಾಠಿ.
ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಆಗಸ್ಟ್ 15, 1965 ರಂದು ಮದ್ರಾಸ್ ನಲ್ಲಿ ಜನಿಸಿದರು.
ನಂಜುಂಡಿ ಕಲ್ಯಾಣ ಇವರ ಸೂಪರ್ ಹಿಟ್ ಸಿನಿಮಾ
‘ಅಮೃತವರ್ಷಿಣಿ’ ಯಲ್ಲಿ ಸುಹಾಸಿನಿ ಶರತ್ ಬಾಬು ಅವರ ಅಭಿನಯ ಇಡೀ ಸೌತ್ ಇಂಡಿಯಾ ಒಮ್ಮೆ ತಿರುಗಿ ನೋಡುವ ಹಾಗೆ ಮಾಡಿತ್ತು.