ಕನ್ನಡ ಚಿತ್ರರಂಗದಲ್ಲೇ ಮೊದಲ 3 D ಹಾಗೂ ಬಿಗ್ ಬಜೆಟ್ ಐತಿಹಾತಿಕ ಸಿನಿಮಾ ಕುರುಕ್ಷೇತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿರುವುದಂತೂ ಗ್ಯಾರಂಟಿ. ಬಂಡವಾಳ ಹಾಗೂ ವಿತರಣೆ ಜೋಡಿಯಾದ ಮುನಿರತ್ನ ಹಾಗೂ ರಾಕ್‌ಲೈನ್ ವೆಂಕಟೇಶ್ ಮುಖದಲ್ಲಿ ಗೆಲುವಿನ ನಗೆ ಕಾಣಬಹುದು.

ಡಿ-ಬಾಸ್‌ಗೆ Young ಫ್ಯಾನ್! ಚಿತ್ರಮಂದಿರ ಮುಂದೆ ಕುಣಿದ ಅಜ್ಜಿ ವೈರಲ್!

ಮೂಲಗಳ ಪ್ರಕಾರ ಕುರುಕ್ಷೇತ್ರ ಚಿತ್ರ ಮೊದಲ ದಿನ 13 ಕೋಟಿ ಹಾಗೂ ಎರಡನೇ ದಿನ 10 ಗಳಿಸಿತ್ತು. ರಿಲೀಸ್ ಆದ ಮಾರನೇ ದಿನ ವೀಕೆಂಡ್ ಹಾಗೂ ಬಕ್ರಿದ್ ಹಬ್ಬ ಬಂದ ಕಾರಣ ಕಲೆಕ್ಷನ್ ಇನ್ನೂ ಹೆಚ್ಚಾಗಿದ್ದು ಒಟ್ಟಾರೆ ಒಂದು ವಾರದಲ್ಲಿ 30 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.

ಕೆನಡಾದಲ್ಲಿ ಕನ್ನಡದ ಅಬ್ಬರ! ಅಭಿಮಾನಿಗಳಿಗೆ ಸಿಕ್ತು ಕುರುಕ್ಷೇತ್ರ ದರ್ಶನ!

1000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಟಿವಿ ಹಾಗೂ ಆಡಿಯೋ ರೈಟ್ಸ್‌ 20 ಕೋಟಿಗೆ ಮಾರಾಟವಾಗಿದೆ. ಇನ್ನು ದೇಶದಾದ್ಯಾಂತ ರಿಲೀಸ್ ಆಗಿದ್ದು ಅಭಿಮಾನಿಗಳು ಕುರುಕ್ಷೇತ್ರ ನೋಡುತ್ತಿದ್ದಾರೆ. ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲಿಯೂ ಕುರುಕ್ಷೇತ್ರ ರಿಲೀಸ್ ಆಗಿದ್ದು ದುರ್ಯೋಧನನ ಫೋಟೋಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಇಂದು ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಿದ್ದು ಕೋಟಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.