ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಮುಖ ಮುಖಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ಸಜ್ಜಾಗುತ್ತಿದೆ.  ಬಾಲಿವುಡ್ ಸೆಲೆಬ್ರಿಟಿಗಳತ್ತ ಬಿಜೆಪಿ ಚಿತ್ತ ನೆಟ್ಟಿದ್ದು, ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್, ಮೋಹಲ್ ಲಾಲ್ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು, ಗೆಲುವಿಗಾಗಿ ಬಿಜೆಪಿ ಮಾಸ್ಟರ್ ಪ್ಲಾನ್ ಒಂದನ್ನು ಹೆಣೆಯುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭಾ ಚುನಾವಣೆಯಲ್ಲಿ ಸುಮಾರು 70 ಮಂದಿ ಪ್ರಖ್ಯಾತರನ್ನು ಕಣಕ್ಕಿಳಿಸುವ ಪ್ಲಾನ್ ನಲ್ಲಿದೆ. ವಿಶ್ವದಾದ್ಯಂತ ಚಿರಪರಿಚಿತರು ಎನಿಸಿಕೊಂಡ ಸಿನಿಮಾ ತಾರೆಯರು, ಕ್ರಿಕೆಟಿಗರತ್ತ ಕಣ್ಣು ನೆಟ್ಟಿದೆ. 

ಪ್ರಮುಖವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಮೋಹನ್ ಲಾಲ್, ಮಾಧುರಿ ದೀಕ್ಷಿತ್, ವೀರೇಂದ್ರ ಸೇಹ್ವಾಗ್ ಅವರನ್ನು ಕಣಕ್ಕೆ ಇಳಿಸುವತ್ತ ಇದೀಗ ಬಿಜೆಪಿ ಚಿತ್ತ ಹರಿಸಿದೆ ಎನ್ನಲಾಗುತ್ತಿದೆ. 

ಇನ್ನು ಸಿನಿಮಾ ಜಗತ್ತಿನಿಂದಲೇ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ. ಅಲ್ಲದೇ ಕಲೆ, ಕ್ರೀಡೆ, ಮಾಧ್ಯಮ, ಆರೋಗ್ಯ ವಿವಿಧ ಕ್ಷೇತ್ರಗಳ ಪ್ರಮುಖರಿಗೂ ಕೂಡ ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಣೆ ಹಾಕುವ ಸಾಧ್ಯತೆ ಇದ್ದು, ಚಿರಪರಿಚಿತ ಮುಖಗಳ ಮೂಲಕ ಗೆಲುವಿನ ಪ್ಲಾನ್ ನಡೆದಿದೆ. 

ನವದೆಹಲಿ ಕ್ಷೇತ್ರದಿಂದ ಅಕ್ಷಯ್ ಕುಮಾರ್ ಅವರನ್ನು ಮುಂಬೈನಿಂದ ಮಾಧುರಿ ದೀಕ್ಷಿತ್, ತಿರುವನಂತಪುರದಿಂದ ಮೋಹನ್ ಲಾಲ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.