ನಟಿ ಸನ್ನಿ ಲಿಯೋನ್ ಗೆ ಮಕ್ಕಳೆಂದರೆ ಸಿಕ್ಕಾಪಟ್ಟೆ ಇಷ್ಟ. ಮಕ್ಕಳಿಗಾಗಿ ಆಗಾಗ ಏನಾದರೂ ಮಾಡುತ್ತಿರುತ್ತಾರೆ. ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿದ್ದಾರೆ. 

ಕುಲ’ವಧು’ಗೆ ಕೂಡಿ ಬಂತು ಕಂಕಣಭಾಗ್ಯ

ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರಬಾರದು. ಅವರ ಮಾನಸಿಕ ಹಾಗೂ ಬೌದ್ಧಿಕ ಅಭಿವೃದ್ಧಿಯೂ ಆಗಬೇಕು. ಮಕ್ಕಳು ಖುಷಿ ಖುಷಿಯಾಗಿ ಮಜಾ ಮಾಡಬೇಕು ಎಂಬ ಉದ್ದೇಶದಿಂದ ಶಾಲೆಯೊಂದನ್ನು ಆರಂಭಿಸಿದ್ದಾರೆ. 

ಪುತ್ರಿಯ ವೆಬ್ ಸರಣಿಯಲ್ಲಿ ಶಿವಣ್ಣ ನಟನೆ

ಸನ್ನಿ ಲಿಯೋನ್ ಸಮಯ ತೆಗೆದುಕೊಂಡು ಶಾಲೆಯನ್ನು ವಿಭಿನ್ನವಾಗಿ ರೂಪಿಸಿದ್ದಾರೆ.  ಇವರೇ ಶಾಲೆಯ ಫೀಚರ್ಸ್, ಇಂಟೀರಿಯರ್ಸ್ ಹಾಗೂ ಬೇರೆ ಬೇರೆ ಸೌಲಭ್ಯಗಳ ಬಗ್ಗೆ ಕೆಲಸ ಮಾಡಿದ್ದಾರೆ.