ಕುಲವಧು ಖ್ಯಾತಿಯ ಧನ್ಯಾರಿಗೆ ಕೂಡಿ ಬಂತು ಕಂಕಣ ಭಾಗ್ಯ | ನಟ ಆಕರ್ಷ್ ಜೊತೆ ನಿಶ್ಚಿತಾರ್ಥ | 

ಕುಲವಧು ಧಾರಾವಾಹಿ ಧನ್ಯಾ ಖ್ಯಾತಿಯ ದೀಪಿಕಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 

’ಮಿಸ್ ಸೌತ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡ ಕುಲವಧು ಧನ್ಯಾ

ಕೆಲದಿನಗಳ ಹಿಂದೆ ಅಭಿಮಾನಿಗಳಿಗೆ ಮದುವೆ ಸುಳಿವು ನೀಡಿದ್ದರು. ಭಾವೀ ಪತಿಯನ್ನೂ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಕಿರುತೆರೆ ನಟ ಆಕರ್ಷ್ ಜೊತೆ ಧನ್ಯಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. 

View post on Instagram

ನಿಶ್ಚಿತಾರ್ಥಕ್ಕೆ ಕುಟುಂಬದವರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕಿರುತೆರೆ ಕೆಲವು ನಟ-ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. 

View post on Instagram

ಆಕರ್ಷ್ ಕೂಡಾ ಕಿರುತೆರೆ ನಟರಾಗಿದ್ದು ಉದಯ ಟಿವಿಯಲ್ಲಿ ಪ್ರಸಾರವಾಗುವ 'ಮಾನಸ ಸರೋವರ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧನ್ಯಾ ಕುಲವಧು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನನ್ ಮಗಳೇ ಹೀರೋಯಿನ್ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ.

ಮದುವೆಯಾಗಿ ತಪ್ಪು ಮಾಡಿಬಿಟ್ರಾ ಸಮಂತಾ?

ದೀಪಿಕಾ ಇತ್ತೀಚಿಗಷ್ಟೇ ಮಿಸ್ ಸೌತ್ ಇಂಡಿಯಾ ಗ್ಲಾನರ್ 2019 ಆಗಿ ಹೊರ ಹೊಮ್ಮಿದ್ದರು.