ಶಿವರಾಜ್‌ಕುಮಾರ್ ಹೊಸ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಅವರು ಅಭಿನಯಿಸುತ್ತಿರುವ ವೆಬ್ ಸೀರಿಸ್ ಹೆಸರು ‘ಓಂಕಾರ’. ಕನ್ನಡದಲ್ಲಿ ಸ್ಟಾರ್ ನಟರೊಬ್ಬರು ವೆಬ್ ಸೀರಿಸ್‌ನಲ್ಲಿ ನಟಿಸುವುದು ಇದೇ ಮೊದಲು.

ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಸೀರಿಸ್ ಇದು. ಸದ್ಯಕ್ಕೆ ನಿರ್ದೇಶಕರು ಯಾರು ಎನ್ನುವುದು ಫೈನಲ್ ಆಗಿಲ್ಲ. ನಿವೇದಿತಾ ಅವರೇ ಕತೆ ಬರೆದಿದ್ದಾರೆ. ನಿರ್ಮಾಣದ ಸಿದ್ಧತೆಯೂ ಶುರುವಾಗಿದೆ. ಈ ವಿಚಾರವನ್ನು ಶಿವಣ್ಣ ಅವರೇ ಬಹಿರಂಗ ಪಡಿಸಿದ್ದಾರೆ.

‘ಸಿನಿ ಮುತ್ತು ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೂರನೇ ವೆಬ್ ಸೀರಿಸ್ ಇದು. ಕತೆ ತುಂಬಾ ಚೆನ್ನಾಗಿದೆ. ಅದರಲ್ಲಿ ನಾನು ಅಭಿನಯಿಸುತ್ತಿದ್ದೇನೆ. ವೆಬ್ ಸೀರೀಸ್‌ನಲ್ಲಿ ನಟಿಸುತ್ತಿರುವುದು ಇದು ಮೊದಲು. ಆ ಅನುಭವ ಹೇಗಿರುತ್ತೆ ಅಂತ ನಾನು ಕೂಡ ಉತ್ಸುಕನಾಗಿದ್ದೇನೆ’ ಎಂದರು ಶಿವರಾಜ್ ಕುಮಾರ್.

ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ದರ್ಶನ್ ಹೀರೋಯಿನ್

ಚಿಕಿತ್ಸೆ ನಂತರ ವಿಶ್ರಾಂತಿ ಈ ಮಧ್ಯೆ ಶಿವರಾಜ್‌ಕುಮಾರ್ ಒಂದಷ್ಟು ದಿನ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಒಂದೂವರೆ ತಿಂಗಳ ಕಾಲ ಚಿತ್ರೀಕರಣದಿಂದ ದೂರ ಉಳಿದು ರೆಸ್ಟ್ ಪಡೆಯಲಿದ್ದಾರೆ. ಇದಕ್ಕೆ ಕಾರಣ ಭುಜದ ಶಸ್ತ್ರ ಚಿಕಿತ್ಸೆ.

ಬಲಭಾಗದ ಭುಜದ ನೋವಿಗೆ ಚಿಕಿತ್ಸೆ ಪಡೆಯಲು ಅವರು ಲಂಡನ್‌ಗೆ ಹೊರಟಿದ್ದಾರೆ. ಜುಲೈ 9 ರಂದು ಲಂಡನ್‌ನಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ. ಅಲ್ಲಿಂದ ಬಂದ ನಂತರ ಒಂದಷ್ಟು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಈ ಕುರಿತು ಅವರ ಮಾತುಗಳು ಇಲ್ಲಿವೆ.