ಮುಂಬರುವ 'ಈಥಾ' (Eetha) ಬಯೋಪಿಕ್ ಮೂಲಕ ಶ್ರದ್ಧಾ ಕಪೂರ್ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಲಾವಣಿ ಕ್ವೀನ್ ವಿಠಾಬಾಯಿ ನಾರಾಯಣಗಾಂವ್ಕರ್ ಪಾತ್ರದಲ್ಲಿ ಅವರನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
ಶ್ರದ್ಧಾ ಕಪೂರ್ ಬಾಲಿವುಡ್ನ ಅತ್ಯಂತ ನೆಚ್ಚಿನ ಸ್ಟಾರ್ಗಳಲ್ಲಿ ಒಬ್ಬರು. ತಮ್ಮ ಸುಂದರ ನಗು, ನಟನೆ ಹಾಗೂ ಲುಕ್ಸ್ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರ ಸರಳ ವ್ಯಕ್ತಿತ್ವ ಅಭಿಮಾನಿಗಳಿಗೆ ತುಂಬಾ ಇಷ್ಟ. ಹೌದು, ಅವರೊಬ್ಬ ಸ್ಟಾರ್ ಆಗಿದ್ದರೂ, ಅವರ ಸಿಂಪಲ್ ಲೈಫ್ಸ್ಟೈಲ್, ಹಾಸ್ಯ ಪ್ರಜ್ಞೆ ಹಾಗೂ ಚುರುಕುತನ ಫ್ಯಾನ್ಸ್ ಜೊತೆ ಸುಲಭವಾಗಿ ಕನೆಕ್ಟ್ ಆಗುವಂತೆ ಮಾಡುತ್ತದೆ.
ಮಹಾರಾಷ್ಟ್ರದ ಲಾವಣಿ ಕ್ವೀನ್ ವಿಠಾಬಾಯಿ ನಾರಾಯಣ್ ಅವರ ಜೀವನ ಆಧಾರಿತ ಬಯೋಪಿಕ್ 'ಈಥಾ' ಚಿತ್ರದ ಮೂಲಕ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಮನಸಾರೆ ನರ್ತಿಸುತ್ತಾ, ತಮ್ಮ 'ಲಾವಣಿ ತಮಾಷಾ'ಗಳ ಮೂಲಕ ಭಾರೀ ಜನರನ್ನು ಸೆಳೆಯುತ್ತಿದ್ದ ಕಲಾವಿದೆ ವಿಠಾಬಾಯಿ. ಅವರು ಭಾರತೀಯ ನರ್ತಕಿ, ಗಾಯಕಿ ಮತ್ತು ತಮಾಷಾ ಕಲಾವಿದೆಯಾಗಿದ್ದರು.
ಶ್ರದ್ಧಾ ಕಪೂರ್ ಅರ್ಧ-ಮರಾಠಿ!
ಈ ಚಿತ್ರಕ್ಕೆ ಶ್ರದ್ಧಾ ಅವರೇ ಯಾಕೆ ಪರ್ಫೆಕ್ಟ್ ಅನ್ನೋದನ್ನ ಹೇಳ್ತೀವಿ ಕೇಳಿ. ಹೌದು, ನೀವು ಓದುತ್ತಿರುವುದು ನಿಜ. ಅವರು ಅರ್ಧ ಮರಾಠಿ ಮತ್ತು ಅರ್ಧ ಪಂಜಾಬಿ ಅನ್ನೋದು ನಿಮಗೆ ಗೊತ್ತಾ? ಹೌದು, ಶ್ರದ್ಧಾ ಅವರ ಮಹಾರಾಷ್ಟ್ರದ ಮೂಲವೇ 'ಈಥಾ' ಚಿತ್ರಕ್ಕೆ ಅವರನ್ನು ಪರ್ಫೆಕ್ಟ್ ಆಗಿ ಹೊಂದಿಕೊಳ್ಳುವಂತೆ ಮಾಡಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಅವರ ಸಹಜ ಉಚ್ಚಾರಣೆ, ನಖರಗಳು, ಸಂಸ್ಕೃತಿ, ನೃತ್ಯ, ಉಡುಗೆ-ತೊಡುಗೆ ಮತ್ತು ಮರಾಠಿ ಮಹಿಳೆಯರ ಬಾಡಿ ಲ್ಯಾಂಗ್ವೇಜ್ ಬಗ್ಗೆ ಅವರಿಗಿರುವ ತಿಳುವಳಿಕೆಯೇ ಇದಕ್ಕೆ ಕಾರಣ.
ಶ್ರದ್ಧಾ ಅವರ ಹಿನ್ನೆಲೆ!
ತಾಯಿಯ ಕಡೆಯಿಂದ ಶ್ರದ್ಧಾ ಅರ್ಧ ಮರಾಠಿ. ಅವರು ಮುಂಬೈನಲ್ಲಿ ಮರಾಠಿ ಸಾಂಸ್ಕೃತಿಕ ಸಂಪ್ರದಾಯಗಳೊಂದಿಗೆ ಬೆಳೆದರು. ಅವರ ತಾಯಿ ಶಿವಾಂಗಿ ಕಪೂರ್ ಅವರಿಗೆ ಮರಾಠಿ ಮತ್ತು ಕೊಂಕಣಿ ಮೂಲಗಳಿವೆ. ಅವರ ತಾಯಿಯ ತಾತ ಪಂಡರಿನಾಥ್ ಕೊಲ್ಹಾಪುರೆ (ದೀನಾನಾಥ್ ಮಂಗೇಶ್ಕರ್ ಅವರ ಸೋದರಳಿಯ ಮತ್ತು ಲತಾ ಮಂಗೇಶ್ಕರ್ ಹಾಗೂ ಆಶಾ ಭೋಂಸ್ಲೆ ಅವರ ಮೊದಲ ಸೋದರಸಂಬಂಧಿ) ಕೊಲ್ಹಾಪುರದಲ್ಲಿ ಕೌಟುಂಬಿಕ ಹಿನ್ನೆಲೆ ಹೊಂದಿದ್ದರು. ಆದರೆ ಅವರ ಅಜ್ಜಿ ಗೋವಾದ ಪಣಜಿಯಿಂದ ಬಂದವರು.
ಫ್ಯಾನ್ಸ್ ಏನಂತಾರೆ?
ಒಬ್ಬರು ಕಮೆಂಟ್ ಮಾಡಿ, "ನೀವು ನೋಡಲು ನಿಮ್ಮ ಚಿಕ್ಕಮ್ಮ ಪದ್ಮಿನಿ ಕೊಲ್ಹಾಪುರೆ ಅವರಂತೆಯೇ ಕಾಣಿಸುತ್ತಿದ್ದೀರಿ" ಎಂದಿದ್ದಾರೆ.
ಮತ್ತೊಬ್ಬರು, "ಮರಾಠಿ ಹುಡುಗಿ ವೈಬ್ಸ್!" ಎಂದು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು, "ಅವರು ಮರಾಠಿ, ಈಥಾ ಚಿತ್ರಕ್ಕೆ ಇವರೇ ಪರ್ಫೆಕ್ಟ್" ಎಂದು ಹೇಳಿದ್ದಾರೆ.
ಮತ್ತೊಂದು ಕಮೆಂಟ್ನಲ್ಲಿ, "ನೀವು ಬೆಂಕಿ, ಮಾಯಿ ರೆ ಮಾಯಿ ಈಥಾ ಆಯಿ ರೆ" ಎಂದಿದ್ದಾರೆ.
'ಈಥಾ' ಚಿತ್ರದ ಬಗ್ಗೆ
ಇನ್ನು ಲಕ್ಷ್ಮಣ್ ಉತೇಕರ್ ನಿರ್ದೇಶನದ 'ಈಥಾ' ಚಿತ್ರದಲ್ಲಿ ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಪ್ರಸಿದ್ಧ ಮರಾಠಿ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಜೀವನಕ್ಕೆ ಹತ್ತಿರವಾದ ಕಥೆಯಾಗಿದೆ. ಈ ಸಿನಿಮಾ ಡಿಸೆಂಬರ್ 4 ರಂದು ತೆರೆಕಾಣಲಿದೆ.
















