ಸಂತೋಷ ಆನಂದ್ ರಾಮ್ ನಿರ್ದೇಶನದ 'ಯುವರತ್ನ' ಚಿತ್ರದಲ್ಲಿ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯನಾಗಿದ್ದು, ಬಾಲಿವುಡ್ ಬೆಡಗಿ ಸಾಯೇಷಾ ನಟಿ ಆಗಿ ಆಯ್ಕೆ ಆಗಿದ್ದಾರೆ.

ಇದರ ಬಗ್ಗೆ ನಟಿ ಸಾಯೇಷಾ 'ಸೂಪರ್‌ ಹ್ಯಾಪಿ' ಆಗಿದ್ದೀನಿ ಒಂದು ಅದ್ಭತವಾದ ಚಿತ್ರ ತಂಡಕ್ಕೆ ಸೇರಿಕೊಳ್ಳಲು #Yuvarathna. ಪುನೀತ್ ಅವರೊಂದಿಗೆ ನಟಿಸಲು ಕಾಯುತ್ತಿದ್ದೇನೆ. ಥ್ಯಾಂಕ್ಸ್ ಸಂತೋಷ್ ಸರ್ ಮತ್ತು ಹೊಂಬಾಳೆ ಚಿತ್ರ ತಂಡ. ಇದು ನನ್ನ ಮೊದಲ ಕನ್ನಡ ಚಿತ್ರವೆಂದು ಟ್ಟೀಟ್ ಮಾಡಿದ್ದಾರೆ.

ಯುವರತ್ನ ಪುನೀತ್‌ ಚಿತ್ರದಲ್ಲಿ ಧನಂಜಯ್‌ ವಿಲನ್‌!

 

ಬಾಲಿವುಡ್ ಖ್ಯಾತ ನಟ ಸುಮೀತ್ ಸೈಗಲ್ ಹಾಗೂ ಶಾಹೀನ್ ಬಾನು ಪುತ್ರಿ ಸಾಯೇಷಾ, ಮೊದಲು ಅಭಿನಯಿಸಿದ ಸಿನಿಮಾ ತೆಲಗಿನ 'ಅಕಿಲಾ'. ಆನಂತರ ಬಾಲಿವುಡ್‌ನಲ್ಲಿ ಅಜಯ್‌ ದೇವಗನ್‌ಗೆ ಜೋಡಿಯಾಗಿ ಶಿವಾಯ್‌ನಲ್ಲಿಯೂ ನಟಿಸಿದ್ದಾರೆ.

ಇನ್ನು 'ಗಜಿನಿಕಾಂತ್' ಸಿನಿಮಾದಲ್ಲಿ ಆರ್ಯಗೆ ಜೋಡಿ ಆಗಿ ಸಾಯೇಷಾ ಕಾಣಿಸಿಕೊಂಡಿದ್ದರು. ಈ ಆನ್‌ಸ್ಕ್ರೀನ್ ಜೋಡಿ ಬಗ್ಗೆ ಆಫ್‌ಸ್ಕ್ರೀನ್‌ನಲ್ಲಿಯೂ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಈ ರೂಮರ್ಸ್ ಬಗ್ಗೆ ಖುದ್ದು ಆರ್ಯ ಅವರೇ ಸಾಯೀಷಾ ಅವರನ್ನು ಮದುವೆಯಾಗುತ್ತಿರುವುದಾಗಿ ಪ್ರೇಮಿಗಳ ದಿನದಂದು ಖಚಿತಪಡಿಸಿದ್ದಾರೆ. ಮುಂದಿನ ತಿಂಗಳು ಜೋಡಿ ದಾಂಪತ್ಯಕ್ಕೆ ಕಾಲಿಡಲಿದೆ.

ಮಲ್ಪೆ ಬೀಚ್ ಪವರ್ ಹೆಚ್ಚಿಸಿದ ಯುವರಥನ್!