ಮೊನ್ನೆ ಮೊನ್ನೆ ಸಲ್ಮಾನ್‌ ಖಾನ್‌ ನನಗೆ ಮದುವೆ ಬೇಡ. ಆದರೆ ಮಗುವನ್ನು ಹೊಂದುವ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಈಗ ಬಾಲಿವುಡ್‌ ನಟಿ ಮಾಹಿ ಗಿಲ್‌ ನನಗೆ ಮೂರು ವರ್ಷದ ಮಗುವಿದೆ. ಆದರೆ ನಾನಿನ್ನೂ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ದರ್ಶನ್ ಕುರುಕ್ಷೇತ್ರ ಚಿತ್ರದ ನಂತರ ಸುದೀಪ್ ಪೈಲ್ವಾನ್ ಬಿಡುಗಡೆ!

ಇವೆರಡೂ ಆಧುನಿಕ ರಿಲೇಷನ್‌ಶಿಪ್‌ನ ಎರಡು ಭಿನ್ನ ದೃಷ್ಟಿಕೋನಗಳು. ಮದುವೆಯಾಗದೇ ಮಕ್ಕಳನ್ನು ಹೊಂದುವುದು, ತನ್ನ ಇಷ್ಟದ ಗೆಳೆಯ, ಗೆಳತಿಯೊಂದಿಗೆ ಇರುವುದು, ಮದುವೆಯ ಆಚೆಗೂ ತಮ್ಮ ಇಷ್ಟದ ಸಂಸಾರವನ್ನು ಕಟ್ಟಿಕೊಳ್ಳುವುದು ಸೆಲಬ್ರಿಟಿ ಮಟ್ಟದಲ್ಲಿ ಮುನ್ನೆಲೆಗೆ ಬರುತ್ತಿದೆ.

‘ದೇವ್‌ ಡಿ’ ಚಿತ್ರದ ಮೂಲಕ ಇಡೀ ಬಾಲಿವುಡ್‌ ತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಿದ್ದ ಮಾಹಿ ಗಿಲ್‌ ನಂತರ ಅವಕಾಶಗಳ ಮೇಲೆ ಅವಕಾಶ ಪಡೆದಿದ್ದವರು. ಈಗ ‘ನಾನು ಒಂದು ಹೆಣ್ಣು ಮಗುವಿನ ತಾಯಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಇದೇ ಆಗಸ್ಟ್‌ಗೆ ಅವಳಿಗೆ ಮೂರು ವರ್ಷಗಳು ತುಂಬಲಿವೆ.

2019ರಲ್ಲಿ ಭರ್ಜರಿ ಯಶಸ್ಸು ಕಂಡ ಕಿರುಚಿತ್ರಗಳಿವು!

ಮದುವೆ ಎನ್ನುವುದು ನಮ್ಮ ನಮ್ಮ ಆಲೋಚನಾ ವಿಧಾನಕ್ಕೆ ಸಂಬಂಧಿಸಿದ್ದು. ನನಗೆ ಮದುವೆ ಅಷ್ಟೊಂದು ಮುಖ್ಯ ಎಂದು ಅನ್ನಿಸಿಯೇ ಇಲ್ಲ. ಮದುವೆ ಬೇಕು ಎಂದಾಗ ಮದುವೆಯಾಗುತ್ತೇನೆ’ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

ಇಷ್ಟೆಲ್ಲಾ ಆದ ಮೇಲೆ ಮಗುವಾಗಿ ಮೂರು ವರ್ಷ ಕಳೆದರೂ ಈ ವಿಚಾರವನ್ನು ಇದುವರೆಗೂ ಬಚ್ಚಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಏಳುವುದು ಸಹಜ. ಇದಕ್ಕೂ ಮಾಹಿ ಉತ್ತರ ಕೊಟ್ಟಿದ್ದಾರೆ. ‘ನನಗೆ ಇದುವರೆಗೂ ಈ ವಿಚಾರವನ್ನು ಎಲ್ಲಿಯೂ ಹೇಳಿಕೊಳ್ಳುವ ಸಂದರ್ಭ ಬಂದಿರಲಿಲ್ಲ. ಈಗ ಹೇಳಿಕೊಳ್ಳಬೇಕು ಎನ್ನಿಸಿತು ಅದಕ್ಕೆ ಹೇಳಿಕೊಂಡೆ’ ಎಂದಿರುವ ಮಾಹಿ ಗಿಲ್‌ ಮಗುವಿಗೆ ವೆರೋನಿಕಾ ಎನ್ನುವ ಹೆಸರಿಟ್ಟಿದ್ದು, ಮಗುವಿನ ಅಪ್ಪನ ಬಗ್ಗೆ ಮಾತ್ರ ಏನೂ ಹೇಳಿಕೊಂಡಿಲ್ಲ.