ನಟ ಶಾರುಖ್ ಖಾನ್ ಅವರು ಕಿಂಗ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದ ನಟ ಶಾರುಖ್ ಖಾನ್ ಅವರ ಬೆನ್ನಿಗೆ ತೀವರ ಗಾಯವಾಗಿದೆ, ತಕ್ಷಣವೇ ನಟನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಅವರನ್ನು ಪರೀಕ್ಷಿಸಿರುವ ವೈದ್ಯರು…

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು 'ಕಿಂಗ್' ಸಿನಿಮಾದ (King) ಶೂಟಿಂಗ್‌ನಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ. ಅವರ ಬೆನ್ನಿಗೆ ಗಾಯವಾಗಿದ್ದು ತೀವ್ರ ನೋವಿನಿಂದ ಅವರು ಬಳಲುತ್ತಿದ್ದಾರೆ. ಈ ಕಾರಣಕ್ಕೆ ಕಿಂಗ್ ಸಿನಿಮಾ ಶೂಟಿಂಗ್‌ ಸ್ಥಗಿತಗೊಳಿಸಲಾಗಿದ್ದು, ಸದ್ಯ ಶಾರುಖ್ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಚಿತ್ರದಲ್ಲಿ ಶಾರುಖ್ ಜೋಡಿಯಾಗಿ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟರಾದ ಅನಿಲ್ ಕಪೂರ್ ಹಾಗೂ ಅಭಿಷೇಕ್ ಬಚ್ಚನ್ ಸಹ ನಟಿಸುತ್ತಿದ್ದಾರೆ.

ನಟ ಶಾರುಖ್ ಖಾನ್ ಅವರು ಕಿಂಗ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದ ನಟ ಶಾರುಖ್ ಖಾನ್ ಅವರ ಬೆನ್ನಿಗೆ ತೀವರ ಗಾಯವಾಗಿದೆ, ತಕ್ಷಣವೇ ನಟನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಅವರನ್ನು ಪರೀಕ್ಷಿಸಿರುವ ವೈದ್ಯರು, ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಸುದ್ದಿಯಿಂದ ಆತಂಕಕ್ಕೊಳಗಾಗಿದ್ದ ಶಾರುಖ್ ಖಾನ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಿಂಗ್ ಸಿನಿಮಾ ಬಹತಾರಾಗಣ ಹೊಂದಿದೆ. ಈ ಚಿತ್ರವವನ್ನು ಶ್ರೀಲಂಕಾ ಸೇರಿದಂತೆ ಹಲವು ವಿದೇಶಗಳಲ್ಲೂ ಚಿತ್ರೀಕರಣ ಮಾಡಲಾಗುತ್ತಿದೆ. ಇದೀಗ ಶಾರುಖ್ ಖಾನ್ ಆರೋಗ್ಯ ಸರಿಯಲ್ಲದ ಕಾರಣ, ಮಿಕ್ಕ ನಟರುಗಳ ಪೋರ್ಶನ್ ಶೂಟಿಂಗ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇನೇ ಆಗಿದ್ದರೂ, ಶಾರುಖ್ ಖಾನ್ ಅವರು ಸದ್ಯ ಸುಧಾರಿಸಿಕೊಳ್ಳುತ್ತಿದ್ದು, ಆದಷ್ಟೂ ಬೇಗ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 

ನಟ ಶಾರುಖ್ ಖಾನ್ ಸಿನಿಜೀವನ ಏರಿಳಿತಗಳ ಹಾದಿಯಲ್ಲಿದೆ. ಜವಾನ್, ಪಠಾಣ್ ಸಿನಿಮಾಗಳ ಮೂಲಕ ಏರುದಾರಿಯಲ್ಲಿದ್ದ ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾ ಮೂಲಕ ಮತ್ತೆ ಸೋಲಿನ ದಾರಿಗೆ ಮರಳೀದ್ದರು. ಸದ್ಯ ಕಿಂಗ್ ಸಿನಿಮಾದ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಿಂಗ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮನೆಮಾಡಿದೆ. ಕಾರಣ, ಶಾರುಖ್‌ ಖಾನ್ ಸೇರಿದಂತೆ, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್ ಮುಂತಾದ ಸ್ಟಾರ್‌ಗಳು ಈ ಚಿತ್ರದಲ್ಲಿದ್ದಾರೆ. ಬಹುತಾರಾಗಣದ ಈ ಸಿನಿಮಾ ಬಾಲಿವುಡ್‌ ಸಿನಿರಂಗಕ್ಕೆ ಹೊಸ ಸಕ್ಸಸ್ ತರಬಹುದು ಎಂಬ ಮಾತು ಸಿನಿಪಂಡಿತರ ವಲಯದಲ್ಲಿ ಚರ್ಚೆ ಆಗಿದೆ.