Asianet Suvarna News Asianet Suvarna News

ಶಾಲಾ ವಾರ್ಷಿಕೋತ್ಸವದಲ್ಲಿ ಮಗಳು ಆರಾಧ್ಯ ನಟನೆಗೆ ಅಮ್ಮ ಐಶ್ವರ್ಯಾ ರೈ ರಿಯಾಕ್ಷನ್ ಹೇಗಿತ್ತು: ವೀಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಐಶ್ವರ್ಯಾ ಪುತ್ರಿ ಆರಾಧ್ಯ ನಟನೆಯ ವೀಡಿಯೋ ಕ್ಲಿಂಪಿಂಗ್ ವೈರಲ್ ಆಗಿದ್ದು, ಆರಾಧ್ಯಳ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗ್ತಿದೆ. ಇದರ ಜೊತೆ ಜೊತೆಗೆ ತಾಯಿಯಾಗಿ ಜೊತೆಗೆ ಒಬ್ಬ ನಟಿಯೂ ಆಗಿ ಐಶ್ವರ್ಯಾ ರೈ ಪ್ರತಿಕ್ರಿಯೆ ಹೇಗಿತ್ತು ಎಂದು ತೋರಿಸುವ ವೀಡಿಯೋವೊಂದು ವೈರಲ್ ಆಗಿದೆ. 

Bollywood Actor Aishwarya Rai records daughter Aaradhya acting on phone: Video goes viral akb
Author
First Published Dec 17, 2023, 4:46 PM IST

ನವದೆಹಲಿ: ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್  ಪುತ್ರಿ ಆರಾಧ್ಯ ಬಚ್ಚನ್, ತಾನು ಓದುತ್ತಿರುವ ಮುಂಬೈನ ಧೀರುಬಾಯ್ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದು, ಇತ್ತೀಚೆಗೆ ನಡೆದ ಶಾಲೆಯ ವಾರ್ಷಿಕೋತ್ಸವದಲ್ಲಿ ನಾಟಕವೊಂದರಲ್ಲಿ ತಲಾ ನಟನೆ ತೋರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಐಶ್ವರ್ಯಾ ಪುತ್ರಿ ಆರಾಧ್ಯ ನಟನೆಯ ವೀಡಿಯೋ ಕ್ಲಿಂಪಿಂಗ್ ವೈರಲ್ ಆಗಿದ್ದು, ಆರಾಧ್ಯಳ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗ್ತಿದೆ. ಇದರ ಜೊತೆ ಜೊತೆಗೆ ತಾಯಿಯಾಗಿ ಜೊತೆಗೆ ಒಬ್ಬ ನಟಿಯೂ ಆಗಿ ಐಶ್ವರ್ಯಾ ರೈ ಪ್ರತಿಕ್ರಿಯೆ ಹೇಗಿತ್ತು ಎಂದು ತೋರಿಸುವ ವೀಡಿಯೋವೊಂದು ವೈರಲ್ ಆಗಿದೆ. 

ಕಳೆದೆರಡು ದಿನಗಳಿಂದ ಇನ್ಸ್ಟಾಗ್ರಾಮ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ, ಸಿನಿಮಾ ವೆಬ್‌ಸೈಟ್‌ಗಳಲ್ಲಿ ಎಲ್ಲಿ ನೋಡಿದರಲ್ಲಿ ನಟಿ ಐಶ್ವರ್ಯಾ ಪುತ್ರಿ ಆರಾಧ್ಯ ಬಚ್ಚನ್‌ ಸ್ಟೇಜ್ ಮೇಲೆ ನಾಟಕವೊಂದರಲ್ಲಿ ನಟಿಸುತ್ತಿರುವ ದೃಶ್ಯದ ತುಣುಕೇ ಕಾಣಿಸುತ್ತಿದ್ದು, ಐಶ್ವರ್ಯಾ ಅಭಿಮಾನಿಗಳು, ಸೇರಿದಂತೆ ನೆಟ್ಟಿಗರು ಆರಾಧ್ಯ ನಟನೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಆರಾಧ್ಯಳನ್ನು ಐಶ್ವರ್ಯಾ ಮಗಳೆಂದು ನೋಡದೇ 13ರ ವಯಸ್ಸಿನ ಸಾಮಾನ್ಯ ಹುಡುಗಿಯಂತೆಯೇ ಕಾಣುವಂತೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇತ್ತೀಚೆಗೆ ತೆರೆ ಕಂಡ ಸ್ಟಾರ್‌ ಕಿಡ್‌ಗಳೇ ಭಾಗಿಯಾಗಿದ್ದ, ಝೋಯಾ ಅಕ್ತರ್‌ ನಿರ್ದೇಶನದ ದಿ ಆರ್ಕೀಸ್‌ ಸಿನಿಮಾದಲ್ಲಿರುವ ನಟಿಯರಿಂಗಿಂತ ಚೆನ್ನಾಗಿ ಆರಾಧ್ಯ ರೈ ಬಚ್ಚನ್ ನಟಿಸಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಸಂಬಂಧಿಕರ ಮದುವೆಯಲ್ಲಿ ಆರಾಧ್ಯ ಬಚ್ಚನ್ ಡ್ಯಾನ್ಸ್: ಸ್ಟಾರ್ ಆಗೋದು ಗ್ಯಾರಂಟಿ

ಈ ಮಧ್ಯೆ ಮಗಳ ನಟನೆಯ ಪ್ರದರ್ಶವನ್ನು ಅಮ್ಮನಾಗಿ ಬಹಳ ಸಂತಸದಿಂದ ತಾಯಿ ಐಶ್ವರ್ಯಾ ರೈ ನಗುಮುಖದೊಂದಿಗೆ ಎಂಜಾಯ್ ಮಾಡುತ್ತಿದ್ದು, ಈ ವೀಡಿಯೋ ಕೂಡ ಈಗ ವೈರಲ್ ಆಗಿದೆ. ಎಲ್ಲ ಅಮ್ಮಂದಿರಂತೆ ಐಶ್ವರ್ಯಾ ಕೂಡ ತನ್ನ ಮಗಳ ಮೊದಲ ಸ್ಟೇಜ್ ಪರ್ಫಾರ್ಮೆನ್ಸ್‌ ಅನ್ನು ಎಂಜಾಯ್ ಮಾಡುತ್ತಾ ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಈ ವೀಡಿಯೋಗಳು ಐಶ್ವರ್ಯಾ ರೈ ಅವರ ಹಲವು ಫ್ಯಾನ್‌ ಪೇಜ್‌ಗಳಲ್ಲಿ ವೈರಲ್ ಆಗಿವೆ.

ಈ ಮಧ್ಯೆ ಆರಾಧ್ಯ ತಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ  ಮೊಮ್ಮಗಳು ಆರಾಧ್ಯ ನಟನೆಯನ್ನು ಶ್ಲಾಘಿಸಿದ್ದು, ತಮ್ಮ ಬ್ಲಾಗ್‌ನಲ್ಲಿ ಆರಾಧ್ಯಾ ವೇದಿಕೆ ಮೇಲೆ ಸಂಪೂರ್ಣ ನ್ಯಾಚುರಲ್ ಆಗಿ ಇದ್ದರು  ಎಂದು ಬರೆದುಕೊಂಡಿದ್ದಾರೆ. 'ನಾನು ಶೀಘ್ರದಲ್ಲೇ ನಿಮ್ಮೊಂದಿಗೆ ಇರುತ್ತೇನೆ, ಆರಾಧ್ಯಳ ಶಾಲೆಯಲ್ಲಿ ಆಕೆಯ ನಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ.. ಇದು ನಮಗೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ಕ್ಷಣ, ವೇದಿಕೆಯ ಮೇಲೆ ಸಂಪೂರ್ಣ ಸಹಜವಾಗಿ  ಆಕೆ ಇದ್ದಳು ಎಂದು ಮೊಮ್ಮಗಳ ಬಗ್ಗೆ ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ. 

ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಮಧ್ಯೆ ಬಿರುಕು, ಡಿವೋರ್ಸ್ ಪಡೆದುಕೊಂಡ್ರಾ ತಾರಾ ಜೋಡಿ!

ಆರಾಧ್ಯ ಬಚ್ಚನ್ ಅವರು ಅಭಿಷೇಕ್ ಹಾಗೂ ಐಶ್ವರ್ಯಾ ರೈ ಬಚ್ಚನ್  ಅವರ  ಪುತ್ರಿಯಾಗಿದ್ದು, ಐಶ್ವರ್ಯಾ ರೈ ಹಾಗೂ ಅಬಿಷೇಕ್ ಬಚ್ಚನ್ ಅವರು ಉಮ್ರೋ ಜಾನ್, ಗುರು, ಕುಚ್ ನಾ ಕಾವೋ ಹಾಗೂ ರಾವಣ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. 2007ರ ಏಪ್ರಿಲ್ 20 ರಂದು ಈ ಜೋಡಿ ಮದುವೆಯಾಗಿದ್ದು, 2011ರಲ್ಲಿ ಆರಾಧ್ಯ ಜನಿಸಿದ್ದಳು. ಇನ್ನು ಐಶ್ವರ್ಯಾ ರೈಯವರು ಕೊನೆಯದಾಗಿ ಮಣಿರತ್ನಂ ನಟನೆಯ ಪೊನ್ನಿಯಿನ್ ಸೆಲ್ವಂ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ತ್ರಿಶಾ, ವಿಕ್ರಂ, ಕಾರ್ತಿ, ಜಯಂ ರವಿ, ಶೋಬಿತಾ ಧೂಲಿಪಲ ಹಾಗೂ ಐಶ್ವರ್ಯಾ ಲಕ್ಷ್ಮಿ ಅವರು ನಟಿಸಿದ್ದಾರೆ. 

ಇನ್ನು ಅಭಿಷೇಕ್ ಬಚ್ಚನ್ ಅವರು ಘೂಮರ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದಾರೆ. ಸೈಯಮಿ ಖೇರ್ ಹಾಗೂ ಅಂಗದ್ ಬೇಡಿ ಈ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದಾರೆ. 

 

 

Follow Us:
Download App:
  • android
  • ios