ಇತ್ತೀಚಿನ ದಶಕಗಳಲ್ಲಿ ಎಲ್ಲೆಲ್ಲೂ ಸ್ಟಾರ್ ಕಿಡ್‌ಗಳ ಹವಾ. ಸೆಲೆಬ್ರಿಟಿಗಳಿಗಿಂತಲೂ ಹೆಚ್ಚಾಗಿ ಅವರ ಮಕ್ಕಳ ಹಿಂದೆ ಬೀಳ್ತಿದ್ದಾರೆ ಪಾಪರಾಜಿಗಳು. ವಿರುಷ್ಕಾ ಮಗಳು ಬಿಟ್ಟರೆ ಬೇರೆಲ್ಲ ಸ್ಟಾರ್ ಮಕ್ಕಳು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್ ಆಗ್ತಿದ್ದಾರೆ.

ಸ್ಟಾರ್ ಮಕ್ಕಳ ಹೊಸ ಫೋಟೋಗಾಗಿ ಜನ ಕಾಯ್ತಿರೋದನ್ನು ಅರಿತವರಂತೆ ಪಾಪರಾಜಿಗಳೂ ಸೆಲೆಬ್ರಿಟಿ ಕಿಡ್ಸ್ ಹಿಂದೆ ಬಿದ್ದಿದ್ದಾರೆ. ಸದ್ಯಕ್ಕೀಗ ಸಖತ್ ವೈರಲ್ ಆಗ್ತಿರೋದು ಐಶ್‌ ಬೇಬಿ ಮಗಳು ಆರಾಧ್ಯಾ ಬಚ್ಚನ್ ವೀಡಿಯೋ. ಅದನ್ನು ನೋಡಿದ ಮಂದಿಯೆಲ್ಲ ಈಕೆ ಖಂಡಿತಾ ಬಾಲಿವುಡ್ ಸ್ಟಾರ್ ಆಗಿಯೇ ಆಗ್ತಾಳೆ ಅಂತ ಭವಿಷ್ಯ ನುಡಿದಿದ್ದಾರೆ.

ಆರಾಧ್ಯ ಬರ್ತ್‌ಡೇ: ಬಚ್ಚನ್ ಫ್ಯಾಮಿಲಿ ಬಗ್ಗೆ ನೀವರಿಯದ ಸೀಕ್ರೆಟ್ಸ್! ...

ಹಾಗೆ ನೋಡಿದರೆ ಆರಾಧ್ಯಾಗೆ ಕಿರಿಯ ವಯಸ್ಸಿನಿಂದಲೂ ಕ್ಯಾಮರಾ ಪ್ಲ್ಯಾಶ್ ಅಂದರೆ ಭಯ. ಅದಕ್ಕೆ ಈಕೆಗೆ ಏಳೆಂಟು ವರ್ಷ ಆಗುವವರೆಗೂ ಪಬ್ಲಿಕ್ ಪ್ಲೇಸ್‌ಗಳಲ್ಲಿ ಅಮ್ಮ ಐಶ್ವರ್ಯಾ ರೈ ಸೊಂಟದಿಂದ ಕೆಳಗಿಳಿಯುತ್ತಿರಲಿಲ್ಲ. ಈಗೀಗ ಕೊಂಚ ದೊಡ್ಡವಳಾಗ್ತಿರುವಂತೆ ಕ್ಯಾಮರಾ ಫ್ಲಾಶ್‌ ಭಯವೂ ಕೊಂಚ ಕಡಿಮೆ ಆದಂತಿದೆ. ತುಂಬ ಚಿಕ್ಕವಳಿಂದಲೂ ಈಕೆ ಸೋಷಿಯಲ್ ಆಗಿ ಅಷ್ಟು ಬೆರೆತವಳಲ್ಲ.

ಬದಲಿಗೆ ಅಮ್ಮನ ಸೆರಗಿನ ಹಿಂದೆ ಅವಿತವಳು. ಅಪ್ಪ ಅಭಿಷೇಕ್‌ ಬಚ್ಚನ್‌ಗಿಂತಲೂ ಹೆಚ್ಚಾಗಿ ಅಮ್ಮ ಐಶ್ವರ್ಯಾ ಜೊತೆಗೇ ಇದ್ದವಳು. ಈ ಅಮ್ಮ ಮಗಳ ಬಾಂಧವ್ಯವನ್ನು ಜಯಾ ಬಚ್ಚನ್ ಸಹ ಕೊಂಡಾಡಿದ್ದರು. ತನ್ನ ಸೊಸೆ ಅಷ್ಟು ದೊಡ್ಡ ಸ್ಟಾರ್ ಆದರೂ ಮಗುವಿನ ಬಗ್ಗೆ ಈ ಪರಿ ಕಾಳಜಿ ಮಾಡುತ್ತಿರುವುದು ಸ್ವತಃ ಜಯಾ ಬಚ್ಚನ್‌ಗೂ ಸೋಜಿಗವೇ.

ಕಸಿನ್ ಮದುವೆಯಲ್ಲಿ ಫ್ಯಾಮಿಲಿ ಜೊತೆ ಐಶ್ ಸಂಭ್ರಮ..! ...

ಆದರೆ ಈಗ ಆರಾಧ್ಯ ಬಚ್ಚನ್ ತಾನೂ ಅಮ್ಮನ ಹಾದಿಯಲ್ಲೇ ನಡೆಯುವ ಬಗ್ಗೆ ಸಣ್ಣ ಸೂಚನೆ ಕೊಟ್ಟಿದ್ದಾಳೆ, ಅದೂ ಬೆಂಗಳೂರಿನಲ್ಲೇ ಅನ್ನೋದು ವಿಶೇಷ. ಇತ್ತೀಚೆಗೆ ಬೆಂಗಳೂರಿನಲ್ಲಿ ಐಶ್ವರ್ಯಾ ಸೋದರ ಸಂಬಂಧಿ ಶ್ಲೋಕ್ ಶೆಟ್ಟಿ ವಿವಾಹ ಸಮಾರಂಭ ನಡೆಯಿತು. ಇದರಲ್ಲಿ ಐಶ್ವರ್ಯಾ ಪತಿ ಅಭಿಷೇಕ್‌, ಮಗಳು ಆರಾಧ್ಯಾ ಜೊತೆಗೆ ಪಾಲ್ಗೊಂಡಿದ್ದರು. ಈ ವೇಳೆ ಒಂದು ಹೊತ್ತಲ್ಲಿ ಐಶ್ವರ್ಯಾ, ಅಭಿಷೇಕ್ ಜೊತೆಗೆ ಆರಾಧ್ಯಾನೂ ಸ್ಟೇಜ್ ಏರಿದ್ದಾಳೆ.

ಅಪ್ಪ ಅಮ್ಮ ಮ್ಯೂಸಿಕ್‌ಗೆ ಹೆಜ್ಜೆ ಹಾಕೋದು ನೋಡಿ ತಾನೂ ಡ್ಯಾನ್ಸ್ ಮಾಡೋಕೆ ಶುರು ಮಾಡಿದ್ದಾಳೆ. ಅಪ್ಪ ಅಭಿಷೇಕ್ ಅಭಿನಯದ ದೋಸ್ತಾನಾ ಚಿತ್ರದ ಹಾಡಿಗೆ ಈ ಪೋರಿ ಹಾಕಿದ ಹೆಜ್ಜೆ ನೋಡಿ ಅಲ್ಲೆಲ್ಲ ವಿಶಲ್, ಕರತಾಡನ ಮುಗಿಲು ಮುಟ್ಟಿದೆ. ಮುದ್ದು ಮಗಳು ಅಷ್ಟು ಚಂದ ಡ್ಯಾನ್ಸ್ ಮಾಡೋದನ್ನು ಕಂಡು ಅಮ್ಮ ಐಶ್ವರ್ಯಾ ಮಗಳನ್ನು ಸ್ಟೇಜ್ ಮೇಲೆಯೇ ಅಪ್ಪಿ ಮುದ್ದಾಡಿದ್ದಾರೆ. ಅಭಿಷೇಕ್ ಕೂಡ ಮಗಳ ಡ್ಯಾನ್ಸ್ ನೋಡಿ ಸಖತ್ ಖುಷಿ ಪಟ್ಟಿದ್ದಾರೆ.

ಶೂಟಿಂಗ್‌ ಮುಗಿಸಿ ಮಗಳು ಆರಾಧ್ಯಾ ಜೊತೆ ಮುಂಬೈಗೆ ಮರಳಿದ ಐಶ್ವರ್ಯಾ! ...

ತನ್ನ ಮಗಳು ಡ್ಯಾನ್ಸ್ ಮಾಡಿದ ರೀತಿ ಕಂಡು ಐಶ್ವರ್ಯಾ ರೈಗೆ ಎಷ್ಟು ಖುಷಿ ಆಗಿರಬಹುದು ಅನ್ನೋದು ಆಕೆ ಮಗಳನ್ನು ಅಪ್ಪಿಕೊಂಡು ಮುದ್ದಾಡಿದ ರೀತಿಯಲ್ಲೇ ತಿಳಿಯುತ್ತದೆ. ಜೊತೆಗೆ ಈ ವೀಡಿಯೋವನ್ನು ಐಶ್ವರ್ಯಾ ರೈ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲೂ ಅಪ್‌ಲೋಡ್‌ ಮಾಡಿದ್ದಾರೆ. ಈ ಪೋರಿಯ ಡ್ಯಾನ್ಸ್‌ಗೆ ನೆಟಿಜನ್ಸ್ ಸಹ ಫಿದಾ ಆಗಿದ್ದಾರೆ. ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ.

ಜೊತೆಗೆ ಬಾಲಿವುಡ್‌ ಅಂಗಳದಲ್ಲೂ ಈ ವೀಡಿಯೋ ಸಖತ್‌ ಸೌಂಡ್ ಮಾಡುತ್ತಿದೆ. ಅಭಿಮಾನಿಗಳ ಜೊತೆಗೆ ಬಾಲಿವುಡ್‌ ಮಂದಿಯೂ ಜ್ಯೂನಿಯರ್ ಐಶ್‌ಗೆ ಶುಭ ಹಾರೈಸಿದ್ದಾರೆ. ಸೌಂದರ್ಯ, ಡ್ಯಾನ್ಸ್, ನಟನೆಯಲ್ಲೂ ಮುಂದಿರುವ ಈ ಪ್ರತಿಭಾನ್ವಿತ ಬಾಲೆ ಮುಂದೆ ತಾಯಿಯಂತೆ ಬಾಲಿವುಡ್‌ನ ಸೂಪರ್‌ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡರೂ ಅಚ್ಚರಿಯಿಲ್ಲ ಎಂಬ ಮಾತು ಬಿ ಟೌನ್‌ನಲ್ಲಿ ಕೇಳಿಬರುತ್ತಿದೆ. ಅಜ್ಜ ಅಮಿತಾಬ್, ಅಜ್ಜಿ ಜಯಾ ಬಾಧುರಿ, ಅಮ್ಮ ಐಶ್‌, ಅಪ್ಪ ಅಭಿಷೇಕ್ ಹೀಗೆ ಮನೆಯಿಡೀ ಸ್ಟಾರ್‌ ಕಲಾವಿದರೇ ಇರುವಾಗ ಮುಂದೊಂದು ದಿನ ಆರಾಧ್ಯಾ ಈ ಮಾತು ನಿಜ ಮಾಡಿದರೂ ಅಚ್ಚರಿಯಿಲ್ಲ. ಆಲ್ ದಿ ಬೆಸ್ಟ್ ಆರಾಧ್ಯಾ ಬೇಬಿ.