Trending viral story: ಸದ್ಯ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಮೊನಾಲಿಸಾ ಅವರ ಹೊಸ ವಿಡಿಯೋ ಅಪ್‌ಲೋಡ್ ಆಗಿದ್ದು, ಮತ್ತೊಮ್ಮೆ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಬಳಕೆದಾರರು ಭೋಲೆನಾಥ್ ಅವರ ಆಶೀರ್ವಾದ ಇದಕ್ಕೆ ಕಾರಣವೆಂದು ಹೇಳಿದ್ದಾರೆ. 

ಪ್ರಯಾಗ್‌ರಾಜ್‌ನಲ್ಲಿ ನಡೆದ 2025 ರ ಮಹಾಕುಂಭದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುತ್ತಿದ್ದ ಸರಳ ಯುವತಿ ಮೊನಾಲಿಸಾ ಭೋಂಸ್ಲೆ ಲಕ್ಷಾಂತರ ಜನರ ಮನಗೆದ್ದವರು. ಒಂದು ಕಾಲದಲ್ಲಿ ಜನಸಂದಣಿಯ ನಡುವೆ ಸಣ್ಣ ಅಂಗಡಿಯಲ್ಲಿ ಮಣಿ ಮಾರುತ್ತಿದ್ದ ಈ ಬೆಡಗಿ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದರು. ಹಾಗಾದರೆ ಅವರೀಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ? ಎಂಬ ಕುತೂಹಲವಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ..

ಮಹಾಕುಂಭದಲ್ಲಿ ತನ್ನ ಮುಗ್ಧ ನಗು, ಚೆಂದದ ಕಣ್ಣು ಮತ್ತು ತನ್ನದೇ ಆದ ಸ್ಟೈಲ್‌ನಿಂದ ಜನರ ಹೃದಯ ಗೆದ್ದ ಮೊನಾಲಿಸಾ ಇಂದು ಕ್ಯಾಮೆರಾ ಮುಂದೆ ಪೂರ್ಣ ವಿಶ್ವಾಸದಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಮೊನಾಲಿಸಾ ಭೋಂಸ್ಲೆ ಮೂಲತಃ ಮಧ್ಯಪ್ರದೇಶದ ಇಂದೋರ್‌ನವರು. ಜೀವನೋಪಾಯಕ್ಕಾಗಿ ಮಣಿಗಳನ್ನು ಮಾರುತ್ತಿದ್ದರು. ಆದರೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರ ಗುಂಪಿನ ನಡುವೆ ಅವರ ಮುಖವು ಇದ್ದಕ್ಕಿದ್ದಂತೆ ಜನರ ಗಮನ ಸೆಳೆಯಿತು ಮತ್ತು ಅಲ್ಲಿಂದ ಅವರ ಅದೃಷ್ಟವೇ ಬದಲಾಯ್ತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋ 

ಮೊನಾಲಿಸಾ ಕಪ್ಪು ಮೈಬಣ್ಣ, ಕಿತ್ತಳೆ ಬಣ್ಣದ ಕಣ್ಣುಗಳು ಮತ್ತು ತೀಕ್ಷ್ಣವಾದ ಮುಖಚರ್ಯೆ ಜನರನ್ನು ಎಷ್ಟು ಆಕರ್ಷಿಸಿದವು ಎಂದರೆ ಮಾಲೆಗಳನ್ನು ಖರೀದಿಸುವುದಕ್ಕಿಂತ ಹೆಚ್ಚಿನ ಜನರು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ವಿಡಿಯೋ ಮಾಡಲು ಪ್ರಾರಂಭಿಸಿದರು. ಆಕೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆದವು.

ವೈರಲ್ ಆಗುತ್ತಿದ್ದಂತೆ ಮೊನಾಲಿಸಾ ರಾತ್ರೋ ರಾತ್ರಿ ಸ್ಟಾರ್ ಆದರು. ಅವರು ಎಂದಿಗೂ ಊಹಿಸದ ಮಟ್ಟಕ್ಕೆ ಜನಪ್ರಿಯವಾದರು. ಈ ಜನಪ್ರಿಯತೆಯು ಮನರಂಜನಾ ಉದ್ಯಮದಲ್ಲಿ ಅವರಿಗೆ ಬಾಗಿಲು ತೆರೆಯಿತು. ಸದ್ಯ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಮೊನಾಲಿಸಾ ಅವರ ಹೊಸ ವಿಡಿಯೋ ಅಪ್‌ಲೋಡ್ ಆಗಿದ್ದು, ಮತ್ತೊಮ್ಮೆ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ವಿಡಿಯೋದಲ್ಲಿ ಅವರು ಬಿಳಿ ಉಡುಪಿನಲ್ಲಿ ದೇವತೆಯಂತೆ ಕಾಣುತ್ತಾರೆ.

- @monalisabhosle_official ಖಾತೆಯಿಂದ Instagram ನಲ್ಲಿ ಹಂಚಿಕೊಂಡಿರುವ ಈ ವಿಡಿಯೋಯೊದಲ್ಲಿ ಮೊನಾಲಿಸಾ ಸೊಗಸಾದ ಬಿಳಿ ಉಡುಗೆ, ತಿಳಿ ಮೇಕಪ್, ಫ್ರೀ ಹೇರ್‌ ಸ್ಟೈಲ್ ಮಾಡಿಕೊಂಡು ಕ್ಯಾಮೆರಾ ಮುಂದೆ ಅಗಾಧವಾದ ಆತ್ಮವಿಶ್ವಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ವಿಡಿಯೋ ನೋಡಿ ಬಳಕೆದಾರರು ಲೈಕ್ಸ್‌ ಮತ್ತು ಕಾಮೆಂಟ್ಸ್‌ ಸುರಿಮಳೆಯನ್ನೇ ಹರಿಸಿದ್ದಾರೆ. ಬಳಕೆದಾರರು ಭೋಲೆನಾಥ್ ಅವರ ಆಶೀರ್ವಾದ ಇದಕ್ಕೆ ಕಾರಣವೆಂದು ಹೇಳಿದ್ದಾರೆ. ಹಾಗೆಯೇ ಅವರ ಕಠಿಣ ಪರಿಶ್ರಮ ಮತ್ತು ಹೋರಾಟವನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, "ನೀವು ತುಂಬಾ ಸುಂದರವಾಗಿ ಕಾಣುತ್ತೀರಿ." ಎಂದು ಕೆಲವರು, ಮತ್ತೆ ಕೆಲವರು ಇದನ್ನು ಮೇಕಪ್ ಮತ್ತು ಫಿಲ್ಟರ್‌ ಎಂದೂ ಕಾಮೆಂಟ್ ಮಾಡಿದ್ದಾರೆ.

ಚಿತ್ರರಂಗಕ್ಕೆ ಪಾದರ್ಪಣೆ

ವೈರಲ್ ಆದ ಕೆಲವೇ ತಿಂಗಳುಗಳಲ್ಲಿ, ಮೊನಾಲಿಸಾಗೆ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತು. ಮಾಧ್ಯಮ ವರದಿಗಳ ಪ್ರಕಾರ, ನಿರ್ದೇಶಕ ಸನೋಜ್ ಮಿಶ್ರಾ ಅವರ "ದಿ ಡೈರಿ ಆಫ್ ಮಣಿಪುರ" ಚಿತ್ರದೊಂದಿಗೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಮೊನಾಲಿಸಾ. ಈ ಚಿತ್ರದಲ್ಲಿ ಸೇನಾ ಅಧಿಕಾರಿಯ ಮಗಳ ಪಾತ್ರದಲ್ಲಿ ಮೊನಾಲಿಸಾ ಅವರ ಪಾತ್ರವನ್ನು ಪ್ರೇಕ್ಷಕರು ಮತ್ತು ಚಲನಚಿತ್ರೋದ್ಯಮ ಇಬ್ಬರೂ ಪ್ರಶಂಸಿಸಿದರು. ಈ ಚಿತ್ರವು ಅವರ ಹೊಸ ಪ್ರಯಾಣಕ್ಕೆ ಅಡಿಪಾಯವಾಯಿತು. ಬಾಲಿವುಡ್ ನಂತರ, ಮೊನಾಲಿಸಾ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ವರದಿಗಳ ಪ್ರಕಾರ, ಅವರು ಶೀಘ್ರದಲ್ಲೇ ತೆಲುಗು ಚಿತ್ರ "ಲೈಫ್" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಮತ್ತು ಅದರ ಫಸ್ಟ್ ಲುಕ್‌ನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಅದೃಷ್ಟ ಯಾವುದೇ ಸಮಯದಲ್ಲಿ ಬದಲಾಗಬಹುದು ಎಂಬುದಕ್ಕೆ ನಟಿಯಾದ ಮೊನಾಲಿಸಾ ಭೋಂಸ್ಲೆ ಅವರ ಪ್ರಯಾಣವೇ ಸಾಕ್ಷಿ. ದೊಡ್ಡ ಪರದೆಯ ಕನಸು ಕಾಣದ ಸಾಮಾನ್ಯ ಹುಡುಗಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವುದು ಅನೇಕ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದೆ.