ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾ ತೀವ್ರ ನೋಂದುಕೊಂಡಿದ್ದಾರೆ. ಇದೀಗ ಕೈಮುಗಿದು ಎಲ್ಲರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಭಾರವಾದ ಮನಸ್ಸಿನಿಂದ ಮೊನಾಲಿಸಾ ಮಾಡಿದ ಮನವಿ ಏನು?

ಮಹಾಕುಂಭದ ಮೂಲಕ ವೈರಲ್ ಆದ ಬೆಡಗಿ ಮೊನಾಲಿಸಾ ಇತ್ತೀಚೆಗೆ ಭಾರಿ ಟೀಕೆಗೂ ಗುರಿಯಾಗಿದ್ದರು. ಕಾರಣ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಬಂಧನ. ಈ ಪ್ರಕರಣ ಸಂಬಂಧ ಹಲವರು ಮೊನಾಲಿಸಾಳನ್ನು ಪ್ರಶ್ನಿಸಿದ್ದರು. ನಿರ್ದೇಶಕನ ವಕ್ರ ದೃಷ್ಟಿಯಿಂದ ಮೊನಾಲಿಸಾ ಕರಿಯರ್ ಇಲ್ಲಿಗೆ ಅಂತ್ಯ ಎಂದು ಹಲವರು ಕಮೆಂಟ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಬೆಳಿಕ ಇದೀಗ ಮೊನಾಲಿಸಾ ವಿಡಿಯೋ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ನಿರ್ದೇಶಕನ ಬಂಧನ ಪ್ರಕರಣ, ತನ್ನ ಮೇಲೆ ಬರುತ್ತಿರುವ ಟೀಕೆಗಳಿಂದ ನೊಂದಿಕೊಂಡಿರುವ ಮೊನಾಲಿಸ ಇದೀಗ ವಿಡಿಯೋ ಮೂಲಕ ಕೈಮುಗಿದು ಮನವಿ ಮಾಡಿದ್ದಾರೆ. 

ವಿಡಿಯೋ ಸಂದೇಶ
ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಸದ್ಯ ಜೈಲಿನಲ್ಲಿದ್ದಾರೆ. ನಿರೀಕ್ಷಾ ಜಾಮೀನು ಮನವಿನ್ನು ಕೋರ್ಟ್ ತಳ್ಳಿ ಹಾಕಿದೆ. ಇದರ ನಡುವೆ ಮೊನಾಲಿಸಾಳ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿತ್ತು. ಈ ಘಟನೆ ಬಳಿಕ ಕಳೆದ ಕೆಲ ದಿನಗಳಿಂದ ಮೌನವಾಗಿದ್ದ ಮೊನಾಲಿಸ ಇದೀಗ ವಿಡಿಯೋ ಸಂದೇಶ ನೀಡಿದ್ದಾರೆ.

ಸಿನಿ ಕರಿಯರ್ ಅಂತ್ಯಗೊಳ್ಳುತ್ತಿದ್ದಂತೆ ಸೀರಿಯಲ್‌ನತ್ತ ಮುಖ ಮಾಡಿದ್ರಾ ಮಹಾಕುಂಭ ಬೆಡಗಿ ಮೊನಾಲಿಸಾ?

ಕೈಗಮುಗಿದು ಮೊನಾಲಿಸಾ ಮನವಿ
ಎಲ್ಲರಿಗೂ ನಮಸ್ತೆ, ಇಂದು ನಾನು ನಿಮ್ಮ ಜೊತೆ ಕೆಲ ಮಾತಗಳನ್ನಾಡಬೇಕು. ಹಲವರು ನನ್ನ ಕುರಿತು ಕೆಟ್ಟ ಸಂದೇಶಗಳನ್ನು, ಸುಳ್ಳಿ ಮಾಹಿತಿಗಳನ್ನು ಸೋಶಿಲಯಲ್ ಮೀಡಿಯಾ ಮೂಲಕ ಹರಿಬಿಡುತ್ತಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾಜಿ ಒಳ್ಳೆ ವ್ಯಕ್ತಿ. ಅವರು ನನ್ನನ್ನು ಮಗಳಂತೆ ಕಂಡಿದ್ದಾರೆ. ಅವರು ಯಾವತ್ತೂ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿಲ್ಲ. ನಾನು ಕೈಜೋಡಿಸಿ ನಿಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ, ದಯವಿಟ್ಟು ಯಾರೂ ಕೂಡ ಸುಳ್ಳು ಮಾಹಿತಿಗಳನ್ನು, ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮೊನಾಲಿಸಾ ಮನವಿ ಮಾಡಿದ್ದಾಳೆ.

ನಿರ್ದೇಶಕನ ಬಂಧನದಿಂದ ತಳಮಳ ಶುರು
ನಿರ್ದೇಶನಕ ಆಪ್ತ ಗೆಳತಿ ನೀಡಿದ ದೂರಿನ ಆಧಾರದಲ್ಲಿ ಸನೋಜ್ ಮಿಶ್ರಾ ಬಂಧನವಾಗಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸನೋಜ್ ಮಿಶ್ರಾ ಸದ್ಯಕ್ಕೆ ಜಾಮೀನು ಪಡೆದು ಹೊರಬರುವ ಲಕ್ಷಣಗಳು ಕಾಣುತ್ತಿಲ್ಲ. ಸನೋಜ್ ಮಿಶ್ರಾ ಬಂಧನವಾಗುತ್ತಿದ್ದಂತೆ ಮುಗ್ದ ಮೊನಾಲಿಸಾ ಸಿನಿಮಾ ಕರಿಯರ್ ಮಾತ್ರವಲ್ಲ, ಆಕೆಯ ಬದುಕೇ ಅತಂತ್ರ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಜೊತೆಗೆ ಸನೋಜ್ ಮಿಶ್ರಾ ಇತಿಹಾಸ ಉತ್ತಮವಾಗಿಲ್ಲ. ಹೀಗಾಗಿ ಮೊನಾಲಿಸಾ ಬದುಕು ದುಸ್ತರವಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿತ್ತು.

View post on Instagram

ಮೊನಾಲಿಸಾಗೆ ಆಫರ್ ಮೇಲೆ ಆಫರ್
ಸನೋಜ್ ಮಿಶ್ರಾ ನಿರ್ದೇಶನದ ಮಣಿಪುರ್ ಡೈರಿ ಅನ್ನೋ ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳಲು ಇನ್ನು ಸುದೀರ್ಘ ದಿನಗಳೇ ಬೇಕಾದಬಹುದು. ಆದರೆ ಮೊನಾಲಿಸ ಸದ್ಯ ವೇದಿಕೆ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಬ್ಯೂಸಿ ಇದ್ದಾರೆ. ಮಳಿಗೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಮೊನಾಲಿಸಾ ಮುಖ್ಯ ಅತಿಥಿಯಾಗಿದ್ದಾರೆ. ಇದರ ನಡುವೆ ಕೆಲ ಧಾರವಾಹಿಗಳಲ್ಲೂ ಮೊನಾಲಿಸಾ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಅರೆಸ್ಟ್