Asianet Suvarna News Asianet Suvarna News

ಬಿಗ್‌ಬಾಸ್: ಮೊದಲ ದಿನವೇ ಆ್ಯಂಡಿ ಮೇಲೆ ಕೈ ಮಾಡಿದ ಜಯಶ್ರೀ!

ಬಿಗ್ ಬಾಸ್ ಮನೆಯಲ್ಲಿ ಮೊದಲನೆ ದಿನವೇ ಜಯಶ್ರೀ ಆ್ಯಂಡಿ ಮೇಲೆ ಕೈ ಮಾಡಿದ್ದಾರೆ! ಹಾಗಾದರೆ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನ ಏನೇನಾಯ್ತು?  ಇಲ್ಲಿದೆ ವಿವರ

bigg boss kannada season 6 First Day Highlights
Author
Bengaluru, First Published Oct 22, 2018, 9:56 PM IST | Last Updated Oct 22, 2018, 10:14 PM IST

ಬಿಗ್ ಬಾಸ್ ಮನೆ ಪ್ರವೇಶ ಪಡೆದಿದ್ದ ಸ್ಪರ್ಧಿಗಳು ಮೊದಲ ದಿನವೇ ಸುಪ್ರೀಂ ಕೋರ್ಟಿನ 377ನೇ  ನಿಯಮದ ಬಗ್ಗೆ ಚರ್ಚೆಯಾಯಿತು. ನನ್ನ ನೀನು ಗೆಲ್ಲಲಾರೆ ಸಾಂಗ್ ಮೂಲಕ ಆರಂಭವಾದ ಮನೆಯಲ್ಲಿ ಬಿಗ್ ಬಾಸ್ ನೀಡಿದ ನಾಮಿನೇಶನ್ ಟಾಸ್ಕ್ ತಲೆಬಿಸಿಹುಟ್ಟುಹಾಕಿತು.

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳು ಯಾರ್ಯಾರು?

ಶಶಿ ಮತ್ತು ರೀಮಾ ನಡುವಿನ ವಾದದ ವೇಳೆ ಮಧ್ಯೆ ಮಾತನಾಡಿದ ಆ್ಯಂಡಿಯನ್ನು ಸುಮ್ಮನಿರಿಸಲು ಜಯಶ್ರೀ ಜಾಗದಿಂದ ಎದ್ದು ಬಂದರು. ಬಂದಿದ್ದಲ್ಲದೇ ಅವರು ಮಾತನಾಡುತ್ತಿದ್ದ ವೇಳೆ ನೀನು ಮಾತನಾಡಬಾರದು ಎಂದು ಹೇಳಿದ್ದಲ್ಲದೇ ಸಲುಗೆಯಿಂದ ಒಂದು ಏಟು ನೀಡಿದರು. ಇದೇ ವಿಚಾರ ಮನೆಯಲ್ಲಿ ಚರ್ಚೆ ಹುಟ್ಟುಹಾಕಿತು. ರಶ್ಮಿ ಸಹ ಆ್ಯಂಡಿ ಬೆಂಬಲಕ್ಕೆ ಧಾವಿಸಿ ಜಯಶ್ರೀ ಜತೆ ವಾದ ಮಾಡಿದರು. 

ಕನ್ನಡ ಬಿಗ್‌ಬಾಸ್‌ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!

ಇಷ್ಟು ಸೀಸನ್ ಗಳಲ್ಲಿ ಸ್ಪರ್ಧಿಗಳ ನಡುವೆ ತನ್ನಿಂದ ತಾನೇ ವಾದ ಹುಟ್ಟಿಕೊಳ್ಳುತ್ತಿತ್ತು. ಆದರೆ ಈ ಸಾರಿ ಬಿಗ್ ಬಾಸ್ ತಾವೇ ಮುಂದಾಗಿ ಇಬ್ಬರು ನಡುವೆ ವಾದ ಹುಟ್ಟುಹಾಕಿಸಿ ನಾಮಿನೇಶನ್ ಪ್ರಕ್ರಿಯೆ ನಡೆಸಿದ್ದು ವಿಶೇಷ. ತಾವು ಯಾಕೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಅವರವರೇ ಸಮರ್ಥನೆ ಮುಂದಿಟ್ಟುಕೊಂಡರು.

Latest Videos
Follow Us:
Download App:
  • android
  • ios