ಕನ್ನಡ ಬಿಗ್ಬಾಸ್ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!
ಬಿಗ್ ಬಾಸ್ ಮನೆ ಈ ಬಾರಿ ಹೊಸ ಸಾಹಸಕ್ಕೆ ವೇದಿಕೆಯಾಗಿದೆ. ಇದೇ ಮೊದಲ ಸಾರಿಗೆ ಬಿಗ್ ಬಾಸ್ ಮನೆಯನ್ನು ಗೇ ಒಬ್ಬರು ಪ್ರವೇಶ ಮಾಡಿದ್ದಾರೆ.
377 ನೇ ನಿಯಮಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಂಡ ಮೇಲೆ ಬಿಗ್ ಬಾಸ್ ಕನ್ನಡ ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಗ್ ಬಾಸ್ ಮನೆಯೊಳಗೆ ಇದೇ ಮೊದಲ ಸಾರಿಗೆ ಗೇ ಒಬ್ಬರಿಗೆ ಪ್ರವೇಶ ಸಿಕ್ಕಿದೆ.
ಬಿಗ್ ಬಾಸ್ ಕನ್ನಡ ಮನೆ ಪ್ರವೇಶಿಸಿದ ಮೊದಲ ಸ್ಪರ್ಧಿ ಸೋನು ಪಾಟೀಲ್ ಯಾರು?
ಆ್ಯಡಂ ಪಾಶಾ ಎನ್ನುವ 35 ವರ್ಷದ ಗೇ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಹೊರದೇಶದಲ್ಲಿ ಬೆಳೆದ ಆದರೆ ನೃತ್ಯವನ್ನೇ ತಮ್ಮ ಉಸಿರಾಗಿರಿಸಿಕೊಂಡಿರುವ ಪಾಶಾ ಪ್ರವೇಶ ಮಾಡಿದ್ದಾರೆ.