ಬಿಗ್‌ ಬಾಸ್‌ ಮನೆಯಿಂದ ಹೊರಬಂದಿರುವ ಲಿಖಿತ್ ಗೊಂದಿ ತಮ್ಮ ಎಲಿಮಿನೇಷನ್‌ಗೆ ಅತಿಯಾದ ಕೋಪವೇ ಕಾರಣ ಎಂದು ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಹಸ್ಪರ್ಧಿ ಆಸಿಯಾ ಫಿರ್ದೋಸ್ ಅವರ ಕಷ್ಟದ ಜೀವನ ಹಾಗೂ ಅವರ ಒಳ್ಳೆಯ ವ್ಯಕ್ತಿತ್ವದ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.

ಬಿಗ್‌ ಬಾಸ್‌ (Bigg Boss) ಮನೆಯಿಂದ ಆಚೆ ಬಂದಿರುವ ಲಿಖಿತ್ ಗೊಂದಿ ತಮ್ಮ ದೊಡ್ಮನೆ ಜರ್ನಿಯ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ನಾನು ಹೇಗಿದ್ದೆ? ಸಿಕ್ಕ ಅನುಭವಗಳು ಏನು? ಇತರೆ ಸ್ಪರ್ಧಿಗಳು ಹೇಗಿದ್ದಾರೆ ಎಂದೆಲ್ಲ ವಿವರಿಸಿದ್ದಾರೆ. ವಿಶೇಷವಾಗಿ ಅವರು ಆಸಿಯಾ ಫಿರ್ದೋಸ್ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನ ನೀಡಿದ್ದಾರೆ.

ಆಸಿಯಾ ಫಿರ್ದೋಸ್ ಬಗ್ಗೆ ಹೇಳಿದ್ದೇನು?

ಆಸಿಯಾ ತುಂಬಾ ಒಳ್ಳೆಯವಳು. ಅವರು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇದೇ ವೇಳೆ ಅವರು ಒಂದು ಘಟನೆಯನ್ನು ನೆನಪಿಸಿಕೊಂಡರು. ಬಿಗ್‌ ಬಾಸ್ ಮನೆಯಲ್ಲಿ ಏನೋ ತಪ್ಪು ಮಾಡಿದಾಗ ರಾತ್ರಿ ನಾನು ನೆಲದ ಮೇಲೆಯೇ ಮಲಗಬೇಕಿತ್ತು. ಆ ಸಮಯದಲ್ಲಿ ನನ್ನ ಸಹಾಯಕ್ಕೆ ಅಥವಾ ನೋವಿಗೆ ಯಾರೂ ಬಂದಿರಲಿಲ್ಲ. ಆಗ ಬಂದವರೇ ಆಸಿಯಾ. ಅವರು ನನಗೆ ಬೆಡ್‌ಶೀಟ್ ಹೊದಿಸಿ ತಲೆದಿಂಬು ಇಟ್ಟು ಹೋಗಿದ್ದರು. ಅವರದ್ದು ಒಳ್ಳೆಯ ವ್ಯಕ್ತಿತ್ವ. ತುಂಬಾ ಒಳ್ಳೆಯ ಫ್ರೆಂಡ್ಸ್‌ ಆಗಿದ್ವಿ. ಇವತ್ತಿಗೂ ನನಗೆ ಅವರ ಮೇಲೆ ಯಾವುದೇ ದ್ವೇಷ ಇಲ್ಲ.

ಜೀವನದಲ್ಲಿ ಖುಷಿಯೇ ಇಲ್ಲ ಅನ್ಸುತ್ತೆ

ಆಸಿಯಾ ಅವರ ಜೀವನದಲ್ಲಿ ಸಂತೊಷವೇ ಇಲ್ಲವೇನೋ ಅನಿಸುತ್ತದೆ.ಯಾಕೆಂದರೆ ಅವರು ಬೆಳೆದು ಬಂದ ರೀತಿ ಹಾಗಿದೆ. ಪಾಪ ಅವರು ತುಂಬಾ ಬೇಸರದಲ್ಲಿ ಬದುಕಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಯಾರಾದರು ತಮಾಷೆ ಮಾಡಿದರೆ ಅಥವಾ ಕಾಲೆಳೆದರೆ ಅದನ್ನು ಈಸಿಯಾಗಿ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಮಾತನ್ನಾಡಿದ್ದನ್ನು ನಾನು ತಮಾಷೆಯಾಗಿ ತೆಗೆದುಕೊಂಡಿಲ್ಲ. ಸೀರಿಯಲ್ ಆಗಿ ತೆಗೆದುಕೊಂಡು ಉಡಾಳ್ತನ ಮಾಡ್ತಿದ್ದೆ. ನಾನು ಸಹಜವಾಗಿಯೇ ಮಾತನಾಡಿದ್ದರೂ ಅದು ರೋಸ್ಟ್ ಮಾಡಿದ ರೀತಿಯಲ್ಲೇ ಕಾಣುತ್ತದೆ. ನಾನು ಹೇಳಿದ್ದನ್ನು ಅವರು ತೆಗೆದುಕೊಳ್ಳದಿದ್ದಾಗ ನನಗೆ ಒಂಥರಾ ಮಜಾ ಸಿಗುತ್ತಿತ್ತು. ಅದೇ ಕಾರಣಕ್ಕೆ ನಾನು ಮತ್ತೆ ಮತ್ತೆ ಅವರ ಕಾಲೆಳೆಯುತ್ತಿದ್ದೆ.

ನಾನು ಬೇರೆಯವರ ಕಾಲೆಳೆಯುತ್ತಿರೋದು ಕೂಡ ಆಚೆ ಬರಲು ಒಂದು ರೀಸನ್ ಆಗಿರಬಹುದು. ಆಸಿಯಾ ಅಭಿಮಾನಿಗಳು ಅದನ್ನು ತಮಾಷೆಯಾಗಿ ಸ್ವೀಕರಿಸದೇ ನನ್ನನ್ನು ಆಚೆ ಕಳುಹಿಸಿರಬಹುದು. ಅವರಿಗೂ ಅಭಿಮಾನಿಗಳು ಇರುತ್ತಾರೆ. ನನಗೂ ನೋಡುವ ವೀಕ್ಷಕರು ಇದ್ದಾರೆ, ಜನರ ಕಷ್ಟ-ಇಷ್ಟ ಅವೆಲ್ಲ ಸ್ವಲ್ಪ ದಿನಗಳು ಅಷ್ಟೇ,. ಎಲ್ಲವೂ ಮುಂದೆ ಬದಲಾಗಲಿದೆ ಎಂದಿದ್ದಾರೆ.

ಮನೆಯಿಂದ ಆಚೆ ಬಂದಿರುವ ರೀಸನ್ ಬಗ್ಗೆ ಮಾತನ್ನಾಡಿ.. ನನ್ನ ಎಲಿಮಿನೇಷನ್ ನಿರೀಕ್ಷೆ ಇತ್ತು. ಬಿಗ್ ಬಾಸ್ ಮನೆಗೆ ಹೋಗುವಾಗ ನಾನು ಅಂದುಕೊಂಡಿದ್ದೇ ಬೇರೆ. ಹೋದ ಮೇಲೆ ನಾನು ಮಾಡಿದ್ದೇ ಬೇರೆ. ನನ್ನಿಂದ ಅಲ್ಲಿ ತಪ್ಪುಗಳು ಆಗಿದ್ದವು. ಅದು ನನ್ನ ಆಟದ ಮೇಲೆ ಪರಿಣಾಮ ಬೀರಿತು. ಈ ಸತ್ಯ ನನಗೆ ಸ್ವಲ್ಪ ತಡವಾಗಿ ಅರ್ಥ ಆಯಿತು. ಇದು ನನ್ನ ಎಲಿಮಿನಿಷೇನ್‌ಗೆ ಪ್ರಮುಖ ಕಾರಣವಾಯಿತು.

ಮನೆಯಿಂದ ಆಚೆ ಬಂದಿರುವ ಬಗ್ಗೆ ನನಗೆ ಪಶ್ಚಾತಾಪ ಇದೆ. ಅತಿಯಾದ ಕೋಪ, ಆಕ್ರಮಣಕಾರಿ ವರ್ತನೆ ಮಾತಿನ ಶೈಲಿ ನನ್ನ ಆಟಕ್ಕೆ ಕೊಡಲಿ ಪೆಟ್ಟು ನೀಡಿತು. ಅಮ್ಮನ ಎಚ್ಚರಿಕೆಯನ್ನೂ ನಾನು ಮರೆತಿದ್ದೆ. ಜೊತೆಗೆ ವೀಕ್ಷಕರು ನನ್ನಿಂದ ಏನು ನಿರೀಕ್ಷೆ ಮಾಡ್ತಿದ್ದಾರೆ ಅನ್ನೋದನ್ನೂ ಮರೆತಿದ್ದೆ ಎಂದಿದ್ದಾರೆ.