ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿರುವ ಹೊಸದಾಗಿ ಮದುವೆಯಾದ ಪ್ರಶಾಂತ್ ಗೌಡ ಅವರ ದಾಂಪತ್ಯಕ್ಕೆ ಸೌಂದರ್ಯ ಶೆಟ್ಟಿ ನಡೆಯಿಂದ ಆತಂಕ ಎದುರಾಗಿದೆ. ಈ ಕುರಿತು ನಟ ಗಗನ್ ಚಿನ್ನಪ್ಪ ಅವರು ಸೌಂದರ್ಯಗೆ ಎಚ್ಚರಿಕೆ ನೀಡಿದ್ದು, ಇವರಿಬ್ಬರ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶ ಪಡೆದಿರುವ ಹಾಸ್ಯ ಕಲಾವಿದ ಪ್ರಶಾಂತ್ ಗೌಡ ಅವರಿಗೆ ಮದುವೆಯಾಗಿ ಕೇವಲ 2 ತಿಂಗಳಾಗಿದೆ. ಆದರೆ, ಇಲ್ಲಿ ಮಾಡೆಲ್ ಸೌಂದರ್ಯ ಶೆಟ್ಟಿ ಮಾಡುತ್ತಿರುವ ಕುತಂತ್ರಕ್ಕೆ ಆತನ ದಾಂಪತ್ಯವೇ ಮುರಿದು ಬೀಳುತ್ತದೆಯೇ ಎಂಬ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನಟ ಗಗನ್ ಚಿನ್ನಪ್ಪ ಸೌಂದರ್ಯ ಶೆಟ್ಟಿಗೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.

ಸೌಂದರ್ಯ ನಡವಳಿಕೆಗೆ ಗಗನ್ ಆಕ್ಷೇಪ:

ಇತ್ತೀಚೆಗಷ್ಟೇ ಮದುವೆ ಮಾಡಿಕೊಂಡು ಹನಿಮೂನ್ ಮೂಡ್‌ನಲ್ಲಿರುವ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹಾಸ್ಯ ಕಲಾವಿದ ಪ್ರಶಾಂತ್ ಅವರಿಗೆ ಬಿಗ್ ಬಾಸ್ ಕಾರ್ಯಕ್ರಮದಿಂದ ಕರೆ ಬಂದಾಗ ಇದೀಗ ತಾನೇ ಮದುವೆಯಾಗಿದೆ, ಹೇಗೆ ಬರಲಿ? ಸ್ವಲ್ಪ ಸಮಯ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಾದ ನಂತರ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಹೋಗಲು ಕೇಳಿದಾಗ ಹೆಂಡತಿಯ ಮನವೊಲಿಕೆ ಮಾಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಲು ಬಂದಿದ್ದಾರೆ. ಆದರೆ, ಈ ಸ್ಪರ್ಧೆ ಅವರ ದಾಂಪತ್ಯ ಜೀವನಕ್ಕೆ ಮುಳ್ಳಾಗಲಿದೆಯೇ ಎಂಬ ಆತಂಕ ಎದುರಾಗಲಿದೆ.

ಮದುವೆಯಾದ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಎಂಟ್ರಿ:

ಈಗಾಗಲೇ 3 ವಾರಗಳು ಕಳೆದ ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಪ್ರಶಾಂತ್ ಅವರು ಇಡೀ ಮನೆಯವರಿಗೆಲ್ಲಾ ತಪ್ಪುಗಳನ್ನು ಹೇಳಿ ತರಾಟೆಗೆ ತೆಗೆದುಕೊಂಡಿದ್ದರು. 4ನೇ ವಾರದಲ್ಲಿ ಈ ಸೀಸನ್‌ನ 2ನೇ ಕ್ಯಾಪ್ಟನ್ಸಿ ಆಯ್ಕೆ ಮಾಡುವುದಕ್ಕೆ ನಡೆಸಲಾದ ಟಾಸ್ಕ್‌ಗಳಲ್ಲಿ ಪ್ರಶಾಂತ್ ಗೌಡ ಕೂಡ ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ, ಟಾಸ್ಕ್ ನಡೆಸುವ ಉಸ್ತುವಾರಿಗಳು ಮಾಡಿದ ಎಡವಟ್ಟಿನಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್ ನಡೆಸುವ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದೆ. ಇದೀಗ 3ನೇ ವಾರದಲ್ಲಿ ಮಿಡ್ ವೀಕ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ರಾಮ್ ಅವರು ಕ್ಯಾಪ್ಟನ್ ಆಗಿ ಮನೆಗೆ ವಾಪಸ್ ಬಂದಿದ್ದಾರೆ.

ವೈರಲ್ ಆದ ವಿಡಿಯೋ:

ಇದರ ನಡುವೆ ಸೌಂದರ್ಯ ಶೆಟ್ಟಿ ಹಾಗೂ ಗಗನ್ ಚಿನ್ನಪ್ಪ ಕುಳಿತುಕೊಂಡು ಮಾತನಾಡುವಾಗ ನಡೆದ ಸಂಭಾಷಣೆಯ ವಿಡಿಯೋ ನೋಡಿದ ವೀಕ್ಷಕರು ಟ್ಯಾಲೆಂಟೆಡ್ ಕಲಾವಿದ ಖ್ಯಾತಿಯ ಪ್ರಶಾಂತ್ ದಾಂಪತ್ಯ ಜೀವನಕ್ಕೆ ಮುಳ್ಳಾಗಲಿದೆ ಎಂದು ಹೇಳಿದ್ದಾರೆ. ಸೌಂದರ್ಯ ಅಭಿನಯದ ಮೂಲಕ ಪ್ರಶಾಂತ್ ಅವರ ಭಂಗಿಗಳನ್ನು ತೋರಿಸಿದ್ದಾರೆ. ಅದನ್ನು ಕಂಡುಹಿಡಿದ ಗಗನ್, ನೀನು ಪ್ರಶಾಂತ್‌ಗೆ ಪ್ರಪೋಸ್ ಮಾಡ್ತೀಯಾ..?, ಅವನಿಗೆ ಮದುವೆಯಾಗಿದೆ. ಯಾರನ್ನೂ ಬಿಡ್ತಾಯುಲ್ವಲ್ಲೆ ನೀನು..., ಪ್ಲೀಸ್ ಬೇಡ, ಹೋಗ್ ಬೇಡ ಎಂದು ಗಗನ್ ಸೌಂದರ್ಯಗೆ ಹೇಳುತ್ತಾನೆ. ನೀನು ಹೋಗ್ತಿರೋ ದಾರಿ ನಿಜವಾಗ್ಲೂ ಚೆನ್ನಾಗಿ ಕಾಣಿಸೊಲ್ಲ. ವಾವ್..., ಚಾಯ್ಸ್ ಎಂದು ಸುಮ್ಮನಾಗುತ್ತಾನೆ. ಇವರಿಬ್ಬರ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Scroll to load tweet…

ಎಲಿಮಿನೇಟ್ ಮಾಡುವಂತೆ ವೀಕ್ಷಕರ ಆಕ್ರೋಶ

ಇನ್ನು ಸೌಂದರ್ಯ ಶೆಟ್ಟಿ ಈ ರಿಯಾಲಿಟಿ ಶೋಗೆ ತುಂಬಾ ಡೇಂಜರಸ್ ಆಗಿ ಕಾಣಿಸುತ್ತಿದ್ದಾರೆ. ಕೂಡಲೆ ಆಕೆಯನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿ ಕಳಿಸಬೇಕು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಈಕೆ ಈಗಾಗಲೇ ಎಲ್ಲಾ ಹುಡುಗರೊಂದಿಗೆ ಆಟವಾಡುತ್ತಿದ್ದಾಳೆ. ಇದೀಗ ನವ ವಿವಾಹಿತ ಪ್ರಶಾಂತ್‌ ಜೊತೆಯಲ್ಲೂ ಆಟವಾಡುತ್ತಿದ್ದು, ಆತನ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.