ಬಿಗ್‌ಬಾಸ್ ಮನೆಯಲ್ಲಿ ಮಾತಿಂದಲೇ ಮನೆ ಕಟ್ಟುತ್ತ ಪ್ರತಿದಿನವೂ ಸುದ್ದಿಯಾಗುತ್ತಿದ್ದ ಆ್ಯಂಡಿ ಆಲಿಯಾಸ್ ಆ್ಯಂಡ್ರೂ ಮೇಲೆ ಮನೆಯೊಳಗಿರುವಾಗಲೇ ಆರೋಪವೊಂದು ಕೇಳಿ ಬಂದು, ಎಫ್‌ಐಆರ್ ದಾಖಲಾಗಿತ್ತು. ಇದೀಗ ಮತ್ತೊಂದು ದೂರು ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ.

ಬಿಗ್‌ಬಾಸ್ ಕನ್ನಡ ಸೀಸನ್ -6 ಶ್ರೀ ಸಾಮಾನ್ಯರ ಪಟ್ಟಿಯಿಂದ ಮನೆಗೆ ಪ್ರವೇಶಿಸಿದವರಲ್ಲಿ ಆ್ಯಂಡಿಯೂ ಒಬ್ಬರು. ಆದರೆ, ಈಗಾಗಲೇ 20-25 ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳನ್ನು ಮಾಡಿಕೊಂಡ ಆ್ಯಂಡಿಗೆ ಶ್ರೀಸಾಮಾನ್ಯರೆಂದು ಪರಿಗಣಿಸುವುದು ಎಷ್ಟು ಸರಿ ಎಂಬ ಆರೋಪಗವೂ ಕೇಳಿ ಬಂದಿದ್ದವು.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ಮನೆಯೊಳಗಿರುವಾಗಲೇ ಸಹಸ್ಪರ್ಧಿಗಳ ಮೇಲೆ ಪರ್ಫ್ಯೂಮ್ ಸ್ಪ್ರೇ ಮಾಡಿದ ಆ್ಯಂಡಿ ವಿರುದ್ದ ರಾಮನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. ಇದೀಗ ಕವಿತಾ ಗೌಡ ಅಲಿಯಾಸ್ ಚಿನ್ನು ಸಹ ಆ್ಯಂಡಿ ವಿರುದ್ಧ ಕಿರುಕುಳ ಆರೋಪ ಹೊರಿಸಿ, ದೂರು ದಾಖಲಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಡೆದ ಕಹಿ ಘಟನೆಗಳನ್ನು ಆಧರಿಸಿ, ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.

'ಬಿಗ್‌ಬಾಸ್‌ನಲ್ಲಿ ನಾನು ಸ್ಪರ್ಧಿಯಾಗಿದ್ದೆ. ಅಲ್ಲಿ ಮತ್ತೊಬ್ಬ ಸ್ಪರ್ಧಿ ನನಗೆ ಕಿರುಕುಳ ನೀಡ್ತಾ ಇದ್ದ. ಅಷ್ಟೇ ಅಲ್ಲದೆ ಕೆಟ್ಟದಾಗಿ ಮಾತನಾಡೋದು, ಅಲ್ಲದೇ ನನ್ನ ಹಿಂದೆಯೇ ಸುತ್ತುತ್ತಿದ್ದು, ನನಗೆ ಮಾನಸಿಕ ಕಿರುಕುಳ ನೀಡ್ತಾ ಇದ್ದ,' ಎಂದು ಆರೋಪಿಸಿದ್ದಾರೆ ಕವಿತಾ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿಗೆ ಕವಿತಾ ದೂರು ಸಲ್ಲಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೂ ಕಿರುಕುಳ ಮುಂದುವರಿದಿದ್ದು, ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಕವಿತಾ ಸ್ಪಷ್ಟಪಡಿಸಿದ್ದಾರೆ. ಆ್ಯಂಡ್ರ್ಯೂ ಅಲ್ಲದೇ ಬಿಗ್‌ಬಾಸ್ ಮನೆಯ ಮೇಲ್ವಿಚಾರಕ ಗುರುದಾಸ್ ಶೆಣೈ ಮೇಲೂ ದೂರು ದಾಖಲಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಡವಟ್ಟು ಮಾಡಿದ ಆ್ಯಂಡಿ!: ಬಿಡದಿ ಠಾಣೆಯಲ್ಲಿ ಕೇಸ್!

'ಶೋನಲ್ಲಿ ಏನಾದ್ರೂ ಆದರೆ ನಾವು ಜವಾಬ್ದಾರಿ ಎಂದಿತ್ತು ಬಿಗ್‌ಬಾಸ್ ತನ್ನ ಕಾಂಟ್ರಾಕ್ಟ್‌ನಲ್ಲಿ. ನನ್ನ ಬಿಟ್ಟು ಬೇರೆ ಅವ್ರಿಗೂ ದೌರ್ಜನ್ಯವಾಗಿದೆ. ಆದರೆ, ಅವರು ಯಾರ ಮುಂದೆಯೂ ಬಂದು ಹೇಳುತ್ತಿಲ್ಲ. ನನಗೆ ಬಿಗ್ ಬಿ ಮನೆಯಲ್ಲಿ ಹೆಚ್ಚು ದೌರ್ಜನ್ಯವಾಗಿದೆ. ಅದಕ್ಕೆ ಬಂದು ದೂರು ನೀಡುತ್ತಿದೇನೆ. ಆ್ಯಂಡ್ರೂ ನನಗೆ ಕ್ಷಮೆ ಸಹ ಯಾಚಿಸಿಲ್ಲ. ಹೋಗಲಿ ಬಿಡೆಂದು ಸುಮ್ಮನಾದರೂ, ಆ್ಯಂಡ್ರೂ ತನ್ನ ಬುದ್ಧಿಯನ್ನು ಮತ್ತೆ ತೋರಿಸಿದ್ದಕ್ಕೆ ದೂರು ದಾಖಲಿಸಿದ್ದೇನೆ,' ಎಂದು ಕವಿತಾ ಹೇಳಿದ್ದಾರೆ.