Asianet Suvarna News Asianet Suvarna News

ಬಿಗ್ ಬಾಸ್ ಮನೆಯಲ್ಲಿ ಎಡವಟ್ಟು ಮಾಡಿದ ಆ್ಯಂಡಿ!: ಬಿಡದಿ ಠಾಣೆಯಲ್ಲಿ ಕೇಸ್!

ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಆ್ಯಂಡಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಬಿಗ್ ಮನೆಯಲ್ಲಿ ಮಾಡಿದ ಎಡವಟ್ಟಿನಿಂದ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.

complaint filed against big boss contestant andrew jayapal
Author
Bidadi, First Published Dec 30, 2018, 2:32 PM IST
  • Facebook
  • Twitter
  • Whatsapp

ಬೆಮಗಳೂರು[ಡಿ.30]: ಬಿಗ್ ಬಾಸ್ ಸೀಜನ್ 6ರಲ್ಲಿ ತನ್ನ ವಿಭಿನ್ನ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಹಾಗೂ ಪ್ರೇಕ್ಷಕರ ಗಮನ ಸೆಳೆದಿರುವ ಆ್ಯಂಡಿಗೆ ಸಂಕಷ್ಟವೊಂದು ಎದುರಾಗಿದೆ. ಬಿಗ್ ಮನೆಯಲ್ಲಿ ಮಾಡಿದ ಅವಾಂತರವೊಂದರಿಂದ ಆ್ಯಂಡ್ರೂ ಜೈಪಾಲ್ ವಿರುದ್ಧ ಬಿಡದಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಷ್ಟಕ್ಕೂ ಆ್ಯಂಡಿ ಮಾಡಿದ ಎಡವಟ್ಟೇನು? ಇಲ್ಲಿದೆ ವಿವರ

ಡಿ. 26 ರಂದು ಪ್ರಸಾರವಾದ ಸಂಚಿಕೆಯಲ್ಲಿ ಆ್ಯಂಡಿ ಇತರ ಸ್ಪರ್ಧಿಗಳ ಮೇಲೆ ಹಾನಿಕಾರಕ ಪರ್ಪ್ಯೂಮ್ ಸ್ಪ್ರೇ ಮಾಡಿದ್ದರು. ಯಾವುದೇ ಸುಗಂಧ ದ್ರವ್ಯವನ್ನು ಮಿತಿಗಿಂತಲೂ ಹೆಚ್ಚು ಬಳಸಿದರೆ ಅದರಿಂದ ಕಣ್ಣು, ಶ್ವಾಸಕೋಶಗಳಿಗೆ ತೊಂದರೆಯಾಗುತ್ತದೆ. ಟಾಸ್ಕ್ ನಲ್ಲಿ ಆ್ಯಂಡಿ ತಾನು ಗೆಲ್ಲಲೇಬೇಕೆಂಬ ಉದ್ದೇಶದಿಂದ ಇತರೆ ಸ್ಪರ್ಧಿಗಳ ಕಣ್ಣಿಗೆ ಸ್ಪ್ರೇ ಮಾಡಿ ಇತರ ಸ್ಪರ್ಧಿಗಳಿಗೆ ಚಿತ್ರಹಿಂಸೆ ನೀಡಿದ್ದಾರೆ. ಹೀಗಾಗಿ ಕೂಡಲೇ ಆ್ಯಂಡಿಯನ್ನ ಹೊರಗೆ ತಂದು ಕ್ರಮ ಜರುಗಿಸಬೇಕು ಎಂದು ಫ್ಯೂಚರ್​ ಇಂಡಿಯಾ ಆರ್ಗನೈಸೇಷನ್​ ಎಂಬ ಸಂಸ್ಥೆಯ ಪರವಾಗಿ ಆಡುಗೋಡಿಯ ರೋಲ್ಯಾಂಡ್ ರೋಲ್ಸ್ ಎಂಬುವವರು ಬಿಡದಿ ಠಾಣೆಗೆ ದೂರು ನೀಡಿದ್ದಾರೆ.

complaint filed against big boss contestant andrew jayapalcomplaint filed against big boss contestant andrew jayapal

ಆ್ಯಂಡಿ ಹೀಗೆ ಮನಬಂದಂತೆ ನಡೆದುಕೊಳ್ಳುತ್ತಿದ್ದ ವೇಳೆ ಆತನನ್ನು ತಡೆಯದ ಇತರ ಸ್ಪರ್ಧಿಗಳು, ತಂತ್ರಜ್ಞರು ಮತ್ತು ಆಯೋಜಕರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. 

Follow Us:
Download App:
  • android
  • ios