ಕೆಲವು ಸಿನಿಮಾಗಳು ಹಾಗೇನೇ, ರಿಲೀಸ್‌ಗೂ ಮುನ್ನ ಯಾವುದೇ ಸದ್ದು ಮಾಡಲ್ಲ, ದೊಡ್ಡ ನಿರೀಕ್ಷೆಗಳೂ ಇರಲ್ಲ. ಆದರೆ ಥಿಯೇಟರ್‌ನಲ್ಲಿ ಅಬ್ಬರಿಸಿ ದೊಡ್ಡ ಹಿಟ್ ಆಗುತ್ತವೆ. ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ.
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನೆಯ ತಮಿಳು ಸಿನಿಮಾ 'ಬ್ಲಾಸ್ಟ್' ಭರ್ಜರಿ ಯಶಸ್ಸು ಗಳಿಸುತ್ತಿದೆ. ಆದರೆ, ಚಿತ್ರದ ಪ್ರಮುಖ ಟ್ವಿಸ್ಟ್‌ಗಳು ಮತ್ತು ದೃಶ್ಯಗಳನ್ನು ಥಿಯೇಟರ್‌ನಿಂದಲೇ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡಲಾಗುತ್ತಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಕೆಲವು ಸಿನಿಮಾಗಳು ಹಾಗೇನೇ, ರಿಲೀಸ್‌ಗೂ ಮುನ್ನ ಯಾವುದೇ ಸದ್ದು ಮಾಡಲ್ಲ, ದೊಡ್ಡ ನಿರೀಕ್ಷೆಗಳೂ ಇರಲ್ಲ. ಆದರೆ ಥಿಯೇಟರ್‌ನಲ್ಲಿ ಅಬ್ಬರಿಸಿ ದೊಡ್ಡ ಹಿಟ್ ಆಗುತ್ತವೆ. ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ 'ಬ್ಲಾಸ್ಟ್' ಎಂಬ ತಮಿಳು ಸಿನಿಮಾ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಾಯಕರಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ 'ಬ್ಲಾಸ್ಟ್' ಧೂಳೆಬ್ಬಿಸುತ್ತಿದೆ.
ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ, ಚಿತ್ರದ ಪ್ರಮುಖ ಟ್ವಿಸ್ಟ್‌ಗಳು ಸೇರಿದಂತೆ ಹಲವು ದೃಶ್ಯಗಳು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿವೆ. ಅರ್ಜುನ್ ಸರ್ಜಾ ಅವರ ಇಂಟ್ರೊಡಕ್ಷನ್ ಸೀನ್, ಫ್ಯಾಮಿಲಿ ಫೈಟ್ಸ್ ಹೀಗೆ ಎಲ್ಲವೂ ರೀಲ್ಸ್ ರೂಪದಲ್ಲಿ ಹರಿದಾಡುತ್ತಿವೆ. ಅಚ್ಚರಿ ಎಂದರೆ, ಈ ವಿಡಿಯೋಗಳಿಗೆ ಮಿಲಿಯನ್‌ಗಟ್ಟಲೆ ವೀವ್ಸ್ ಬಂದಿದೆ.
ಸಿನಿಮಾನೇ ಅಪ್ಲೋಡ್ ಮಾಡಿಬಿಡಿ
"ಇದು ಸ್ಪಾಯ್ಲರ್ ಅಲ್ಲ, ಪ್ರಮೋಷನ್ ಅಷ್ಟೇ" ಎಂದು ಕ್ಯಾಪ್ಶನ್ ಹಾಕಿ ಕೆಲವು ಪೇಜ್‌ಗಳು ಥಿಯೇಟರ್‌ನಿಂದ ರೆಕಾರ್ಡ್ ಮಾಡಿದ ಈ ದೃಶ್ಯಗಳನ್ನು ಹಂಚಿಕೊಳ್ಳುತ್ತಿವೆ. ಇದರ ಕೆಳಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. "ಇದಕ್ಕಿಂತ ಪೂರ್ತಿ ಸಿನಿಮಾನೇ ಅಪ್ಲೋಡ್ ಮಾಡಿಬಿಡಿ", "ಜನರ ಸಿನಿಮಾ ನೋಡುವ ಅನುಭವವನ್ನು ಯಾಕೆ ಹಾಳುಮಾಡುತ್ತೀರಿ?" ಎಂದು ಹಲವರು ಕಿಡಿಕಾರಿದ್ದಾರೆ. "ಚಿತ್ರತಂಡದವರು ಇದನ್ನೆಲ್ಲಾ ನೋಡುವುದಿಲ್ವಾ?" ಎಂದೂ ಕೆಲವರು ಪ್ರಶ್ನಿಸಿದ್ದಾರೆ.
ಹಿಂದೆಯೂ ಇದೇ ರೀತಿ ಬೇರೆ ಸಿನಿಮಾಗಳ ಪ್ರಮುಖ ದೃಶ್ಯಗಳು ಇನ್‌ಸ್ಟಾಗ್ರಾಮ್‌ನಲ್ಲಿ ಲೀಕ್ ಆಗಿದ್ದವು. ಮಲಯಾಳಂನ 'ವಾಜ 2' (Vazha 2) ಮತ್ತು 'ಅತಿರಡಿ' (Athiradi) ಸಿನಿಮಾಗಳ ಕ್ಲಿಪ್‌ಗಳು ಕೂಡಾ ಇದೇ ರೀತಿ ವೈರಲ್ ಆಗಿದ್ದವು. 'ಬ್ಲಾಸ್ಟ್' ಚಿತ್ರವನ್ನು ಸುಭಾಷ್ ಕೆ ರಾಜ್ ನಿರ್ದೇಶಿಸಿದ್ದಾರೆ. ಅರ್ಜುನ್ ಸರ್ಜಾ ಜೊತೆಗೆ ಪ್ರೀತಿ ಮುಕುಂದನ್, ಅಭಿರಾಮಿ, ಅರ್ಜುನ್, ದಿಲೀಪನ್, ಪವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೇ 28 ರಂದು ಬಿಡುಗಡೆಯಾದ ಈ ಸಿನಿಮಾ, ಈಗಾಗಲೇ 30 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.


