Ajurn Cinema: ಅರ್ಜುನ್ ಸರ್ಜಾ ನಟನೆಯ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಓಟಿಟಿಯಲ್ಲಿ ಜನಪ್ರಿಯತೆ ಗಳಿಸಿದೆ.

ಟಿಟಿ ಪ್ಲಾಟ್‌ಫಾರಂನಲ್ಲಿ ಪ್ರತಿ ವಾರ ಹೊಸ ಹೊಸ ಸಿನಿಮಾ, ವೆಬ್ ಸಿರೀಸ್‌ಗಳು ಬಿಡುಗಡೆಯಾಗುತ್ತಿರುತ್ತವೆ. ಇಂದು ಮನೆಯಲ್ಲಿಯೇ ಕುಳಿತು ಹೊಸ ಹೊಸ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು, ಈ ವಾರದ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದ ನಟ ಅರ್ಜುನ್ ಸರ್ಜಾ ನಟನೆಯ ಸಿನಿಮಾ ನಂಬರ್ 1 ಸ್ಥಾನದಲ್ಲಿದೆ. 2025ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಮಾರ್ಚ್ 3ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು. ಸ್ಟ್ರೀಮ್ ಆದ ಒಂದೇ ದಿನದಲ್ಲಿ ನೆಟ್‌ಫ್ಲಿಕ್ಸ್ ನಂಬರ್ 1 ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದೆ. ಈ ಸಿನಿಮಾದ ಕಥೆ ನೋಡುಗರು ಇಷ್ಟವಾಗಿದ್ದು, ಬಾಕ್ಸ್ ಆಫಿಸ್‌ನಲ್ಲಿ 103 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಾಗಿ ಓಟಿಟಿಯಲ್ಲಿ ಬರುತ್ತಿದ್ದಂತೆ ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. 

ಯಾವುದು ಆ ಸಿನಿಮಾ?
ನೆಟ್‌ಫ್ಲಿಕ್ಸ್ ನ ಟ್ರೆಂಡಿಂಗ್ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಸಿನಿಮಾ 185 ಕೋಟಿ ರೂಪಾಯಿ ಬಜೆಟ್‌ ನಲ್ಲಿ ನಿರ್ಮಾಣವಾಗಿ 103.48 ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಥಿಯೇಟರ್‌ನತ್ತ ಜನರು ಬಂದಿರಲಿಲ್ಲ. ಆದ್ರೆ ಓಟಿಟಿ ವೀಕ್ಷಕರಿಂದ 'ವಿದಮುಯಾರ್ಚಿ 'ಸಿನಿಮಾ ಕಥೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. 

ಇದು ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಹಲವು ವರ್ಷಗಳ ಬಳಿಕ ಸೌಥ್ ಇಂಡಸ್ಟ್ರಿಯ ಇಬ್ಬರು ಸ್ಟಾರ್‌ಗಳು ಜೊತೆಯಾಗಿದ್ದರು. ವಿದಮುಯಾರ್ಚಿ ಸಿನಿಮಾದಲ್ಲಿ ಸೌಥ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಮತ್ತು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟಿಸಿದ್ದಾರೆ. ಅಜಿತ್ ಕುಮಾರ್‌ಗೆ ಜೊತೆಯಾಗಿ ಸೌಥ್ ಚೆಲುವೆ ತ್ರಿಷಾ ಕೃಷ್ಣನ್ ಕಾಣಿಸಿಕೊಂಡಿದ್ದಾರೆ. ಆದ್ರೆ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ವಿಫಲವಾಯ್ತು. 

ಚಿತ್ರದ ಕಥೆ ಏನು?
1997 ರ ಅಮೆಕನ್ ಸಿನಿಮಾ ಬ್ರೇಕ್‌ಡೌನ್‌ನಿಂದ ಪ್ರೇರಿತ ಆಕ್ಷನ್ ಥ್ರಿಲ್ಲರ್ ಕಥೆಯನ್ನು ವಿದಮುಯಾರ್ಚಿ ಒಳಗೊಂಡಿದೆ. ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ನಾಯಕ ನಟ ಹೋರಾಡುತ್ತಿರುತ್ತಾನೆ. ಈ ವೇಳೆ ನಾಯಕ ನಟನಿಗೆ ಎದುರಾಗುವ ಸನ್ನಿವೇಶಗಳು ಮತ್ತು ಅದನ್ನು ಎದುರಿಸೋದೇ ಸಿನಿಮಾದ ಒನ್ ಲೈನ್ ಕಥೆ. ಮಾರ್ಚ್ 3 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲಾಗಿದೆ. ಸಿನಿಮಾ ಸ್ಟ್ರೀಮ್ ಆಗುತ್ತಿದ್ದಂತೆ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!

ವಿದಾಮುಯಾರ್ಚಿ ಚಿತ್ರಕ್ಕೆ ನೀರವ್ ಶಾ ಮತ್ತು ಓಂ ಪ್ರಕಾಶ್ ಛಾಯಾಗ್ರಹಣ ಮಾಡಿದ್ದಾರೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ಈ ಚಿತ್ರವು ಹಾಲಿವುಡ್‌ನ ಬ್ರೇಕ್‌ಡೌನ್ ಚಿತ್ರದ ರಿಮೇಕ್ ಆಗಿದೆ. ತಮಿಳುನಾಡಿನಲ್ಲಿ ರೆಡ್ ಜೈಂಟ್ ಮೂವೀಸ್ ಈ ಚಿತ್ರವನ್ನು ಬಿಡುಗಡೆ ಮಾಡಿತ್ತು. ತಮಿಳುನಾಡಿನಲ್ಲಿ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿದಾಮುಯಾರ್ಚಿ ಬಿಡುಗಡೆಯಾಗಿತ್ತು.

View post on Instagram

ಸಿನಿಮಾ ಬಗ್ಗೆ ಜನರು ಹೇಳಿದ್ದೇನು?
ವಿದಾಮುಯಾರ್ಚಿ ಚಿತ್ರದ ಮೊದಲ ಭಾಗವು ಎರಡನೇ ಭಾಗಕ್ಕಿಂತ ಚೆನ್ನಾಗಿತ್ತು. ಥ್ರಿಲ್ಲರ್ ಸಿನಿಮಾ ಆದರೂ ನಿಧಾನವಾಗಿ ಸಾಗುತ್ತದೆ. ಸಿನಿಮಾದಲ್ಲಿ ಟ್ವಿಸ್ಟ್ ಚೆನ್ನಾಗಿ ವರ್ಕ್ ಆಗಿದೆ. ಸಿನಿಮಾದಲ್ಲಿರುವ ಒಂದೇ ಒಂದು ಸಮಸ್ಯೆ ಎಂದರೆ ಎರಡನೇ ಭಾಗ ನಿಧಾನವಾಗಿ ಸಾಗುವುದು. ಉಳಿದಂತೆ ಸಿನಿಮಾ ಚೆನ್ನಾಗಿದೆ. ವಿದಾಮುಯಾರ್ಚಿ ಚಿತ್ರದಲ್ಲಿ ಅಜಿತ್‌ಗೆ ಬೇರೆ ಬೇರೆ ಲುಕ್ ಇದೆ. ಅದೆಲ್ಲಾ ಮೊದಲ 30 ನಿಮಿಷಗಳಲ್ಲಿ ಬಂದು ಹೋಗುತ್ತದೆ. ಅಜಿತ್ ಅವರ ನಟನೆ ಅದ್ಭುತವಾಗಿದೆ. ಅಜಿತ್ - ತ್ರಿಶಾ ಜೋಡಿ ಚೆನ್ನಾಗಿದೆ. ಆದರೆ ಮೊದಲ ಭಾಗದ ಕೊನೆಯಲ್ಲಿ ಕೆಲವು ಟ್ವಿಸ್ಟ್‌ಗಳಿವೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: 52 ಕೋಟಿಯ ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗೆ ಸಿಕ್ಕಿದ್ದು 358 ಕೋಟಿ ಜೊತೆ ವಿಶ್ವದ ಅತ್ಯುನ್ನತ ಪ್ರಶಸ್ತಿ

YouTube video player