ಮುಂಬೈ (ಡಿ. 07): ದಾಂಪತ್ಯ ಜೀವನದಿಂದ ಹೊರ ಬಂದು ವಿಚ್ಚೇದನ ಪಡೆದು ಪತಿ-ಪತ್ನಿಯರು ಬೇರೆ ಬೇರೆಯಾದ ಬಳಿಕ ಎದುರಾದರೆ ಹೇಗಿರುತ್ತದೆ? ಒಂದು ರೀತಿ ಮುಜುಗರ, ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದಲ್ಲ. ಅದೇ ರೀತಿಯ ಸಂದರ್ಭವನ್ನು ಮಲೈಕಾ ಅರೋರಾ, ಅರ್ಬಜ್ ಖಾನ್ ಎದುರಿಸಿದ್ದಾರೆ. 

ಖಾನ್ ಕಿತ್ತೆಸೆದ ಮಲೈಕಾ: ಪದಕಕ್ಕೆ ಅರ್ಜುನ್ ಅಧಿಕೃತ ಎಂಟ್ರಿ!

ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ರಿಸೆಪ್ಷನ್ ಗೆ ಅರ್ಬಜ್ ಖಾನ್ ಹಾಗೂ ಮಲೈಕಾ ಹೋಗಿದ್ದರು. ಅರ್ಬಜ್ ಖಾನ್ ಗರ್ಲ್ ಫ್ರೆಂಡ್ ಜಾರ್ಜಿಯಾ ಅಂದ್ರಾಣಿ ಜೊತೆ ಆಗಮಿಸಿದ್ದರು. ಹೀಗೆ ಸ್ನೇಹಿತರೆಲ್ಲರೂ ಖುಷಿ ಖುಷಿಯಾಗಿ ಮಾತನಾಡುತ್ತಿದ್ದಾಗ ಮಲೈಕಾ ಅರ್ಜುನ್ ಕಪೂರ್ ಜೊತೆ ಅವರ ಆ ಕಡೆಗೆ ಆಗಮಿಸಿದರು. 

ಮಲೈಕಾ ತಮ್ಮ ಕಡೆಗೆ ಬರುತ್ತಿರುವುದನ್ನು ನೋಡಿದ ಅರ್ಬಜ್ ಒಂದುಕ್ಷಣ ತಬ್ಬಿಬ್ಬಾದರು. ಹಾಗೆಯೇ ಹಿಂತಿರುಗಬಹುದೆಂದು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಯಿತು. ಮಾಜಿ ಪತಿಯ ಜೊತೆ ಆತ್ಮೀಯತೆಯಿಂದ ಮಾತನಾಡಿ ವಿಶ್ ಮಾಡಿ ಹೊರಟು ಹೋದರು.  ಅರ್ಬಜ್ ಗರ್ಲ್ ಫ್ರೆಂಡ್ ಜಾರ್ಜಿಯಾ ಜೊತೆ  ಬಹಳ ಕ್ಸೋಸಾಗಿ ಮಾತನಾಡಿದ್ದಾರೆ.

ನಾನೇನು ಒಂಟಿಯಲ್ಲ; ಅರ್ಜುನ್ ಕಪೂರ್ ಬಿಚ್ಚಿಟ್ರು ಇಂಟರೆಸ್ಟಿಂಗ್ ಸತ್ಯ

ಮಲೈಕಾ- ಅರ್ಬಜ್ 1998 ರಲ್ಲಿ ವಿವಾಹವಾಗಿದ್ದರು. ದಾಂಪತ್ಯದಲ್ಲಿಬಿರುಕು ಕಾಣಿಸಿಕೊಂಡು 2017 ರಲ್ಲಿ ಬೇರೆ ಬೇರೆಯಾದರು.  ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಬಿ ಟೌನ್ ನಲ್ಲಿ ಕೇಳಿ ಬರುತ್ತಿದೆ. ಆದರೆ ಇವರಿಬ್ಬರು ಈ ಬಗ್ಗೆ ಮೌನ ಮುರಿದಿಲ್ಲ. 

ಇತ್ತ ಅರ್ಬಜ್ ಕೂಡಾ ಜಾರ್ಜಿಯಾ ಐಂದ್ರಾಣಿ ಜೊತೆ ರಿಲೇಶನ್ ಷಿಪ್ ಹೊಂದಿದ್ದಾರೆ. 2019 ರಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅರ್ಬಜ್ ಮನೆಯಲ್ಲಿ ಈಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.