ಎರಡು ವರ್ಷಗಳ ಹಿಂದೆ ತಮ್ಮ ಪತಿ ರ್ಬಾಜ್ ಖಾನ್‌ರಿಂದ ವಿವಾಹ ವಿಚ್ಛೇದನ ಪಡೆದಿದ್ದ ಬಾಲಿವುಡ್‌ ನಟಿ ಮಲೈಕಾ ಅರೋರಾ ಇನ್ಸ್ಟಾಗ್ರಾಂನಲ್ಲಿದ್ದ ತಮ್ಮ ಹೆಸರಿನಲ್ಲಿದ್ದ ಖಾನ್ ಎಂಬ ಪದ ತೆಗೆದು ಹಾಕಿದ ಬೆನ್ನಲ್ಲೇ 'ಎಂಎ' ಅಕ್ಷರವಿರುವ ಹೊಸ ಪದಕವನ್ನು ಶೇರ್ ಮಾಡಿಕೊಂಡಿದ್ದಾರೆ.

ಕೆಲ ದಿನಗಳಿಂದ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಮಾತುಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ ಇಂತಹ ಬೆಳವಣಿಗಳಾಗಿದ್ದು, ಸದ್ಯ ಅವರ ಕತ್ತಿನಲ್ಲಿರುವ ಪೆಂಡೆಂಟ್‌ನಲ್ಲಿರುವ ಎ ಅಕ್ಷರ ಅರ್ಜುನ್ ಅವರದ್ದನ್ನೆಲಾಗುತ್ತಿದೆ.