ನವೆಂಬರ್ 5 ರಂದು ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಹಾಗೂ ತಡರಾತ್ರಿ ದೆಹಲಿಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಮೈದಾನದಲ್ಲಿ ವಿರಾಟ ರೂಪ ತಾಳುವ ಕೊಹ್ಲಿಯು ತನ್ನ ಹೆಂಡತಿ ಎದುರು ಅದೆಷ್ಟು ಸೈಲೆಂಟ್ ಆಗಿರುತ್ತಾರೆ ಎಂಬುವುದು ವಿಡಿಯೋದಲ್ಲಿರುವ ದೃಶ್ಯಗಳೇ ತಿಳಿಸಿಕೊಡುತ್ತವೆ.

ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ಹಾಗೂ ಭಾರತದ ನಡುವಿನ ಟಿ 20 ಸರಣಿಯಿಂದ ವಿರಾಮ ನೀಡಲಾಗಿದೆ. ಏಕದಿನ ಸರಣಿ ಗೆದ್ದ ಬಳಿಕ ವಿರಾಮದಲ್ಲಿರುವ ಕೊಹ್ಲಿ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ನವೆಂಬರ್ 5 ರಂದು ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಹಾಗೂ ತಡರಾತ್ರಿ ದೆಹಲಿಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಮೈದಾನದಲ್ಲಿ ವಿರಾಟ ರೂಪ ತಾಳುವ ಕೊಹ್ಲಿಯು ತನ್ನ ಹೆಂಡತಿ ಎದುರು ಅದೆಷ್ಟು ಸೈಲೆಂಟ್ ಆಗಿರುತ್ತಾರೆ ಎಂಬುವುದು ವಿಡಿಯೋದಲ್ಲಿರುವ ದೃಶ್ಯಗಳೇ ತಿಳಿಸಿಕೊಡುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
View post on Instagram

ಇದನ್ನೂ ಓದಿ: ಕೊಹ್ಲಿ ನಿವೃತ್ತಿಯ ಬಳಿಕವೂ ಹೀಗೆಯೇ ಇರುತ್ತಾರಂತೆ..!

ಮೈದಾನದಲ್ಲಿ ಎದುರಾಳಿಗಳಿಗೆ ತನ್ನ ಅಗ್ರೆಸ್ಸಿವ್ ಆಟದಿಂದಲೇ ಬೆವರಿಳಿಸುವ ಕೊಹ್ಲಿ ಹೆಂಡತಿ ಎದುರು ಫುಲ್ ಸೈಲೆಂಟ್ ಆಗಿರುತ್ತಾರೆ. ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಈ ವಿಚಾರ ಬಯಲಾಗಿದೆ. ಏರ್‌ಪೋರ್ಟ್‌ನಿಂದ ಹೊರ ಬರುವ ವೇಳೆ ಅನುಷ್ಕಾ ತನ್ನ ಗಂಡ ಕೊಹ್ಲಿಯೊಂದಿಗೆ ಕೋಪದಿಂದಲೇ ಮಾತನಾಡುತ್ತಿದ್ದು, ಅಸಮಾಧಾನ ಆಕೆಯ ಮುಖದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಿದ್ದರೂ ಕೊಹ್ಲಿ ಮಾತ್ರ ತನ್ನ ಮುದ್ದಿನ ಮಡದಿಯನ್ನು ನಗು ನಗುತ್ತಲೇ ಸಮಾಧಾನಿಸುತ್ತಿದ್ದು, ಏನೂ ಆಗಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. 

View post on Instagram

ಇದನ್ನೂ ಓದಿ: ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ಕೊಹ್ಲಿ..?

ಕೊಹ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಸಿಟ್ಟಾಗುತ್ತಾರೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲ ದಿನಗಳ ಹಿಂದಷ್ಟೇ ತನಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರೆಂದರೆ ಬಹಳ ಇಷ್ಟ ಎಂದಿದ್ದ ಅಭಿಮಾನಿಯೊಬ್ಬರಿಗೆ, ಹೀಗಾದರೆ ದೇಶ ಬಿಟ್ಟು ವಿದೇಶಕ್ಕೇ ತೆರಳಿ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು. ಇದಕ್ಕೂ ಮೊದಲು ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗೇ ಸಿಟ್ಟು ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು. ಹೀಗಿರುವಾಗ ತನ್ನ ಹೆಂಡತಿ ಬೈದರೂ ತುಟಿ ಪಿಟಕ್ ಎನ್ನದೇ ನಗುತ್ತಲೇ ಅನುಷ್ಕಾರನ್ನು ಸಮಾಧಾನಪಡಿಸುತ್ತಿರುವುದು ಗಮನಿಸಿದರೆ ಕೊಹ್ಲಿಗೆ ನಿಜಕ್ಕೂ ಇಷ್ಟು ತಾಳ್ಮೆ ಇದೆಯಾ ಎಂಬ ಅನುಮಾನ ಮೂಡಿಸಿದೆ.