ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯವಾದ ಏಕದಿನ ಸರಣಿಯಲ್ಲಿನ ಮೊದಲ 3 ಪಂದ್ಯಗಳಲ್ಲಿ ಸತತ ಶತಕ ಸಿಡಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದರು. ಟಿ20 ಸರಣಿಯಿಂದ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕೊಹ್ಲಿ, ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದ್ದಾರೆ.

ನವದೆಹಲಿ[ನ.12]: ವಿರಾಟ್‌ ಕೊಹ್ಲಿ ತಮ್ಮ ಫಿಟ್ನೆಸ್‌ನಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಭಾರತ ತಂಡದ ನಾಯಕ, ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಾವು ನಿವೃತ್ತಿ ಬಳಿಕವೂ ಫಿಟ್ನೆಸ್‌ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. 

ಭಾರತ ಬಿಟ್ಟು ತೊಲಗಿ ಎಂದಿದ್ದು ತಮಾಷೆಗಂತೆ! ಶಾಂತವಾಗಿರಿ ಎಂದ್ರು ಕ್ಯಾಪ್ಟನ್ ಕೊಹ್ಲಿ

‘ಫಿಟ್ನೆಸ್‌ನಿಂದಾಗಿ ನಾನು ಸುಂದರವಾಗಿ ಕಾಣುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಒಂದು ಹಂತದಲ್ಲಿ ಎಲ್ಲರೂ ಹಾಗೇ ತಿಳಿದಿರುತ್ತಾರೆ. ಈಗ ನನ್ನ ವೃತ್ತಿಬದುಕಿಗಾಗಿ ಫಿಟ್‌ ಆಗಿದ್ದೇನೆ. ಆದರೆ ನಿವೃತ್ತಿ ಬಳಿಕವೂ ಫಿಟ್ನೆಸ್‌ ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾಕೆಂದರೆ ಫಿಟ್‌ ಆಗಿರುವುದೇ ನನ್ನ ಜೀವನ ಶೈಲಿ’ ಎಂದು ಕೊಹ್ಲಿ ಹೇಳಿದ್ದಾರೆ.

ಇಷ್ಟವಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದ ಕೊಹ್ಲಿಗೆ ಫುಲ್ ಕ್ಲಾಸ್!