ಮೊದಲ ಬಾರಿ ವೇದಿಕೆಯೇರಿ ಕ್ಯಾಮರಾ ಮುಂದೆ ನಿಂತಾಗ ಕೇವಲ 13 ವರ್ಷ. ಉದಯ ಟಿವಿಯ ‘ನಿಮ್ಮಿಂದ ನಿಮಗಾಗಿ’ ಕಾರ್ಯಕ್ರಮದ ಮೂಲಕ ವೃತ್ತಿ ಬದುಕಿಗೆ ಕಾಲಿರಿಸಿದ ಅನುಪಮಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಹೃದಯದಿಂದ ಲೈವ್ ಶೋ, ಚಿಣ್ಣರ ಲೋಕ, ಹಾಸ್ಯ, ಅಡುಗೆ ಕಾರ್ಯಕ್ರಮ, ಸೆಲೆಬ್ರಿಟಿಗಳ ಸಂದರ್ಶನ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರ ಸೇರಿದಂತೆ ಹಲವು ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮೋಡಿ ಮಾಡಿರುವ ಅನುಪಮಾ ಮಾತಿನ ಮಳೆ ಸುರಿಸಿದ್ದಾರೆ.

ಅನುಪಮಾ ಗೌಡಗೆ ‘ಹೀಗೆಂದು ಆಗದಿರಲಿ’

 

ನಿರೂಪಣೆಯ ಜೊತೆಗೆ ಸಂಗೀತದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಅನುಪಮಾ ಮೌನೀಶ್ ಕುಮಾರ್ ಅವರ ಬಳಿ ಹಿಂದೂಸ್ಥಾನಿ ಸಂಗೀತವನ್ನೂ ಕಲಿತಿದ್ದಾರೆ. ಸಂಗೀತದೊಂದಿಗೆ ಭರತನಾಟ್ಯವನ್ನು ಇಷ್ಟಪಡುತ್ತಿದ್ದ ಅನುಪಮಾಗೆ ತನ್ನ ಅಕ್ಕನೇ ನೃತ್ಯ ಗುರು! ಹೌದು. ಅಕ್ಕನ ಬಳಿ ಭರತನಾಟ್ಯವನ್ನು ಕರಗತ ಮಾಡಿಕೊಂಡ ಆಕೆ ಮುಂದೆ ಈಟಿವಿ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅನುಪಮಾ ರನ್ನರ್ ಅಪ್ ಆಗಿ ಹೊರಬಂದರು. ಆ ಸಂತಸದ ಗುಂಗಿನಲ್ಲಿರುವಾಗಲೇ ಬಿಗ್ ಬಾಸ್ ಸೀಸನ್ 2 ಅವರನ್ನು ಕೈ ಬೀಸಿ ಕರೆಯಿತು. 91 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಅನುಪಮಾ ಸದಾ ಕಾಲ ಹಸನ್ಮುಖಿಯಾಗಿರುತ್ತಿದ್ದರು. ಮತ್ತು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಅನುಪಮಾ ಯಾವತ್ತೂ ಜಗಳಕ್ಕೆ ಆಸ್ಪದ ಕೊಡುತ್ತಿರಲಿಲ್ಲ.

ವಿಶ್ವದ ನಂ.1 ಬೌಲರ್ ಈ ನಟಿಗೆ ಕ್ಲೀನ್ ಬೋಲ್ಡ್? ಇಲ್ಲಿವೆ ಫೋಟೋಸ್!

 

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನ್ನ ನಗಮುಖದಿಂದಲೇ ಜನರಿಗೆ ಹತ್ತಿರವಾದ ಅನುಪಮಾಗೆ ಸಿನಿಮಾ, ಕಿರುತೆರೆಯಿಂದ ಸಾಕಷ್ಟು ಅವಕಾಶಗಳು ಒದಗಿ ಬಂದವು. ಆ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿನು ಬಳಂಜ ನಿರ್ದೇಶನದ ‘ಲವ್ ಲವಿಕೆ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.

 

ಇದೀಗ ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಫ್ಯಾಮಿಲಿ ವಾರ್ ಸೀಸನ್ 2 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಅನುಪಮಾ ಗೆ ಆಲ್ ದಿ ಬೆಸ್ಟ್!

- ಅನಿತಾ ಬನಾರಿ