ಮಿಸ್ಟರ್ ಆ್ಯಂಡ್ ಮಿಸ್ ಸ್ಟೈಲಿಷ್ ಕಪಲ್ ಆಫ್ ಬಿ-ಟೌನ್ ಅಂದ್ರೆ ಆನಂದ್ ಅಹುಜಾ ಆ್ಯಂಡ್ ಸೋನಂ ಕಪೂರ್. ಇಬ್ಬರೂ ಒಂದೇ ರೀತಿಯ ಕಾಂಬಿನೇಷನ್ ಉಡುಪುಗಳನ್ನು ಧರಿಸುತ್ತಾರೆ.

2018 ರಲ್ಲಿ ಮೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನಂ ಈಗ ಪ್ರೆಗ್ನೆಂಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣವೇ ಆನಂದ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಂದೇ ರೀತಿಯ ಶೂ ಧರಿಸಿದ್ದು ಅದರ ಲೇಸ್ ಕಟ್ಟಿರುವುದು.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳಿವರು

ಅಷ್ಟೇ ಅಲ್ಲದೆ ಕೆಲದಿನಗಳಿಂದ ಲೂಸ್ ಉಡುಪುಗಳನ್ನು ಮಾತ್ರ ಧರಿಸುತ್ತಿರುವುದು ಈ ಕುತೂಹಲ ಇನ್ನೆಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ. ಈ ಕಾರ್ಯಕ್ರಮದಲ್ಲೂ ಸೋನಂ ಹಳದಿ ಮ್ಯಾಕ್ಸಿ ಧರಿಸಿದ್ದು ದಂಪತಿಗಳಿಬ್ಬರು ಹಳದಿ- ಕೆಂಪು ಕಾಂಬಿನೇಷನ್ ಶೂ ಧರಿಸಿದ್ದರು.