ಬೆಂಗಳೂರು (ಮಾ. 26): ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಹೆಚ್ಚಾಗುತ್ತಿದೆ. ಸೆಲಬ್ರಿಟಿಗಳು ಎನಿಸಿಕೊಂಡವರನ್ನು ಟ್ರೋಲ್ ಮಾಡಲು ಕಾಯುತ್ತಿರುತ್ತಾರೆ. ಒಂದು ಸಣ್ಣ ವಿಷಯ ಸಿಕ್ಕರೆ ಸಾಕು ಅದನ್ನು ಹಿಡಿದುಕೊಂಡು ಟ್ರೋಲ್ ಮಾಡಿ ಬಿಡುತ್ತಾರೆ. 

ಬಾಲಿವುಡ್ ನಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳು ಯಾರ್ಯಾರು ಇಲ್ಲಿದೆ ನೋಡಿ. 

ಅಲಿಯಾ ಭಟ್

ಬಾಲಿವುಡ್ ಕ್ಯೂಟ್ ಗರ್ಲ್ ಅಲಿಯಾ ಭಟ್ ಅತೀ ಹೆಚ್ಚು ಟ್ರೋಲ್ ಆಗ್ತಾ ಇರ್ತಾರೆ. ಕೆಲವೊಂದು ಪ್ರಶ್ನೆಗಳಿಗೆ ಇವರು ಪೆದ್ದು ಪೆದ್ದಾಗಿ ಉತ್ತರಿಸೋದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಇವರು ಏನೋ ಮಾತನಾಡಲು ಹೋಗಿ ಇನ್ನೇನೋ ಆಗಿ ಬಿಡುತ್ತಾರೆ. 

ಸೋನಮ್ ಕಪೂರ್

ಕಪೂರ್ ಖಾಂದಾನ್ ಕುಡಿ ಸೋನಮ್ ಕಪೂರ್ ಹೆಚ್ಚು ಚಾಲ್ತಿಯಲ್ಲಿರುವ ನಟಿ. ಟ್ರೋಲ್ ಆಗುವವರಲ್ಲಿ ಇವರು ಕೂಡಾ ಹಿಂದೆ ಸರಿದಿಲ್ಲ. ಇತ್ತೀಚಿಗೆ ಆನಂದ್ ಅಹುಜಾರವನ್ನು ಸೋನಂ ಮದುವೆಯಾಗಿದ್ದಾರೆ. 

ರಾಖಿ ಸಾವಂತ್ 
ಇವರು ಟ್ರೋಲಿಗರ ಹಾಟ್ ಫೇವರೇಟ್. ಇವರು ನಿಂತಿದ್ದು, ಕುಂತಿದ್ದು, ಡ್ರೆಸ್, ಡೇಟಿಂಗ್ ಸ್ಟೇಟಸ್ ಎಲ್ಲವೂ ಟ್ರೋಲ್ ಆಗುತ್ತಿರುತ್ತದೆ. ಇವರ ಸೆಕ್ಸಿ ಲುಕ್ ಗೆ ಅಭಿಮಾನಿಗಳು ಬಿದ್ದೇ ಹೋಗುತ್ತಾರೆ. 

ಜಾಹ್ನವಿ ಕಪೂರ್
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟರು. ಮೊದಲ ಚಿತ್ರವೇ ಇವರಿಗೆ ಭಾರೀ ಯಶಸ್ಸು ತಂದು ಕೊಟ್ಟಿತು. ಇವರು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುತ್ತಾರೆ. 

ದೀಪಿಕಾ ಪಡುಕೋಣೆ 

ಇವರ ಹೆಸರನ್ನು ಕೇಳದವರೇ ಇಲ್ಲ. ರಣವೀರ್ ಸಿಂಗ್ ಜೊತೆ ಮದುವೆಯಾದ ಮೇಲೆ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.