'ನಾನು ನಂದಿನಿ' ಹಾಡಿಗೆ ಕುಣಿದ ಸಾರಾ ಅಣ್ಣಯ್ಯ, ಅಮೃತಧಾರೆ ಸೀರಿಯಲ್ ಟೀಂ ಜೊತೆ ರೀಲ್ಸ್
'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದ್ರಲ್ಲಿ ಇದೇ ಹಾಡಿನ ಗುಂಗು. ಜನರು ಇದೇ ಸಾಂಗ್ ಬಳಿಸಿ ವಿಡಿಯೋವನ್ನು ಸಹ ಪೋಸ್ಟ್ ಮಾಡುತ್ತಿದ್ದಾರೆ. ನಟ-ನಟಿಯರು ಇದರಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಕನ್ನಡತಿ ವರೂಧಿನಿ ಫೇಮ್ ನಟಿ ಸಾರಾ ಅಣ್ಣಯ್ಯ ಈ ಸಾಂಗ್‌ನ ರೀಲ್ಸ್ ಮಾಡಿದ್ದು ವೈರಲ್ ಆಗ್ತಿದೆ.

ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ ಉಳಿಯುವ ಹೆಣ್ಣು ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅದುವೇ 'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು. 'ನಾನು ನಂದಿನಿ ಬೆಂಗ್ಳೂರು ಬಂದೀನಿ...' ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದ್ರಲ್ಲಿ ಇದೇ ಹಾಡಿನ ಗುಂಗು. ಜನರು ಇದೇ ಸಾಂಗ್ ಬಳಿಸಿ ವಿಡಿಯೋವನ್ನು ಸಹ ಪೋಸ್ಟ್ ಮಾಡುತ್ತಿದ್ದಾರೆ. ನಟ-ನಟಿಯರು ಇದರಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಕನ್ನಡತಿ ವರೂಧಿನಿ ಫೇಮ್ ನಟಿ ಸಾರಾ ಅಣ್ಣಯ್ಯ ಈ ಸಾಂಗ್‌ನ ರೀಲ್ಸ್ ಮಾಡಿದ್ದು ವೈರಲ್ ಆಗ್ತಿದೆ.
ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿಯಾಗಿ ಮಿಂಚಿದ್ದ ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ಟ್ರೆಡಿಷನಲ್, ಮಾಡರ್ನ್ ಡ್ರೆಸ್‌ನಲ್ಲಿ ಪೋಟೋಶೂಟ್ ಮಾಡಿಸ್ಕೊಂಡು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಹಾಗೆಯೇ ಹೊಸ ಹಾಡುಗಳಿಗೂ ರೀಲ್ಸ್ ಮಾಡಿ ಅಭಿಮಾನಿಗಳ ಮನಸ್ಸು ಗೆಲ್ಲುತ್ತಾರೆ. ಹಾಗೆಯೇ ಸದ್ಯ, ಸಾರಾ ಅಣ್ಣಯ್ಯ ನಾನು ನಂದಿನಿ ಹಾಡಿಗೂ ತಮ್ಮ ಟೀಮ್ ಜೊತೆ ಸ್ಟೆಪ್ಸ್ ಹಾಕಿದ್ದಾರೆ.
ಸಾರಾ ಅಣ್ಣಯ್ಯ ಕಲರ್‌ಫುಲ್ ಲುಕ್; ಏನ್ರೀ ಹಾಟ್ ಡ್ರೆಸ್ ಹಾಕ್ತಾರೆ 'ಕನ್ನಡತಿ' ವರೂಧಿನಿ ಎಂದ ನೆಟ್ಟಿಗರು
ಅಮೃತಧಾರೆ ಸೀರಿಯಲ್ ಟೀಂ ಜೊತೆ 'ನಾನು ನಂದಿನಿ' ರೀಲ್ಸ್ ಮಾಡಿದ ಸಾರಾ ಅಣ್ಣಯ್ಯ
ಕನ್ನಡತಿ ಧಾರಾವಾಹಿಯಲ್ಲಿ ಸೈಕೋ ವಿಲನ್ ವರೂಧಿನಿ ಪಾತ್ರದಲ್ಲಿ ಅಭಿನಯಿಸಿದ್ದ ಸಾರಾ ಅಣ್ಣಯ್ಯ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಆ ನಂತರ ಅವರು ಲಚ್ಚಿ ಧಾರಾವಾಹಿಯಲ್ಲಿ ಅಭಿನಯಿಸಿದರು. ಸದ್ಯ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೇ ಸೀರಿಯಲ್ ಟೀಮ್ ಜೊತೆ ನಾನು ನಂದಿನಿ ರೀಲ್ಸ್ ಮಾಡಿದ್ದಾರೆ. ಜೊತೆಯಲ್ಲಿ ಸೀರಿಯನ್‌ನಲ್ಲಿ ಅಭನಯಿಸುತ್ತಿರುವ ಶಶಿ ಹೆಗ್ಡೆ ಹಾಗೂ ಕರಣ್ ಕೆ.ಆರ್ ಕೂಡಾ ಕಾಣಿಸಿಕೊಂಡಿದ್ದಾರೆ.
ಇಂತಹ ಕನಸಿನ ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು. ಸಾಮಾಜಿಕ ಜಾಲತಾಣ ಬಳಕೆ ಮಾಡುವ ಬಹುತೇಕರಿಗೆ ಇವರ ಪರಿಚಯ ಮಾಡಬೇಕಾಗಿಲ್ಲ. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ.
ಅಬ್ಬಬ್ಬಾ, ಕನ್ನಡತಿಯ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ಬೋಲ್ಡ್!
ವೀಡಿಯೋದಲ್ಲೇನಿದೆ.
'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್' ಇದು ಈ ಹಾಡಿನ ಲಿರಿಕ್ಸ್ ಆಗಿದೆ.
ಈ ಹಾಡನ್ನು ಇಂಗ್ಲೀಷ್‌ನ ಐಮ್ ಬಾರ್ಬಿ ಗರ್ಲ್ (I'm a barbie girl) ಎಂಬ ಹಾಡಿನ ಟ್ಯೂನ್‌ನಲ್ಲಿ ಹಾಡಲಾಗಿದೆ. ಕೇಳಲು ನೋಡಲು ಎರಡರಲ್ಲೂ ಸೊಗಸಾಗಿರುವ ಈ ಹಾಡನ್ನು ಬೆಂಗಳೂರಿನಲ್ಲಿ ಕೆಲಸ ಮಾಡುವ ಪಿಜಿಯಲ್ಲಿದ್ದು ದುಡಿಯುವ ಲಕ್ಷಾಂತರ ಜನ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ವಿಕಿಪೀಡಿಯಾ ವಿಕ್ಕಿ (vickypedia) ಒಬ್ಬರು ಹಾಸ್ಯ ಪ್ರಧಾನವಾದ ಕಂಟೆಂಟ್ ಕ್ರಿಯೇಟರ್. ಅವರ ತಂಡದ ನಟನೆ ಕೂಡ ಸೂಪರ್ ಎನಿಸಿದೆ. ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಕೂಡ ಈ ವೀಡಿಯೋ ನೋಡಿ ವಾವ್ ಅದ್ಭುತ್ ಎಂದು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಸೆಲೆಬ್ರಿಟಿಗಳಾದ ವೈನ್ ಸ್ಟೋರ್ ರಘು, ದಿವ್ಯ ಉರುಡುಗ, ನಿರೂಪಕಿ ಅನುಪಮಾ ಗೌಡ, ಸೇರಿದಂತೆ ಅನೇಕ ವ್ಲಾಗರ್‌ಗಳು, ಮೀಮ್ಸ್ ಪೇಜ್‌ಗಳು ಈ ಹಾಡನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಅನೇಕರು ಈ ಹಾಡು ನಮ್ಮ ಬದುಕಿಗೆ ಕನೆಕ್ಟ್ ಆಗುತ್ತಿದೆ. ನಿನ್ನೆಯಿಂದ ಈ ಹಾಡನ್ನೇ ಗುನುಗುತ್ತಿರುವೆ ರಿಪೀಟ್ ಮೂಡಲ್ಲಿ ಕೇಳುತ್ತಿರುವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.