ಸಾರಾ ಅಣ್ಣಯ್ಯ ಕಲರ್ಫುಲ್ ಲುಕ್; ಏನ್ರೀ ಹಾಟ್ ಡ್ರೆಸ್ ಹಾಕ್ತಾರೆ 'ಕನ್ನಡತಿ' ವರೂಧಿನಿ ಎಂದ ನೆಟ್ಟಿಗರು
ಏನ್ ಮಾಡ್ತಿದ್ದಾರೆ ಕನ್ನಡತಿ ಧಾರಾವಾಹಿ ವರೂಧಿನಿ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವ ಫೋಟೋ ನೋಡಿ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್....
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಖಡಕ್ ವರೂಧಿನಿ ಎಂದೇ ಖ್ಯಾತಿ ಪಡೆದಿರುವ ಸಾರಾ ಅಣ್ಣಯ್ಯ ಈಗೇನು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಪದೇ ಪದೇ ಪ್ರಶ್ನೆ ಕೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸಾರಾ ಅಣ್ಣಯ್ಯ ಹಾಟ್ ಹಾಟ್ ಆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವರೂಧಿನಿ ಇಷ್ಟ ಸಾರಾನೂ ಇಷ್ಟ ಎನ್ನುತ್ತಿದ್ದಾರೆ.
ವರೂಧಿನಿ ಪಾತ್ರವೂ ಬೋಲ್ಡ್ ಆಗಿದ್ದ ಕಾರಣ ಆಗಲ್ಲೇ ನೆಟ್ಟಿಗರು ಡ್ರೆಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡುತ್ತಿದ್ದರು. ಧಾರಾವಾಹಿ ಮುಗಿದುರವ ಕಾರಣ ಸೂಪರ್ ಸೂಪರ್ ಎನ್ನುತ್ತಿದ್ದಾರೆ.
ಕನ್ನಡತಿ ನಂತರ ಸಾರಾ ಯಾವ ಪ್ರಾಜೆಕ್ಟ್ಗೆ ಸಹಿ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಆದರೆ ಮೇಕಪ್ ಮತ್ತು ಬ್ರ್ಯಾಂಡ್ ಫೋಟೋ ಶೂಟ್ಗಳನ್ನು ಮಾಡುತ್ತಿರುವುದು ನೋಡಬಹುದು.
'ವರೂಧಿನಿ ಪಾತ್ರಕ್ಕೆ ವೀಕ್ಷಕರು ಸೈಕೋ ಎನ್ನುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚಿನ ಜನ ಬಟ್ಟೆ ಕರೆಕ್ಟ್ ಆಗಿ ಹಾಕು ಎಂದು ಕಾಮೆಂಟ್ ಮಾಡುತ್ತಾರೆ ನನಗೆ ಬೇಸರ ಆಗಲ್ಲ ಆದರೆ ಓದಲು ಕಷ್ಟವಾಗುತ್ತದೆ.' ಎಂದು ಹಿಂದೆ ದರ್ಶನದಲ್ಲಿ ಹೇಳಿದ್ದರು.
' ಜನರು ಏನೇ ಹೇಳಿದ್ದರು ನನ್ನ ಇಷ್ಟದ ಪ್ರಕಾರನೇ ಬಟ್ಟೆ ಧರಿಸುವುದು. ನೆಗೆಟಿವ್ ಕಾಮೆಂಟ್ ಮಾಡಿ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡಿ' ಎನ್ನುತ್ತಾರೆ ಸೂಪರ್ ಕೂಲ್ ಸಾರಾ.
'ಕನ್ನಡತಿ'ಯ ಜನಪ್ರಿಯತೆ ಹೆಚ್ಚಿದಂತೆ ನನಗೆ ಬರುತ್ತಿರುವ ಅವಕಾಶಗಳು ಹೆಚ್ಚಿವೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ವರೂಧಿನಿ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಜನರಿಗೆ ಕ್ರೇಜ್ ಹೆಚ್ಚಿದೆ.
2 ಲಕ್ಷ 15 ಸಾವಿರ ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ಸಾರಾ ಅಣ್ಣಯ್ಯ 96 ಪೋಸ್ಟ್ಗಳನ್ನು ಹಾಕಿದ್ದಾರೆ ಹಾಗೂ ಕೇವಲ 147 ಜನರನ್ನು ಫಾಲೋ ಮಾಡುತ್ತಿದ್ದಾರೆ.