76 ವರ್ಷವಾದರೂ ಇನ್ನು 25 ರ ಹುಮ್ಮಸ್ಸಿನಲ್ಲಿರುವ ನಟ ಅಮಿತಾಭ್ ಸಂದರ್ಶನವೊಂದರಲ್ಲಿ ಆಡಿದ ಮಾತು ಅಭಿಮಾನಿಗಳಿಗೆ ಶಾಕ್ ಆಗಿದೆ. ಹೌದು ನೋಡಲು ಫಿಟ್ ಆ್ಯಂಡ್ ಫೈನ್ ಆಗಿ ಕಾಣುವ ಅಮಿತಾಭ್ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಡಯಾಬಿಟಿಸ್, ಟಿಬಿ, ಉದರ ಸಂಬಂಧಿ ಹಾಗೂ ಯಕೃತ್ ತೊಂದರೆಯಿಂದ ಬಳಲುತ್ತಿದ್ದಾರೆ.

ನಿಮ್ಮ ನಂಬಿಕೆಗೆ ಬದ್ಧರಾಗಿ; ಶುರುವಾಗಲಿದೆ ಕೌನ್ ಬರೇಗಾ ಕರೋಡ್‌ಪತಿ

ಕಳೆದ 20 ವರ್ಷಗಳಿಂದ ಶೇ. 75 ರಷ್ಟು ಲಿವರ್ ಕೆಲಸವನ್ನೇ ಮಾಡುತ್ತಿಲ್ಲ. ‘ಇದಕ್ಕೆಲ್ಲಾ ಪರಿಹಾರವಿದೆ. 8 ವರ್ಷಗಳಿಂದ Tuberculosis ನಿಂದ ನರಳುತ್ತಿದ್ದೀನಿ ಎಂದು ನನಗೇ ಗೊತ್ತಿರಲಿಲ್ಲ. ಇಂತಹ ಆರೋಗ್ಯ ಸಮಸ್ಯೆ ಯಾರಿಗೆ ಬೇಕಾದರೂ ಆಗಬಹುದು. ಹಾಗಾಗಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ’ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್‌ಗೆ ಇದೆಂಥಾ ಗತಿ ಬಂತಪ್ಪಾ!