ಬಿ- ಟೌನ್ ಬಿಗ್ ಬಿ ಅಮಿತಾಬಚ್ಚನ್ ವಯಸ್ಸು 76 ದಾಟಿದರೂ ಇನ್ನೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಾರೆ. ಹೊಸ ಹೊಸ ಸವಾಲಿನ ಪಾತ್ರ ಮಾಡುತ್ತಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಈಗ ಸೂಜಿತ್ ಸಿರ್ಕಾರ್ ಗುಲಾಬೋ ಸಿತಾಬೋ ಎನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಈ ಚಿತ್ರದಲ್ಲಿ ಅಮಿತಾಬ್ ಡಿಫರೆಂಟ್ ಪಾತ್ರ ಮಾಡುತ್ತಿದ್ದು  ಉದ್ದವಾದ ಗಡ್ಡ, ತಲೆಗೊಂದು ಸ್ಕಾರ್ಫ್, ಕನ್ನಡಕ ಹಾಕಿಕೊಂಡು ಮುಪ್ಪಿನ ಚಿಂತೆಯಲ್ಲಿರುವಂತೆ ಕಾಣಿಸುತ್ತಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 

ಈ ಸಿನಿಮಾದಲ್ಲಿ ಬಿಗ್ ಬಿ ಲ್ಯಾಂಡ್ ಲಾರ್ಡ್ ಪಾತ್ರ ಮಾಡುತ್ತಿದ್ದಾರೆ. ಪಾ, 102 ನಾಟ್ ಔಟ್ ನಂತರ ಇದೊಂದು ಡಿಫರೆಂಟ್ ಪಾತ್ರ ಮಾಡುತ್ತಿರುವ ಸಿನಿಮಾ. ಲಕ್ನೋದಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಆಯುಷ್ಮನ್ ಖುರಾನ್ ಸಹ ಇದ್ದಾರೆ.