ಕೌನ್ ಬನೇಗಾ ಕರೋಡ್ ಪತಿ ಸೀಸನ್ 11 ಶುರುವಾಗಲಿದೆ. ಸೋನಿ ಚಾನೆಲ್ ಪ್ರೋಮೋವನ್ನು ಬಿಟ್ಟಿದೆ. 

ಈ ಬಾರಿಯ ಶೋಗೆ 'ನಿಮಗೆ ಯಾವುದರಲ್ಲಾದರೂ ನಂಬಿಕೆ ಇದ್ರೆ ಸಂಪೂರ್ಣವಾಗಿ ನಂಬಿ' ಎಂದು ಟೈಟಲ್ ಕೊಡಲಾಗಿದೆ.

 

ಪ್ರೋಮೋ ವಿಡಿಯೋದಲ್ಲಿ ಹೆಣ್ಣು ಮಗಳೊಬ್ಬಳು, ಮದುವೆಯಾಗುವುದರ ಬದಲು ಮನೆಯನ್ನು ಮುನ್ನಡೆಸಲು, ಬ್ಯುಸಿನೆಸ್ ಮಾಡಲು ಇಷ್ಟಪಡುತ್ತಾಳೆ. ಮನೆಯವರ, ಅಕ್ಕಪಕ್ಕದವರ ಟೀಕೆಗೆ ಗುರಿಯಾಗುತ್ತಾಳೆ. ಕೊನೆಗೆ ತನ್ನ ಹಠವನ್ನು ಸಾಧಿಸಿ ಯಶಸ್ವಿಯಾಗುತ್ತಾಳೆ. ಕೊನೆಗೆ ನಿಮಗೆ ಯಾವುದರಲ್ಲಿ ನಂಬಿಕೆ ಇರುತ್ತದೋ ಅದಕ್ಕೆ ಬದ್ಧರಾಗಿ ಎಂದು ಕೊನೆಯಲ್ಲಿ ಅಮಿತಾಬ್ ಹೇಳುತ್ತಾರೆ. 

ಆಗಸ್ಟ್ ಮೊದಲ ವಾರದಿಂದ ಕೆಬಿಸಿ ಶುರುವಾಗಲಿದೆ.