ಕೊರೋನಾ ವೈರಸ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಗ್ ಬಿ ಅಮಿತಾಭ್ ಬಚ್ಚನ್ ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಗ ಅಭಿಷೇಕ್ ಬಚ್ಚನ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ  ಅಮಿತಾಬ್ ಬೇಜಾರಾಗಿದ್ದಾರೆ.

ಮುಂಬೈಯ ನನಾವತಿ ಆಸ್ಪತ್ರೆಯಲ್ಲಿ 22 ದಿನ ಕೊರೋನಾಗೆ ಚಿಕಿತ್ಸೆ ಪಡೆದ ಅಮಿತಾಬ್ ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಮೇಲೆ ಡಿಸ್ಚಾರ್ಜ್ ಆಗಿದ್ದಾರೆ. ಅಭಿಷೇಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ  ಕಳವಳ ವ್ಯಕ್ತಪಡಿಸಿದ್ದಾರೆ. ತಂದೆ ಹಾಗೂ ಮಗ ಜುಲೈ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್..!

ಸೋಮವಾರ ರಕ್ಷಾ ಬಂಧನ ಸಂಭ್ರಮದಲ್ಲಿ ಅಭಿಷೇಕ್‌ನನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಆಸ್ಪತ್ರೆಯಿಂದ ಹೊರಗೆ ಬಂದಿರುವುದು ಭಾವುಕ ಸಮಯ. ಕೊರೋನಾದಿಂದ ಮುಕ್ತಿ ಸಿಕ್ಕಿತು ಎಂದಿದ್ದಾರೆ. ಆದರೆ ಅಭಿಷೇಕ್‌ಗೆ ಇನ್ನೂ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.

ಭಾನುವಾರ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ ತಂದೆ ಅಮಿತಾಭ್ ಬಚ್ಚನ್ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿರುವುದಾಗಿ ತಿಳಿಸಿದ್ದರು. ತಂದೆಗೆ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದೆ. ಇನ್ನು ಅವರು ಮನೆಗೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ. ನಿಮ್ಮೆಲ್ಲರ ಹಾರೈಕೆ ಹಾಗೂ ಪ್ರಾರ್ಥನೆಗೆ ಧನ್ಯವಾದ ಎಂದಿದ್ದಾರೆ.

ನನಗೆ ಕೊರೋನಾ ನೆಗೆಟಿವ್‌ ಬಂದಿಲ್ಲ, ವರದಿ ಸುಳ್ಳು: ಅಮಿತಾಭ್‌ ಸ್ಪಷ್ಟನೆ

ನನಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲೇ ಇರಬೇಕಾಗಿದೆ. ನನ್ನ ಕುಟುಂಬಕ್ಕಾಗಿ ನಿಮ್ಮ ಪ್ರಾರ್ಥನೆಗಳಿಗೆ ಧನ್ಯವಾದ. ಇದಕ್ಕೆ ನಾನು ಅಭಾರಿ. ನಾನು ಕೊರೋನಾ ಸೋಲಿಸಿ ಆರೋಗ್ಯವಾಗಿ ಮರಳುತ್ತೇನೆ ಎಂದು ಬರೆದಿದ್ದಾರೆ.

ಈ ಬಗ್ಗೆ ಅಬಿತಾಭ್ ಬಚ್ಚನ್ ಅವರೂ ಎಲ್ಲರಿಗೂ ತಮ್ಮ ಕ್ಷೇಮದ ಬಗ್ಗೆ ಮಾಹಿತಿ ನೀಡಿ, ನನಗೆ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದೆ. ಮನೆಯಲ್ಲಿ ಕ್ವಾರೆಂಟೈನ್‌ನಲ್ಲಿರುತ್ತೇನೆ. ನನ್ನ ಬಾಬೂಜಿ, ನಿಮ್ಮಲ್ಲರ ಪ್ರಾರ್ಧನೆ, ನನಾವತಿ ಆಸ್ಪತ್ರೆಯ ಸಿಬ್ಬಂದಿಗಳ ಆರೈಕೆಯಿಂದ ನಾನು ಈ ದಿನವನ್ನು ನೋಡಲು ಸಾಧ್ಯವಾಯಿತು ಎಂದು ಬರೆದಿದ್ದಾರೆ.