ಅನಾಮಧೇಯ ಟ್ರೋಲ್‌ಗೆ ಉತ್ತರಿಸಿದ ಅಮಿತಾಬ್‌ ವಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬಹಿರಂಗ ಪತ್ರದ ಮೂಲಕ ಟ್ರೋಲಿಗರಿಗೆ ಚಾಟಿ ಬೀಸಿದ್ದಾರೆ. ನೀವು ಕೊರೋನಾದಿಂದಲೇ ಸಾಯುತ್ತೀರಿ ಎಂದು ಬರುತ್ತಿರುವ ಅನಾಮಧೇಯ ಮೆಸೇಜುಗಳಿಗೆ ಅವರು ಬರಹದ ಮೂಲಕ ಉತ್ತರಿಸಿದ್ದಾರೆ.

ಹೇ ಅನಾಮಧೇಯನೇ, ನೀನು ಕನಿಷ್ಠ ನಿನ್ನ ತಂದೆ ಹೆಸರನ್ನೂ ಬರೆದಿಲ್ಲ. ನಿನ್ನ ತಂದೆ ಯಾರೆಂಬುದೇ ನಿನಗೆ ಗೊತ್ತಿಲ್ಲ. ಈಗಿರುವುದು ಎರಡೇ ಸಾಧ್ಯತೆ. ನಾನು ಸಾಯಬೇಕು, ಅಥವಾ ಬದುಕಬೇಕು. ನಾನು ಸತ್ತರೆ ನನ್ನ ಮೇಲೆ ವಾಗ್ದಾಳಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ನನಗೆ ಕೊರೋನಾ ನೆಗೆಟಿವ್‌ ಬಂದಿಲ್ಲ, ವರದಿ ಸುಳ್ಳು: ಅಮಿತಾಭ್‌ ಸ್ಪಷ್ಟನೆ

ಹಾಗೆಯೇ ತಮ್ಮ ಫ್ಯಾನ್ಸ್‌ಗಳನ್ನು, ಫಾಲೋವರ್ಸ್‌ಗಳನ್ನು ನೆನಪಿಸಿದಕೊಂಡ ಅಮಿತಾಬ್‌ ಅವರೆಲ್ಲರೂ ನನ್ನದೇ ಕುಟುಂಬ ಎಂದಿದ್ದಾರೆ. ನಿಮ್ಮ ಕಿಚ್ಚಿನಲ್ಲಿ ನೀವೇ ಸಾಯುತ್ತೀರಿ ಎಂದು ಟ್ರೋಲಿಗರಿಗೆ ಉತ್ತರಿಸಿದ್ದಾರೆ.

'ಅಳ್ಬೇಡಿ, ನೀವು ಬೇಗ ಮನೆಗೆ ಬರ್ತೀರಿ' ಮೊಮ್ಮಗಳ ಪ್ರೀತಿ ನೆನೆದು ಭಾವುಕರಾದ ಅಮಿತಾಭ್

ಐಶ್ವರ್ಯಾ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯ ಕೊರೋನಾ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭ ಮೊಮ್ಮಗಳ ಪ್ರೀತಿಯ ಮಾತು ನೆನೆಸಿ ಭಾವುಕರಾಗಿದ್ದಾರೆ ಅಮಿತಾಭ್ ಬಚ್ಚನ್.

ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲು ಅಮಿತಾಭ್ ಬಚ್ಚನ್ ಕವಿತೆ!

ಸೋಮವಾರ ರಾತ್ರಿ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡ ಬಿಗ್‌ ಬಿ, ಮೊಮ್ಮಗಳು, ಮತ್ತು ಸೊಸೆ ಮನೆಗೆ ಹೋದರು. ಪುಟ್ಟ ಮೊಮ್ಮಗಳು ಅಳಬೇಡಿ, ಬೇಗ ಹುಷಾರಾಗಿ ಬರುತ್ತೀರಿ ಎಂದಳು. ನಾನು ಖಂಡಿತ ಅವಳನ್ನು ನಂಬಬೇಕು ಎಂದು ಬರೆದಿದ್ದಾರೆ.