ಮುಂಬೈ (ಜು. 24):  ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂಬ ವರದಿಗಳು ಭಾರೀ ಸದ್ದು ಮಾಡುತ್ತಿದೆ. ಆದರೆ, ತಾವಿನ್ನೂ ಕೋವಿಡ್‌-19ನಿಂದ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಸ್ವತಃ ಅಮಿತಾಭ್‌ ಬಚ್ಚನ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿ ಮಾಧ್ಯಮದ ವಿಡಿಯೋವೊಂದರ ತುಣುಕನ್ನು ಟ್ವೀಟ್‌ ಮಾಡಿದ ಅಮಿತಾಭ್‌, ‘ನಾನಿನ್ನೂ ಕೊರೋನಾದಿಂದ ಸಂಪೂರ್ಣ ಗುಣಮುಖನಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಕೊರೋನಾ ಗೆದ್ದಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತೇನೆ ಎಂದು ಹರಿದಾಡುತ್ತಿದೆ.

 

'ಸಮಯ ಸಿಕ್ಕಿದೆ' ಆಸ್ಪತ್ರೆಯಲ್ಲಿರುವ ಅಮಿತಾಬ್‌ ಹಂಚಿಕೊಂಡ ಜೀವನ ಪಾಠ

ಆದರೆ, ಇದು ಸಂಪೂರ್ಣ ಸುಳ್ಳು, ಬೇಜವಾಬ್ದಾರಿ, ಸರಿಪಡಿಸಲಾಗದ ಸುಳ್ಳು ಹಾಗೂ ತಪ್ಪು ಮಾಹಿತಿ’ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಕೊರೋನಾದಿಂದ ಬಳಲುತ್ತಿರುವ ಅಮಿತಾಭ್‌ ಬಚ್ಚನ್‌, ಪುತ್ರ ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯ ಬಚ್ಚನ್‌ ಹಾಗೂ ಮೊಮ್ಮಗಳು ಆರಾಧ್ಯಾ ಇಲ್ಲಿನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.