‘ಓಟಿಟಿಗಳನ್ನು ನಂಬಿಕೊಂಡು ಸಿನಿಮಾ ಮಾಡಬೇಡಿ. ಓಟಿಟಿಗಳ ಕಾಲ ಮುಗಿದು ಹೋಗಿದೆ’. ಹೀಗೆ ಹೇಳಿರುವುದು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್‌.

‘ಓಟಿಟಿಗಳನ್ನು ನಂಬಿಕೊಂಡು ಸಿನಿಮಾ ಮಾಡಬೇಡಿ. ಓಟಿಟಿಗಳ ಕಾಲ ಮುಗಿದು ಹೋಗಿದೆ’. ಹೀಗೆ ಹೇಳಿರುವುದು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್‌. ‘ಆಹಾ’ ಓಟಿಟಿ ಮಾಲೀಕರೂ ಆಗಿರುವ ಅಲ್ಲು ಅರವಿಂದ್‌ ಅವರೇ ‘ಓಟಿಟಿ ಕಾಲ ಮುಗಿದಿದೆ’ ಎನ್ನುವ ಹೇಳಿಕೆ ಅಚ್ಚರಿ ಮತ್ತು ಚರ್ಚೆಗೆ ಕಾರಣವಾಗಿದೆ. ಬಹಳಷ್ಟು ಮಂದಿ ಅವರು ಮಾತಿಗೆ ಒಪ್ಪಿಗೆ ಸೂಚಿಸಿದರೆ, ಇನ್ನು ಕೆಲವರು ವಿರೋಧಿಸಿದ್ದಾರೆ. ಚರ್ಚಾರ್ಹವಾದ ಅವರ ಮಾತುಗಳು ಇಲ್ಲಿವೆ.

1. ಸಿನಿಮಾಗಳ ನಿರ್ಮಾಣಕ್ಕೆ ಹಾಕುವ ಅರ್ಧ ಹಣ ಓಟಿಟಿ ಬಿಸಿನೆಸ್‌ಗಳಿಂದ ಬರುತ್ತದೆ ಎನ್ನುವ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಓಟಿಟಿಗಳ ಕಾಲವೂ ಮುಗಿದಿದೆ.

2. ಓಟಿಟಿಗಳು ಕೂಡ ತಮಗೆ ಯಾವ ರೀತಿಯ ಕಂಟೆಂಟ್‌ ಬೇಕು, ಬೇಡ ಎನ್ನುವ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಅಥವಾ ಜಿಪುಣತನ ತೋರುತ್ತಿವೆ. ಹೀಗಾಗಿ ಮೊದಲಿನಂತೆ ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಓಟಿಟಿಗಳು ರೆಡಿ ಇಲ್ಲ.

3. ಕೆಲ ನಿರ್ದೇಶಕ, ನಾಯಕ ನಟರ ಸಿನಿಮಾಗಳನ್ನು ಮಾತ್ರ ಯಾವುದೇ ಷರತ್ತುಗಳು ಇಲ್ಲದೆ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಮೊದಲಿನಂತೆ ಎಲ್ಲಾ ರೀತಿಯ ಸಿನಿಮಾಗಳಿಗೆ ಹಣ ಕೊಟ್ಟು ಕೊಳ್ಳುತ್ತಿಲ್ಲ.

ಎಚ್ಚರಿಕೆ ನೀಡಿದ್ದೇನೆ

4. ನಾನೂ ಕೂಡ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್‌ ಹೆಡ್‌ಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇನೆ. ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರ ಬಂಡವಾಳ ಹೂಡುವಂತೆ ಹೇಳಿದ್ದೇನೆ. ಥಿಯೇಟರ್‌ಗಳಲ್ಲಿ ಯಶಸ್ಸು ಕಾಣದ ಸಿನಿಮಾಗಳಿಗೆ ಬೇರೆ ಯಾವುದೇ ಫ್ಲ್ಯಾಟ್‌ಫಾರ್ಮ್‌ಗಳಲ್ಲೂ ಜಾಗ ಸಿಗಲ್ಲ.