ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳಿಂದ ಯಾವಾಗ ರಿಟೈರ್ ಆಗ್ತಾರೆ? ಈ ಪ್ರಶ್ನೆಗೆ ಅಕ್ಕಿ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಮ್ಮ ರಿಟೈರ್ಮೆಂಟ್ ಬಗ್ಗೆ ಅಕ್ಷಯ್ ಹೇಳಿದ್ದೇನು? ಇಲ್ಲಿದೆ ಪೂರ್ತಿ ಡೀಟೇಲ್ಸ್.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದ್ಯ ತಮ್ಮ ಹೊಸ ಕಾಮಿಡಿ ಸಿನಿಮಾ 'ವೆಲ್ಕಮ್ ಟು ದ ಜಂಗಲ್' ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಗುರುವಾರ ಈ ಚಿತ್ರದ ಅದ್ದೂರಿ ಟ್ರೇಲರ್ ರಿಲೀಸ್ ಆಗಿದೆ. 4.10 ನಿಮಿಷದ ಈ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ, ಸಿನಿಮಾದ ಟ್ರೇಲರ್ ನೋಡಿ ಹಲವು ಫ್ಯಾನ್ಸ್ ಗೊಂದಲಕ್ಕೀಡಾಗಿದ್ದಾರೆ. ಯಾಕಂದ್ರೆ, ಈ ಸಿನಿಮಾದಲ್ಲಿ ಅಕ್ಷಯ್ ಜೊತೆ ಸುಮಾರು 30 ಸ್ಟಾರ್‌ಗಳು ನಟಿಸುತ್ತಿದ್ದಾರೆ. ಈ ನಡುವೆ, ಮುಂಬೈನಲ್ಲಿ ನಡೆದ ಗ್ರ್ಯಾಂಡ್ ಟ್ರೇಲರ್ ಲಾಂಚ್ ಕಾರ್ಯಕ್ರಮದ ವಿಡಿಯೋ ಒಂದು ವೈರಲ್ ಆಗ್ತಿದೆ. ಇದರಲ್ಲಿ ಅಕ್ಷಯ್ ಕುಮಾರ್ ತಮ್ಮ ರಿಟೈರ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ತಮ್ಮ ರಿಟೈರ್ಮೆಂಟ್ ಬಗ್ಗೆ ಅಕ್ಷಯ್ ಹೇಳಿದ್ದೇನು?
ಗುರುವಾರ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ 'ವೆಲ್ಕಮ್ ಟು ದ ಜಂಗಲ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರದ ಬಹುತೇಕ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಈ ವೇಳೆ, ಪತ್ರಕರ್ತರು ಅಕ್ಷಯ್ ಕುಮಾರ್ ಬಳಿ, 'ನೀವು ಸಿನಿಮಾಗಳಿಂದ ಯಾವಾಗ ರಿಟೈರ್ಮೆಂಟ್ ತೆಗೆದುಕೊಳ್ಳುತ್ತೀರಿ?' ಎಂದು ಪ್ರಶ್ನಿಸಿದರು. ಅದಕ್ಕೆ ಅಕ್ಷಯ್, 'ನಾನು ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತೇನೆ. ಐದು ಸೆಕೆಂಡ್ ಆದ್ಮೇಲೆ, ಶೂಟಿಂಗ್‌ನಲ್ಲಿ ಜನ ಕಾಯ್ತಾ ಇರ್ತಾರೆ ಅನ್ನೋದು ನೆನಪಾಗುತ್ತೆ.
ಹೀಗೆ ಯೋಚನೆ ಮಾಡ್ತಾನೇ 36 ವರ್ಷ ಕಳೆದುಹೋಗಿದೆ. ಒಂದು ವೇಳೆ ನಾನು ರಿಟೈರ್ಮೆಂಟ್ ತಗೊಂಡ್ರೆ, ಎಲೆಕ್ಟ್ರಿಷಿಯನ್, ಡಾಕ್ ವರ್ಕರ್ ಅಥವಾ ಮನೆ ಕೆಲಸ ಮಾಡ್ಬೇಕಾಗುತ್ತೆ. ಅದಕ್ಕಿಂತ ಕೆಲಸ ಮಾಡೋದೇ ಒಳ್ಳೇದು' ಎಂದು ಉತ್ತರಿಸಿದರು. 'ಮನೆಯವರ ಜೊತೆ ಸಮಯ ಕಳೆಯಬೇಕು ಅನಿಸಲ್ವಾ?' ಎಂದು ಕೇಳಿದಾಗ, 'ನಾನು ಪ್ರಯತ್ನ ಮಾಡಿದ್ದೀನಿ. ಆದರೆ, 'ಅಪ್ಪಾ, ನೀವು ಮತ್ತೆ ಯಾವಾಗ ಕೆಲಸಕ್ಕೆ ಹೋಗ್ತೀರಾ?' ಅಂತ ಮಕ್ಕಳೇ ಕೇಳ್ತಾರೆ' ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ವೆಲ್ಕಮ್ ಟು ದ ಜಂಗಲ್' ಯಾವಾಗ ರಿಲೀಸ್?
'ವೆಲ್ಕಮ್ ಟು ದ ಜಂಗಲ್' ಸಿನಿಮಾ ಜೂನ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಸುಮಾರು 30 ಕಲಾವಿದರು ನಟಿಸುತ್ತಿದ್ದಾರೆ. ಅವರಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಡೆ, ಅಫ್ತಾಬ್ ಶಿವದಾಸಾನಿ, ಜಾಕಿ ಶ್ರಾಫ್, ದಲೇರ್ ಮೆಹಂದಿ, ರವೀನಾ ಟಂಡನ್, ಲಾರಾ ದತ್ತಾ, ಜಾಕ್ವೆಲಿನ್ ಫರ್ನಾಂಡೀಸ್, ದಿಶಾ ಪಟಾನಿ, ಊರ್ವಶಿ ರೌಟೇಲಾ, ಫರಿದಾ ಜಲಾಲ್, ಕೃಷ್ಣ ಅಭಿಷೇಕ್, ಮುಖೇಶ್ ತಿವಾರಿ, ಯಶ್‌ಪಾಲ್ ಶರ್ಮಾ, ವಿಂದು ದಾರಾ ಸಿಂಗ್, ಕಿರಣ್ ಕುಮಾರ್, ಜಾಕಿರ್ ಹುಸೇನ್, ದಿವಂಗತ ಪಂಕಜ್ ಧೀರ್, ಪುನೀತ್ ಇಸ್ಸಾರ್, ಕಿಕು ಶಾರ್ದಾ, ಫಿರೋಜ್ ಖಾನ್, ಸುದೇಶ್ ಬೆರ್ರಿ, ಮತ್ತು ವೃಹಿ ಕೊಡವರ ಇದ್ದಾರೆ. 'ವೆಲ್ಕಮ್ ಟು ದ ಜಂಗಲ್' ಚಿತ್ರವು 'ವೆಲ್ಕಮ್' ಫ್ರಾಂಚೈಸಿಯ ಮೂರನೇ ಭಾಗವಾಗಿದೆ. ಇದರ ಹಿಂದಿನ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿದ್ದವು. ಮೊದಲ ಭಾಗ 2007ರಲ್ಲಿ ಮತ್ತು ಎರಡನೇ ಭಾಗ 2015ರಲ್ಲಿ ಬಿಡುಗಡೆಯಾಗಿತ್ತು.


