ಮುಂಬೈ (ಆ. 28): ದುಬಾರಿ ಕಾರು ರೋಲ್ಸ್ ರಾಯ್ಸ್ ಕಾರು ಹೊಂದಿರುವವರ ಕ್ಲಬ್ ಗೆ ನಟ ಅಜಯ್ ದೇವಗನ್ ಸೇರಿದ್ದಾರೆ. 

6.95 ಕೋಟಿ ರೂ ವೆಚ್ಚದ ರೋಲ್ಸ್ ರಾಯ್ಸ್ ಕಾರನ್ನು ಅಜಯ್ ದೇವಗನ್ ಖರೀದಿಸಿದ್ದಾರೆ. ಈ ಮೂಲಕ ಬಿಲಿಯನೇರ್ ಉದ್ಯಮಿಗಳಾದ ಮುಕೇಶ್ ಅಂಬಾನಿ, ಟಿ- ಸೀರಿಸ್ ಮೊಘುಲ್ ಭೂಷಣ್ ಕುಮಾರ್ ಸಾಲಿಗೆ ಅಜಯ್ ಸೇರಿದ್ದಾರೆ. 

ಅಜಯ್ ದೇವಗನ್‌ಗೆ ಜೋಡಿಯಾಗಲು ಬಾಲಿವುಡ್‌ಗೆ ಹಾರಿದ ಕನ್ನಡದ ’ಪೊರ್ಕಿ’ ಹುಡುಗಿ!

ಈಗಾಗಲೇ ಅಜಯ್, ಲ್ಯಾಂಡ್ ರೋವರ್ ರೇಂಜ್ ರೋವರ್, ಬಿಎಂಡಬ್ಲೂ 5 ಸೀರಿಸ್, ಮರ್ಸಿಡೆಸ್ ಬೆಂಜ್ S- class, ಆಡಿ Q7, ವೋಲ್ವೋ XC90, ಟಯೋಟಾ ಸೆಲಿಕಾ ಕಾರುಗಳ ಮಾಲಿಕರಾಗಿದ್ದಾರೆ. ಭಾರತದಲ್ಲಿ ಮಸೇರಾತಿ ಕಾರನ್ನು ಮೊದಲು ತೆಗೆದುಕೊಂಡಿದ್ದು ಇವರೇ. ಕಾಫಿ ವಿತ್ ಕರಣ್ ನಲ್ಲಿ ಆಡಿ SS ಕಾರನ್ನು ಈ ವರ್ಷ ಗೆದ್ದಿದ್ದರು. 

ಪತ್ನಿಗೆ ತಮಾಷೆ ಮಾಡುವುದನ್ನು ಅಜಯ್ ದೇವಗನ್ ನೋಡಿ ಕಲಿಯಬೇಕು!

ಭಾರತೀಯ ಸೆಲಬ್ರಿಟಿಗಳಲ್ಲಿ ಅಮಿತಾಬಚ್ಚನ್, ಅಕ್ಷಯ್ ಕುಮಾರ್, ಚಿರಂಜೀವಿ, ಆದಿ ಗೋದ್ರೆಜ್ ಬಳಿ ರೋಲ್ಸ್ ರೋಯ್ಸ್ ಕಾರುಗಳಿವೆ.