ಸೌತ್ ಇಂಡಿಯನ್ ಮೋಸ್ಟ್ ಬ್ಯುಟಿಫುಲ್ ನಟಿ ಪ್ರಣೀತಾ ಸುಭಾಷ್ ತಮಿಳು, ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಹವಾ ಮೂಡಿಸಿದವರು. ಇದೀಗ ಬಾಲಿವುಡ್ ನಲ್ಲಿಯೂ ಹವಾ ಮೂಡಿಸಲು ಹೊರಟಿದ್ದಾರೆ. 

ಪ್ರಣೀತಾ ಸುಭಾಷ್ ಅಜಯ್ ದೇವಗನ್ ಜೊತೆ ಭುಜ್- ದಿ ಪ್ರೈಡ್ ಆಫ್ ಇಂಡಿಯಾ ಎನ್ನುವ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ದೇಶಭಕ್ತಿ ಆಧಾರಿತ ಸಿನಿಮಾವಾಗಿದೆ. 

ತಮಿಳಿನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ... ಕಾರ್ತಿನೂ ಪುಲ್ ಅಪ್‌ಸೆಟ್

‘ನನಗೆ ಬಹಳ ಹಿಂದೆಯೇ ಬಾಲಿವುಡ್ ನಿಂದ ಆಫರ್ ಬಂದಿತ್ತು. ಆದರೆ ಒಳ್ಳೆಯ ಕಥೆಗಾಗಿ, ಸಿನಿಮಾಗಾಗಿ ಕಾಯುತ್ತಿದ್ದೆ. ಅಜಯ್ ದೇವಗನ್ ನಂತಹ ಒಳ್ಳೆಯ ನಟನೊಂದಿಗೆ ನಟಿಸುವುದಕ್ಕಿಂತ ಒಳ್ಳೆಯ ಅವಕಾಶ ಬೇರೇನಿದೆ? ನಾನು ಅಜಯ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಸಾಂಪ್ರದಾಯಿಕ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಪ್ರಣೀತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಭುಜ್ - ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ಅಜಯ್ ದೇವಗನ್, ಪ್ರಣೀತಾ ಜೊತೆ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ರಾಣಾ ದಗ್ಗುಬಾಟಿ, ಪರಿಣೀತಿ ಚೋಪ್ರಾ ಹಾಗೂ ಆ್ಯಮಿ ವಿರ್ಕ್ ನಟಿಸಲಿದ್ದಾರೆ. ಅಭಿಷೇಕ್ ದುದೈಯ್ಯಾ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 

600 ರೂ. ಸೀರೆಯಲ್ಲಿ ಮಿಂಚಿದ ಕಂಗನಾರ ಹ್ಯಾಂಡ್‌ಬ್ಯಾಗ್‌ ಹಿಡಿದು ಜಗ್ಗಿದ್ರು!

1971 ರಲ್ಲಿ ಇಂಡೋ- ಪಾಕ್ ವಾರ್ ಸಂದರ್ಭದಲ್ಲಿ ಭುಜ್ ಏರ್ ಪೋರ್ಟ್ ನಲ್ಲಿ ವಿಂಗ್ ಕಮಾಂಡರ್ ಆಗಿದ್ದ ವಿಜಯ್ ಕಾರ್ಣಿಕ್ ಪಾತ್ರವನ್ನು ನಿರ್ವಹಿಸಲಿದ್ದಾರೆ.