ಡಿಡಿಎಲ್ ಜೆ ಸುಂದರಿ ಕಾಜೋಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತಡೇ ದಿನ ಕಾಜೋಲ್ ರಿಲಾಕ್ಸಿಂಗ್ ಮೂಡ್ ನಲ್ಲಿದ್ದಾರೆ. ಪತ್ನಿ ಕೂಲ್ ಕೂಲಾಗಿ ರಿಲ್ಯಾಕ್ಸಿಂಗ್ ಮಾಡ್ತಾ ಇರುವುದನ್ನು ನೋಡಿ ಅಜಯ್ ಕಾಲೆಳೆದಿದ್ದಾರೆ. 

ಕಾಜೋಲ್ ಫೋಟೋ ಶೇರ್ ಮಾಡಿ, ನೀನು ಈಗಲೇ ಚಂದ ಇದ್ದೀಯಾ. ಇನ್ನೂ ಸೌಂದರ್ಯ ಹೆಚ್ಚಿಸಿಕೊಳ್ಳಲು ನಿದ್ದೆ ಮಾಡುವ ಅಗತ್ಯವಿಲ್ಲ, ಎದ್ದೇಳು ಸಾಕು ಎಂದು ಕಿಚಾಯಿಸಿದ್ದಾರೆ. 

 

ಅದಕ್ಕೆ ಕಾಜೋಲ್ ಸರಿಯಾಗಿಯೇ ಉತ್ತರಿಸಿದ್ದಾರೆ. ಇಂದು ಸ್ಕೂಲ್ ಇಲ್ಲ. ಇವತ್ತು ಎಲ್ಲಾ ಕಡೆ ರಜೆ ಇದೆ ಎಂದಿದ್ದಾರೆ. 

ವಿಶೇಷವೆಂದರೆ ಅಜಯ್ ದೇವಗನ್, ಬರ್ತಡೇ ಅಂತ ಹೇಳಿಲ್ಲ. ವಿಶ್ ಕೂಡಾ ಮಾಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಕಾಜಲ್ ಗೆ ವಿಶ್ ಮಾಡೋದನ್ನ ಮರೆತಿಲ್ಲ.